Tag: Ksp job

  • ಪೊಲೀಸ್ ಇಲಾಖೆಯಲ್ಲಿ 250 ಅನುಯಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಎಸ್ ಎಸ್ ಎಲ್ ಸಿ ಪಾಸಾದವರಿಗೆ ಮೊದಲ ಆದ್ಯತೆ

    ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆಗಳಲ್ಲಿ ಖಾಲಿಯಿರುವ ಅನುಯಾಯಿ (ಪುರುಷ) ( ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ ಕುರಿತು ಅಧಿಸೂಚನೆಯನ್ನು ಪ್ರಕಟಿಸಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 30-07-2021 ಬೆಳಿಗ್ಗೆ 10.00 ಗಂಟೆಯಿಂದ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-08-2021 ಸಂಜೆ 06.00 ಗಂಟೆಯವರೆಗೆ
    ಅಧಿಕೃತ ಬ್ಯಾಂಕ್ ಶಾಖೆಗಳ/ ಅಂಚೆ ಕಚೇರಿ ವೇಳೆಯಲ್ಲಿ ಶು ಪಾವತಿಸಲು ಕೊನೆಯ ದಿನಾಂಕ : 01-09-2021

    ಹುದ್ದೆಗಳ ವಿವರ : ಕರ್ನಾಟಕ ರಾಜ್ಯ ಪೊಲೀಸ್ ಪಡೆಗಳಲ್ಲಿ ನೇರ ನೇಮಕಾತಿಯಡಿ ಖಾಲಿಯಿರುವ ಅನುಯಾಯಿ( ಪುರುಷ) ಹುದ್ದೆಗಳ ವಿವರ :

    ಅಡುಗೆಯವರು – 81 ಹುದ್ದೆಗಳು
    ಕ್ಷೌರಿಕ – 45 ಹುದ್ದೆಗಳು
    ಧೋಭಿ – 53 ಹುದ್ದೆಗಳು
    ಕಸ ಗುಡಿಸುವವರು- 58 ಹುದ್ದೆಗಳು
    ನೀರು ತರುವವರು- 13 ಹುದ್ದೆಗಳು

    ಒಟ್ಟು ಹುದ್ದೆ ಸಂಖ್ಯೆ- 250

    ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕದಂದು ಅಂದರೆ 30-08-2021 ರಂದು ಅಭ್ಯರ್ಥಿಗೆ ಕನಿಷ್ಠ 18 ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

    ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ – ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 35 ವರ್ಷ, ಇತರೆ ಅಭ್ಯರ್ಥಿಗಳಿಗೆ 30 ವರ್ಷ.

    ವಿದ್ಯಾರ್ಹತೆ : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ( ವೃಂದ ಮತ್ತು ನೇಮಕಾತಿ) ನಿಯಮ 2020 ರ ಪ್ರಕಾರ ಅನುಯಾಯಿ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 30-08-2021ಕ್ಕೆ ಹೊಂದಿರಬೇಕು.

    ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ, ಪ್ರವರ್ಗ 2 ( ಎ), 2 (ಬಿ), 3 (ಎ), 3( ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.250/-, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/-

    ನಿಗದಿತ ಶುಲ್ಕವನ್ನು ನಗದು/ ಆನ್ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಯಲ್ಲಿ ಅಥವಾ ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಶಾಖೆಯಲ್ಲಿ ಪಾವತಿಸಿ ನಂತರ ಚಲನ್ ನ ಅಭ್ಯರ್ಥಿ ಪ್ರತಿಯನ್ನು ಇಟ್ಟುಕೊಂಡಿರತಕ್ಕದ್ದು.

    ಅರ್ಜಿಗಳನ್ನು ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://recruitment.ksp.gov.in ನಲ್ಲಿ ಆನ್ಲೈನ್ ಮೂಲಕ ಮಾತ್ರ ಸಲ್ಲಿಸತಕ್ಕದ್ದು.

    ನೋಟಿಫಿಕೇಶನ್

  • 3533 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ ( ನಾಗರಿಕ ) ( ಪುರುಷ ಮತ್ತು ಮಹಿಳಾ) ( ಮಿಕ್ಕುಳಿದ ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ( ಸ್ಥಳೀಯ ) ಹುದ್ದೆಗಳನ್ನು ಒಳಗೊಂಡಂತೆ 3533 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಅವಧಿ ಜು.12 ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://recruitment.ksp.gov.in ನ್ನು ಸಂಪರ್ಕಿಸಬಹುದು. ಆಸಕ್ತರು ಜೂ.25 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಇದೀಗ ಜು.12 ರವರೆಗೆ ವಿಸ್ತರಿಸಲಾಗಿದೆ ಎಂದು ಪೊಲೀಸ್ ನೇಮಕಾತಿ ವಿಭಾಗದ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಮೃತ್ ಪಾಲ್ ತಿಳಿಸಿದ್ದಾರೆ.

  • KSP : 402 ಸಿವಿಲ್ ಪಿಎಸ್ಐ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಸಿವಿಲ್) ( ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ( ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಯ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಸದರಿ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿ 22.06.2021 ಸಂಜೆ 06.00 ಗಂಟೆಯವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ : 24.06.2021 ಕ್ಕೆ ನಿಗದಿಪಡಿಸಲಾಗಿತ್ತು.

    ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಆಡಳಿತಾತ್ಮಕ ಕಾರಣಗಳಿಂದ ಹಾಗೂ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲು ತೀರ್ಮಾನಿಸಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 22-06-2021 ರಿಂದ 07-07-2021 ರವರೆಗೆ ವಿಸ್ತರಿಸಲಾಗಿದೆ.

    ಅಧಿಸೂಚನೆ ದಿನಾಂಕ : 03.03.2021 ರಲ್ಲಿ ಈಗಾಗಲೇ ನಿಗದಿಪಡಿಸಿರುವಂತೆ ದಿನಾಂಕ 03.05.2021 ನ್ನೇ ವಯೋಮಿತಿಯ ಕೊನೆಯ ದಿನಾಂಕವನ್ನಾಗಿ ಪರಿಗಣಿಸಲಾಗುವುದು. ಆದರೆ ಜಾತಿ ಮತ್ತು ಆದಾಯ ಮೀಸಲಾತಿ ಹಾಗೂ ಇತರೆ ದಾಖಲೆಗಳಿಗೆ ವಿಸ್ತರಿಸಿದ ದಿನಾಂಕವಾದ 07.07.2021 ನ್ನು ಕೊನೆಯ ದಿನಾಂಕವಾಗಿ ಪರಿಗಣಿಸಲಾಗುವುದು. ಉಳಿದಂತೆ ಸದರಿ ಅಧಿಸೂಚನೆಯಲ್ಲಿ ನೀಡಲಾಗಿರುವ ಇತರೆ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

  • ಜುಲೈ 5 ರಿಂದ ಪಿಎಸ್ ಐ ಹುದ್ದೆಗಳಿಗೆ ET, PST ಪರೀಕ್ಷೆ

    ಕರ್ನಾಟಕ ಸಿವಿಲ್ ಪಿಎಸ್ ಐ (ಪುರುಷ ಮತ್ತು ಮಹಿಳಾ ) ಹಾಗೂ ( ಸೇವಾನಿರತ) ಹುದ್ದೆಗಳ ನೇಮಕಾತಿ ಸಲುವಾಗಿ ಜುಲೈ 05 ರಿಂದ ಸಹಿಷ್ಣುತೆ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ತಾತ್ಕಾಲಿಕವಾಗಿ ‌ನಡೆಸಲು ನಿರ್ಧರಿಸಲಾಗಿದೆ.

    402 ಹುದ್ದೆಗಳಿಗೆ ನೇಮಕ ಪ್ರಕ್ರಿಯೆಗಳನ್ನು ಕರ್ನಾಟಕ ಪೊಲೀಸ್ ಇಲಾಖೆಯು ಪ್ರಾರಂಭಿಸಿದೆ. ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ನಿಯಮಾನುಸಾರ ದೈಹಿಕ ಸಹಿಷ್ಣುತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಜುಲೈ 05 ರಿಂದ ಪ್ರಾರಂಭಿಸಲು ನಿರ್ಧಾರ ಮಾಡಿದೆ.

    ಇದಕ್ಕಾಗಿ ಅಧಿಕಾರಿಗಳು ಅಗತ್ಯ ಮೈದಾನ ಮತ್ತು ಇತರೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಪೊಲೀಸ್ ಮಹಾ ನಿರೀಕ್ಷಕರವರ ಕಚೇರಿ ಪ್ರಕಟಣೆ ಹೊರಡಿಸಿದೆ.

  • ಸಶಸ್ತ್ರ ಮೀಸಲು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ಆಯ್ಕೆ ಪಟ್ಟಿ ಬಿಡುಗಡೆ

    ಕರ್ನಾಟಕ ಪೊಲೀಸ್ ಇಲಾಖೆಯು 2019 ನೇ ಸಾಲಿನ ಸಶಸ್ತ್ರ ಮೀಸಲು ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 5 ನೇ ತತ್ಕಾಲಿಕ ಆಯ್ಕೆಪಟ್ಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೆಎಸ್‌ಪಿ ವೆಬ್‌ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

    ಜುಲೈ 2019 ರಂದು ಪೊಲೀಸ್ ಇಲಾಖೆಯ 40 ಸಶಸ್ತ್ರ ಮೀಸಲು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ನೇಮಕಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿತ್ತು. 2020 ರ ಜನವರಿ 19 ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ನೇಮಕ ಪ್ರಕ್ರಿಯೆ ಮುಗಿದ ನಂತರ ಈಗ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

    ಈ ಆಯ್ಕೆ ಪಟ್ಟಿಯು ನಿಯಮಗಳನುಸಾರ ರಚಿಸಿರುವ ವೈದ್ಯಕೀಯ ಮಂಡಳಿಯು ನಡೆಸುವ ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳಿಗೆ ಒಳಪಟ್ಟಿರುವುದರಿಂದ ಆಯ್ಕೆ ಪಟ್ಟಿಯಲ್ಲಿ ಹೆಸರು ಇದ್ದ ಕಾರಣದಿಂದ ಸದರಿಯವರಿಗೆ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ರೀತಯ ಕಾನೂನಾತ್ಮಕ ಹಕ್ಕು ಇರುವುದಿಲ್ಲ.

    ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತಾತ್ಕಾಲಿಕ ಆಯ್ಕೆ ಪಟ್ಟಿ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

  • 402 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 402 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್), (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ( ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಖಾಲಿ ಹುದ್ದೆಗಳ ನೇರ ನೇಮಕಾತಿ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತು‌.

    ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15-06-2021 ಸಂಜೆ 06:00 ಗಂಟೆಯವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾ ಅಥವಾ ಸ್ಥಳೀಯ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ 17-06-2021 ಕ್ಕೆ ನಿಗದಿಪಡಿಸಲಾಗಿತ್ತು.

    ಪ್ರಸ್ತುತ ರಾಜ್ಯದಲ್ಲಿನ ಲಾಕ್ ಡೌನ್ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಆಡಳಿತಾತ್ಮಕ ಕಾರಣಗಳಿಂದ ಹಾಗೂ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲು ತೀರ್ಮಾನಿಸಿ, ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 15-06-2021 ರಿಂದ 22-06-2021 ರವರೆಗೆ ಮತ್ತು ಶುಲ್ಕವನ್ನು ಅಧಿಕೃತ ಬ್ಯಾಂಕ್ ಅಥವಾ ಸ್ಥಳೀಯ ಅಂಚೆ ಕಚೇರಿಗಳ ವೇಳೆಯಲ್ಲಿ ಪಾವತಿಸುವ ದಿನಾಂಕವನ್ನು 17-06-2021 ರಿಂದ 24-06-2021 ರವರೆಗೆ ವಿಸ್ತರಿಸಲಾಗಿದೆ.