Tag: KPSC Recruitment

  • KPSC Jobs: 76 ಮೋಟಾರು ವೆಹಿಕಲ್‌ ಇನ್ಸ್‌ಪೆಕ್ಟರ್‌ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ ಮಾಡಿದ ಕೆಪಿಎಸ್‌ಸಿ

    KPSC Jobs: 76 ಮೋಟಾರು ವೆಹಿಕಲ್‌ ಇನ್ಸ್‌ಪೆಕ್ಟರ್‌ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟ ಮಾಡಿದ ಕೆಪಿಎಸ್‌ಸಿ

    KPSC Jobs: ಕರ್ನಾಟಕ ಲೋಕಸೇವಾ ಆಯೋಗವು ಸಾರಿಗೆ ಇಲಾಖೆಯಲ್ಲಿನ ಗ್ರೂಪ್‌ ಸಿ ವೃಂದದ ಮೋಟಾರು ವಾಹನ ನಿರೀಕ್ಷಕರು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿತ್ತು. ಒಟ್ಟು 76 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿತ್ತು. ಈ ಹುದ್ದೆಗೆ ಎ.22 ರಿಂದ ಮೇ.21ರವರೆಗೆ ಅರ್ಜಿ ಸಲ್ಲಿಕೆಗೆ ದಿನಾಂಕ ಗೊತ್ತು ಮಾಡಿತ್ತು. ಆದರೆ ಕಾರಣಾಂತರಗಳಿಂದ ಕೆಪಿಎಸ್‌ಸಿ ಇದೀಗ ಅರ್ಜಿ ಸಲ್ಲಿಕೆಯ ದಿನವನ್ನು ವಿಸ್ತರಣೆ ಮಾಡಿ, ಪರಿಷ್ಕೃತ ವೇಳಾಪಟ್ಟಿ ಪ್ರಕಟ ಮಾಡಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02-05-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-06-2024
    ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: 01-06-2024

    ಹುದ್ದೆಗಳ ಕುರಿತ ವಿವರ ಇಲ್ಲಿದೆ
    ಇಲಾಖೆಯ ಹೆಸರು : ಸಾರಿಗೆ ಇಲಾಖೆ
    ಹುದ್ದೆ: ಉಳಿಕೆ ಮೂಲ ವೃಂದದ ಗ್ರೂಪ್‌ ಸಿ ಹುದ್ದೆಗಳು (70), ಗ್ರೂಪ್‌ ಸಿ ಹುದ್ದೆಗಳು (6)
    ಹುದ್ದೆಗಳ ಸಂಖ್ಯೆ: 76
    ಹುದ್ದೆಯ ಹೆಸರು: ಮೋಟಾರು ವಾಹನ ನಿರೀಕ್ಷಕರು

    ಅರ್ಜಿ ಶುಲ್ಕ:
    ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600, ಪ್ರವರ್ಗ 2ಎ,2ಬಿ,3ಎ,3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.

    ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ:
    ಕನ್ನಡ ಭಾಷಾ ಪರೀಕ್ಷೆ/ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಗವು ನಿಗದಿಪಡಿಸುವ ಯಾವೇ ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು ಹಾಗೂ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಆಯ್ಕೆಯ ಅವಕಾಶವಿರುವುದಿಲ್ಲ.

    ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಗಳು ಆಯಾ ಹುದ್ದೆಗಳ ಮುಂದೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
    ಮೂರು ವರ್ಷಗಳ ಅವಧಿಯ ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಹೊಂದಿರಬೇಕು ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯು ನೀಡುವ ಮೂರು ವರ್ಷಗಳ ಅವಧಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರಬೇಕು;
    ನಿಗದಿಪಡಿಸಿರುವ ವಿದ್ಯಾರ್ಹತೆಯ ಅಂಕಪಟ್ಟಿ/ ಪ್ರಮಾಣ ಪತ್ರ / ಘಟಿಕೋತ್ಸವ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಅಪ್‌ಲೋಡ್‌ ಮಾಡಬೇಕು. ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದದೆ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿದ್ದರೂ ಪರಿಗಣಿಸಲಾಗುವುದಿಲ್ಲ.
    ವೇತನ ಶ್ರೇಣಿ: ರೂ.33,450-ರೂ.62,600/- ವೇತನ ನಿಗದಿಪಡಿಸಲಾಗಿದೆ.
    ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ ಸಾಮಾನ್ಯ ಅರ್ಹತೆ -35 ವರ್ಷ ನಿಗದಿಪಡಿಸಲಾಗಿದೆ. ಪ್ರವರ್ಗ 2(ಎ),2(ಬಿ),3(ಎ),3(ಬಿ)-38 ವರ್ಷ, ಪ.ಜಾ/ಪ.ಪಂ/ಪ್ರವರ್ಗ1-40 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.

    ಪರಿಷ್ಕೃತ ವೇಳಾಪಟ್ಟಿಯ ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • ಫೆ.28 ರ ಎಫ್ ಡಿ ಎ ಪರೀಕ್ಷೆ ಗೆ ಗುರುತಿನ ಚೀಟಿ ಕಡ್ಡಾಯ : ಇಲ್ಲಿದೆ ಹೆಚ್ಚಿನ ವಿವರ

    ಫೆ.28 ರ ಎಫ್ ಡಿ ಎ ಪರೀಕ್ಷೆ ಗೆ ಗುರುತಿನ ಚೀಟಿ ಕಡ್ಡಾಯ : ಇಲ್ಲಿದೆ ಹೆಚ್ಚಿನ ವಿವರ

    ಫೆಬ್ರವರಿ 28 ರಂದು ನಡೆಯುವ ಎಫ್ ಡಿ ಎ ಪರೀಕ್ಷೆಗೆ ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ಕಡ್ಡಾಯವಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ‌ ಭಾವಚಿತ್ರವಿರುವ ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ, ಪಾಸ್‌ಪೋರ್ಟ್‌, ಸರ್ಕಾರಿ ನೌಕರರ ಐಡಿ ಇವುಗಳಲ್ಲಿ ಯಾವುದಾದರು ಒಂದನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

    ಬಾಗಲಕೋಟೆ ಜಿಲ್ಲೆಯಲ್ಲಿ46 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 18,487 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಾಗಲಕೋಟೆಯಲ್ಲಿ 33 ಪರೀಕ್ಷಾ ಕೇಂದ್ರಗಳಲ್ಲಿ 12,968 ವಿದ್ಯಾರ್ಥಿಗಳು , ಜಮಖಂಡಿ ಯ 12 ಕೇಂದ್ರಗಳಲ್ಲಿ 5016 ಅಭ್ಯರ್ಥಿಗಳು, ಮುಧೋಳ 1 ಪರೀಕ್ಷಾ ಕೇಂದ್ರಗಳಲ್ಲಿ 503 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ನಡೆಯುವ ಒಂದು ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಹಾಜರಿರಬೇಕು. ಪರೀಕ್ಷೆ ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯಲಿದೆ. ಬೆಳಗ್ಗೆ 9.50 ರ ನಂತರ, ಮಧ್ಯಾಹ್ನ ‌1.50 ರ ನಂತರ ಬರುವ ಅಭ್ಯರ್ಥಿಗಳಿಗೆ ಪ್ರವೇಶವಿಲ್ಲ. ಪರೀಕ್ಷೆಗೆ ಮೊಬೈಲ್ ಫೋನ್ ಹಾಗೂ ಇತರ ಎಲೆಕ್ಟ್ರಿಕ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅವುಗಳನ್ನು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಇಡಲು ಅವಕಾಶ ವಿದೆ.

    ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಯನ್ನು ಸ್ಯಾನಿಟೈಝ್ ಮಾಡಲಾಗುತ್ತದೆ. ಪರೀಕ್ಷೆಗೆ ಬರುವ ಅಭ್ಯರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಹಾಗೂ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.

    ಫೆಬ್ರವರಿ 28 ರಂದು ಎಫ್‍ಡಿಎ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 10 – 11.30 ವರೆಗೆ ಸಾಮಾನ್ಯ ಜ್ಞಾನ, ಮಧ್ಯಾಹ್ನ 2 – 3.30 ವರೆಗೆ ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್ ವಿಷಯಗಳ ಪರೀಕ್ಷೆ ನಡೆಯಲಿದೆ.

  • KPSC ಪ್ರವೇಶ ಪತ್ರ ದಿನಾಂಕ ಪ್ರಕಟ

    ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ ಫೆಬ್ರವರಿ 13,2021 ರಿಂದ 16ಫೆಬ್ರವರಿ,2021 ರವರೆಗೆ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಗ ಗ್ರೂಪ್ ಎ ಹಾಗೂ ಗ್ರೂಪ್ ಬಿ 106 ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇದರ ವೇಳಾಪಟ್ಟಿಯನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿದೆ.http://kpsc.kar.nic.in ನಲ್ಲಿ ಮಾಹಿತಿಗಳು ಇದೆ.
    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಯ್ಯೂಸರ್ ನೇಮ್ ಪಾಸ್ ವರ್ಡ್ ನ್ನು ಉಪಯೋಗಿಸಿಕೊಂಡು ಪ್ರವೇಶ ಪತ್ರವನ್ನು 06.02.2021 ರಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

  • ಕರ್ನಾಟಕ ಲೋಕಸೇವಾ ಆಯೋಗವು 2017-18 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

    ಕರ್ನಾಟಕ ಲೋಕಸೇವಾ ಆಯೋಗವು 2017-18 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ.

    ಗೆಜೆಟೆಡ್ ಪ್ರೊಬೆಷನರಿಗೆ ನಡೆಸಲಾಗುವ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ.

    ಅರ್ಹತಾ ಪತ್ರಿಕೆಗಳಾದ ಕನ್ನಡ, ಇಂಗ್ಲೀಷ್ ಕ್ರಮವಾಗಿ ದಿನಾಂಕ 13-02-2021 ರಂದು ಬೆಳಗ್ಗೆ ಸಮಯ 10 ರಿಂದ 12 ಗಂಟೆಯವರೆಗೆ ಹಾಗೇ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ನಡೆಯಲಿದೆ. ಫೆಬ್ರವರಿ 14 ರಂದು ಬೆಳಿಗ್ಗೆ 9 ರಿಂದ 12 ಗಂಟೆವರೆಗೆ ಪತ್ರಿಕೆ-1 (ಪ್ರಬಂಧ) ನಡೆಯಲಿದೆ.
    ಉಳಿದ ಮಾಹಿತಿಗಾಗಿ ಈ ಕೆಳಗಿನ ಪಟ್ಟಿಯಲ್ಲಿ ಮಾಹಿತಿಯನ್ನು ಪಡೆಯಬಹುದು.

  • ಕೆಪಿಎಸ್ಸಿ ಎಫ್‌ಡಿಎ ಲಿಖಿತ ಪರೀಕ್ಷಾ ದಿನಾಂಕ ಪ್ರಕಟ: ಇಲ್ಲಿದೆ ಹೆಚ್ಚಿನ ವಿವರ

    ಕೆಪಿಎಸ್ಸಿ ಎಫ್‌ಡಿಎ ಲಿಖಿತ ಪರೀಕ್ಷಾ ದಿನಾಂಕ ಪ್ರಕಟ: ಇಲ್ಲಿದೆ ಹೆಚ್ಚಿನ ವಿವರ

    ಕರ್ನಾಟಕ ಲೋಕ ಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕರು/ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆಗಳ ನೇಮಕಕ್ಕೆ ನಡೆಸುವ ಲಿಖಿತ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ.

    ದಿನಾಂಕ 31 ಜನವರಿ 2020 ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಧಿ ಸೂಚನೆ ಹೊರಡಿಸಿತ್ತು. ಲಿಖಿತ ಪರೀಕ್ಷೆ ಯು ಜನವರಿ 24, 2021 ರಂದು ನಿಗದಿಪಡಿಸಿ ಕಾರಣಾಂತರಗಳಿಂದ ಮುಂದೂಡಲಾಗಿತ್ತು.

    ಆಯೋಗವು ಈ ಸ್ಪರ್ಧಾತ್ಮಕ ಪರೀಕ್ಷೆ ಯನ್ನು ದಿನಾಂಕ 28 ಫೆಬ್ರವರಿ 2021 (ಭಾನುವಾರ) ರಂದು ನಡೆಸಲಿದೆ.

    ಇದರ ಅಧಿಕೃತ ಪ್ರಕಟಣೆಯನ್ನು ಅಭ್ಯರ್ಥಿಗಳು ಈ ಲಿಂಕ್ ಮೂಲಕ ತಿಳಿದುಕೊಳ್ಳಬಹುದು.

  • Good News, KPSC FDA SDA 2019 Recruitment Started, 844 Posts Read Full Notification in Kannada

    Very Good News For Karnataka FDA SDA Job aspirants. KPSC will recruit First Division Assistant and Second Division Assistant in Karnataka Courts via FDA and SDA Exam. Karnataka Public Service Commission invites aka KPSC invites application from the eligible candidates for the SDA and FDA Posts. The application process, age limit, Qualification, eligibility and other details please read below.

    Where?
    Karnataka Courts
    Number of Posts
    844
    How to Apply?
    Online
    Starting date
    11-02-2019
    Last Date for Apply
    13-03-2019
    Age Limit:
    Minimum  18 years, maximum age the for UR category candidates is 35 years

    Application Fees:
    Read Notification
    Educational Qualifications
    Read Notification
    Official Website Address
    http://www.kpsc.kar.nic.in
    Notification Link:
    http://www.kpsc.kar.nic.in

     How to Apply?: Online

    Starting Date: 11-02-2019

    Last Date: 12-03-2019

    Last date for pay application fees: 13-03-2019

    KPSC Website Address: http://www.kpsc.kar.nic.in

    Number of Posts

    Number of positions SDA  in the Courts of Karnataka (HK & RPC):  494+81 total 574
    Number of FDA Posts: 219+50 = 269

    HK Region: FDA  Posts– 50, SDA  Posts– 81
    RPC Region: FDA – 219 Posts, SDA – 494 Posts
    Total Number of Posts: 844 Posts

    Salary
    Rs.11,600-21,000/-

    How to Apply
    Online

     

    Application Fees