Tag: kpsc exam date

  • ಕೆಪಿಎಸ್ ಸಿ ಪಿಟ್ಟರ್ ಹುದ್ದೆಗಳ ದಾಖಲೆ ಪರಿಶೀಲನೆಗೆ ಆಯ್ಕೆ ಪಟ್ಟಿ ಬಿಡುಗಡೆ

    ಕೆಪಿಎಸ್ ಸಿ ಪಿಟ್ಟರ್ ಹುದ್ದೆಗಳ ದಾಖಲೆ ಪರಿಶೀಲನೆಗೆ ಆಯ್ಕೆ ಪಟ್ಟಿ ಬಿಡುಗಡೆ

    ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್, ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿಗಳಲ್ಲಿನ ಫಿಟ್ಟರ್ ಹುದ್ದೆಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ ಗೆ ಭೇಟಿ ನೀಡಿ ಪರಿಶೀಲಿಸಬಹುದು.

    ಜನ್ಮದಿನಾಂಕ, ರಿಜಿಸ್ಟರ್ ನಂಬರ್, ಹೆಸರು ವಿವರಗಳನ್ನು ಕೆಪಿಎಸ್ ಸಿ ಪಟ್ಟಿಯಲ್ಲಿ ನೀಡಿದೆ. ಆಯೋಗ ನಿಗದಿಪಡಿಸಿದ ದಿನಾಂಕದಂದು ಮೂಲದಾಖಲೆಗಳೊಂದಿಗೆ ಅಭ್ಯರ್ಥಿಗಳು ಹಾಜರಾಗಬೇಕು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಈ ಲಿಂಕ್ ಕ್ಲಿಕ್ ಮಾಡಿ

  • ಫೆ.28 ರ ಎಫ್ ಡಿ ಎ ಪರೀಕ್ಷೆ ಗೆ ಗುರುತಿನ ಚೀಟಿ ಕಡ್ಡಾಯ : ಇಲ್ಲಿದೆ ಹೆಚ್ಚಿನ ವಿವರ

    ಫೆ.28 ರ ಎಫ್ ಡಿ ಎ ಪರೀಕ್ಷೆ ಗೆ ಗುರುತಿನ ಚೀಟಿ ಕಡ್ಡಾಯ : ಇಲ್ಲಿದೆ ಹೆಚ್ಚಿನ ವಿವರ

    ಫೆಬ್ರವರಿ 28 ರಂದು ನಡೆಯುವ ಎಫ್ ಡಿ ಎ ಪರೀಕ್ಷೆಗೆ ಪ್ರವೇಶ ಪತ್ರದ ಜೊತೆಗೆ ಗುರುತಿನ ಚೀಟಿ ಕಡ್ಡಾಯವಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ‌ ಭಾವಚಿತ್ರವಿರುವ ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ, ಪಾಸ್‌ಪೋರ್ಟ್‌, ಸರ್ಕಾರಿ ನೌಕರರ ಐಡಿ ಇವುಗಳಲ್ಲಿ ಯಾವುದಾದರು ಒಂದನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

    ಬಾಗಲಕೋಟೆ ಜಿಲ್ಲೆಯಲ್ಲಿ46 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 18,487 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಾಗಲಕೋಟೆಯಲ್ಲಿ 33 ಪರೀಕ್ಷಾ ಕೇಂದ್ರಗಳಲ್ಲಿ 12,968 ವಿದ್ಯಾರ್ಥಿಗಳು , ಜಮಖಂಡಿ ಯ 12 ಕೇಂದ್ರಗಳಲ್ಲಿ 5016 ಅಭ್ಯರ್ಥಿಗಳು, ಮುಧೋಳ 1 ಪರೀಕ್ಷಾ ಕೇಂದ್ರಗಳಲ್ಲಿ 503 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ನಡೆಯುವ ಒಂದು ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಹಾಜರಿರಬೇಕು. ಪರೀಕ್ಷೆ ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯಲಿದೆ. ಬೆಳಗ್ಗೆ 9.50 ರ ನಂತರ, ಮಧ್ಯಾಹ್ನ ‌1.50 ರ ನಂತರ ಬರುವ ಅಭ್ಯರ್ಥಿಗಳಿಗೆ ಪ್ರವೇಶವಿಲ್ಲ. ಪರೀಕ್ಷೆಗೆ ಮೊಬೈಲ್ ಫೋನ್ ಹಾಗೂ ಇತರ ಎಲೆಕ್ಟ್ರಿಕ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಅವುಗಳನ್ನು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಇಡಲು ಅವಕಾಶ ವಿದೆ.

    ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಯನ್ನು ಸ್ಯಾನಿಟೈಝ್ ಮಾಡಲಾಗುತ್ತದೆ. ಪರೀಕ್ಷೆಗೆ ಬರುವ ಅಭ್ಯರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಹಾಗೂ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.

    ಫೆಬ್ರವರಿ 28 ರಂದು ಎಫ್‍ಡಿಎ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಬೆಳಿಗ್ಗೆ 10 – 11.30 ವರೆಗೆ ಸಾಮಾನ್ಯ ಜ್ಞಾನ, ಮಧ್ಯಾಹ್ನ 2 – 3.30 ವರೆಗೆ ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್ ವಿಷಯಗಳ ಪರೀಕ್ಷೆ ನಡೆಯಲಿದೆ.

  • KPSC ಪ್ರವೇಶ ಪತ್ರ ದಿನಾಂಕ ಪ್ರಕಟ

    ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ ಫೆಬ್ರವರಿ 13,2021 ರಿಂದ 16ಫೆಬ್ರವರಿ,2021 ರವರೆಗೆ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಗ ಗ್ರೂಪ್ ಎ ಹಾಗೂ ಗ್ರೂಪ್ ಬಿ 106 ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇದರ ವೇಳಾಪಟ್ಟಿಯನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಿದೆ.http://kpsc.kar.nic.in ನಲ್ಲಿ ಮಾಹಿತಿಗಳು ಇದೆ.
    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಯ್ಯೂಸರ್ ನೇಮ್ ಪಾಸ್ ವರ್ಡ್ ನ್ನು ಉಪಯೋಗಿಸಿಕೊಂಡು ಪ್ರವೇಶ ಪತ್ರವನ್ನು 06.02.2021 ರಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

  • ಕರ್ನಾಟಕ ಲೋಕಸೇವಾ ಆಯೋಗವು 2017-18 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

    ಕರ್ನಾಟಕ ಲೋಕಸೇವಾ ಆಯೋಗವು 2017-18 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ.

    ಗೆಜೆಟೆಡ್ ಪ್ರೊಬೆಷನರಿಗೆ ನಡೆಸಲಾಗುವ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ.

    ಅರ್ಹತಾ ಪತ್ರಿಕೆಗಳಾದ ಕನ್ನಡ, ಇಂಗ್ಲೀಷ್ ಕ್ರಮವಾಗಿ ದಿನಾಂಕ 13-02-2021 ರಂದು ಬೆಳಗ್ಗೆ ಸಮಯ 10 ರಿಂದ 12 ಗಂಟೆಯವರೆಗೆ ಹಾಗೇ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ನಡೆಯಲಿದೆ. ಫೆಬ್ರವರಿ 14 ರಂದು ಬೆಳಿಗ್ಗೆ 9 ರಿಂದ 12 ಗಂಟೆವರೆಗೆ ಪತ್ರಿಕೆ-1 (ಪ್ರಬಂಧ) ನಡೆಯಲಿದೆ.
    ಉಳಿದ ಮಾಹಿತಿಗಾಗಿ ಈ ಕೆಳಗಿನ ಪಟ್ಟಿಯಲ್ಲಿ ಮಾಹಿತಿಯನ್ನು ಪಡೆಯಬಹುದು.

  • ಕೆಪಿಎಸ್ಸಿ ಎಫ್‌ಡಿಎ ಲಿಖಿತ ಪರೀಕ್ಷಾ ದಿನಾಂಕ ಪ್ರಕಟ: ಇಲ್ಲಿದೆ ಹೆಚ್ಚಿನ ವಿವರ

    ಕೆಪಿಎಸ್ಸಿ ಎಫ್‌ಡಿಎ ಲಿಖಿತ ಪರೀಕ್ಷಾ ದಿನಾಂಕ ಪ್ರಕಟ: ಇಲ್ಲಿದೆ ಹೆಚ್ಚಿನ ವಿವರ

    ಕರ್ನಾಟಕ ಲೋಕ ಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕರು/ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆಗಳ ನೇಮಕಕ್ಕೆ ನಡೆಸುವ ಲಿಖಿತ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಿದೆ.

    ದಿನಾಂಕ 31 ಜನವರಿ 2020 ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ಅಧಿ ಸೂಚನೆ ಹೊರಡಿಸಿತ್ತು. ಲಿಖಿತ ಪರೀಕ್ಷೆ ಯು ಜನವರಿ 24, 2021 ರಂದು ನಿಗದಿಪಡಿಸಿ ಕಾರಣಾಂತರಗಳಿಂದ ಮುಂದೂಡಲಾಗಿತ್ತು.

    ಆಯೋಗವು ಈ ಸ್ಪರ್ಧಾತ್ಮಕ ಪರೀಕ್ಷೆ ಯನ್ನು ದಿನಾಂಕ 28 ಫೆಬ್ರವರಿ 2021 (ಭಾನುವಾರ) ರಂದು ನಡೆಸಲಿದೆ.

    ಇದರ ಅಧಿಕೃತ ಪ್ರಕಟಣೆಯನ್ನು ಅಭ್ಯರ್ಥಿಗಳು ಈ ಲಿಂಕ್ ಮೂಲಕ ತಿಳಿದುಕೊಳ್ಳಬಹುದು.