Tag: Koppala jobs

  • ಕೊಪ್ಪಳದಲ್ಲಿ ಏ.3 ರಂದು ಸಂದರ್ಶನ

    ಕೊಪ್ಪಳದಲ್ಲಿ ಏ.3 ರಂದು ಸಂದರ್ಶನ

    ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಎಪ್ರಿಲ್ 3 ರಂದು ಬೆಳಗ್ಗೆ 10.30ಕ್ಕೆ ವಾಕ್ ಇನ್ ಇಂಟರ್ವ್ಯೂ ನ್ನು ಕೊಪ್ಪಳದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.

    ಇಂಡಿಯನ್ ಮನಿ ಪ್ರೈ.ಲಿ ಹುಬ್ಬಳ್ಳಿ ಅವರು ಭಾಗವಹಿಸಿ ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

    ಈ ಸಂದರ್ಶನದಲ್ಲಿ ಭಾಗವಹಿಸಲು ಅರ್ಜಿ ಶುಲ್ಕವಿರುವುದಿಲ್ಲ. ಎಲ್ಲರಿಗೂ ಉಚಿತ ಪ್ರವೇಶವಿದೆ.

    ಅರ್ಹತೆ : ಪಿಯುಸಿ,ಡಿಪ್ಲೋಮಾ ಮತ್ತು ಯಾವುದೇ ಪದವೀಧರರು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. (ಬಿ. ಇ ಹೊರತುಪಡಿಸಿ)

    ವಯೋಮಿತಿ: 18 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಈ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.

    ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲಾ ಮೂಲ ಪ್ರಮಾಣ ಪತ್ರಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿ, 1 ರಿಂದ 3 ಬಯೋಡೇಟಾ ಪ್ರತಿಗಳು, 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಡಳಿತ ಕೇಂದ್ರ, ಮೊದಲನೇ ಮಹಡಿ, ಕೊಪ್ಪಳ.
    ದೂ.ಸಂಖ್ಯೆ : 08539-220859, 9353515518 ಹಾಗೂ 6364397640 ಸಂಪರ್ಕಿಸಬಹುದು.