Tag: fda

  • KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎಫ್‌ಡಿಎ, ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ವಿವರ

    KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎಫ್‌ಡಿಎ, ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ವಿವರ

    KUWSDB: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇದೀಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಖಾಲಿ ಇರುವ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದಲ್ಲಿರುವ 50 ಸಹಾಯಕ ಅಭಿಯಂತರರು (ಸಿವಿಲ್‌) ಹಾಗೂ 14 ‘ಸಿʼ ಗ್ರೂಪ್‌ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಕುರಿತು ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 10-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-03-2024
    ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 14-03-2024

    ಹುದ್ದೆಗಳ ವಿವರ:
    ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉದ್ಯೋಗ ಇಲಾಖೆಯಿಂದ
    ಸಹಾಯಕ ಇಂಜಿನಿಯರ್‌ (ಸಿವಿಲ್‌) : 50, ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಗ್ರೂಪ್‌ ಸಿ): 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 64 ಹುದ್ದೆಗಳಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವೇತನ ಶ್ರೇಣಿ:
    ಸಹಾಯಕ ಇಂಜಿನಿಯರ್‌ (ಸಿವಿಲ್‌: ರೂ.43,100-ರೂ.83,900
    ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಗ್ರೂಪ್‌ ಸಿ): ರೂ.27,650-ರೂ.52,650

    ಶೈಕ್ಷಣಿಕ ಅರ್ಹತೆ; ಸಹಾಯಕ ಇಂಜಿನಿಯರ್‌ (ಸಿವಿಲ್)‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿ.ಟೆಕ್‌ ಇಂಜಿನಿಯರಿಂಗ್‌ ಪದವಿಯನ್ನು ಸಿವಿಲ್‌ ವಿಭಾಗದಲ್ಲಿ ಪಡೆದಿರಬೇಕು
    ಪ್ರಥಮ ದರ್ಜೆ ಲೆಕ್ಕ ಸಹಾಯಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಕಾಂ ಪದವಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ತುಂಬಿರತಕ್ಕದ್ದು, ಹಾಗೂ ಈ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
    ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.

    ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ -2ಎ/2ಬಿ/3ಎ/3ಬಿ) ರೂ.750
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

    ಅರ್ಜಿ ಸಲ್ಲಿಸುವ ವಿಧಾನ; ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ಗೆ ಭೇಟಿ ನೀಡಿ ಅಲ್ಲಿ ಆನ್‌ಲೈನ್‌ ಮುಖಾಂತರ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದಲ್ಲಿ, ಪ್ರತ್ಯೇಕ ಅರ್ಜಿಯ ಮುಖಾಂತರ ಸಲ್ಲಿಸಬೇಕು. ಆದರೆ ಅಂತಹ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕ ಶುಲ್ಕವನ್ನು ಕೂಡಾ ಪಾವತಿ ಮಾಡಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • 220 FDA ಹುದ್ದೆ ನೇಮಕಕ್ಕೆ ಆರ್ಥಿಕ ಇಲಾಖೆ ಆದೇಶ

    220 FDA ಹುದ್ದೆ ನೇಮಕಕ್ಕೆ ಆರ್ಥಿಕ ಇಲಾಖೆ ಆದೇಶ

    ಕೆಪಿಎಸ್‌ಸಿ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ 220 ಅಭ್ಯರ್ಥಿಗಳು ಆಯ್ಕೆಯಾಗಿ ದಾಖಲಾತಿ ಪರಿಶೀಲನೆಯು ಮುಕ್ತಾಯಗೊಂಡಿತ್ತು. ಸದರಿ ಅಭ್ಯರ್ಥಿಗಳು ಜೂನ್‌ 2021 ರ ನಂತರ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಯು ಸಹಮತಿಸಿದೆ.

    ಜೂನ್ ನಂತರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಪ್‌ಡಿಎ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶವು ಕೈ ಸೇರಲಿದೆ. ಅಗತ್ಯ ದಾಖಲೆಗಳೊಂದಿಗೆ ನೀಡಲಾದ ದಿನಾಂಕದಂದು ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಿರಬೇಕು.

  • FDA ನೇಮಕ ಅಧಿಸೂಚನೆ ಪಾಲಿಸಲು ಕೆಎಟಿ ಸೂಚನೆ

    FDA ನೇಮಕ ಅಧಿಸೂಚನೆ ಪಾಲಿಸಲು ಕೆಎಟಿ ಸೂಚನೆ

    ರಾಜ್ಯದಾದ್ಯಂತ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಖಾಲಿ ಇರುವ FDA,SDA ಹುದ್ದೆಗಳಿಗೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು 2018 ನೇ ಸಾಲಿನಿಂದಲೂ ನೇಮಕ ಆದೇಶಕ್ಕೆ ಕಾಯುತ್ತಿದ್ದಾರೆ. ನೇಮಕ ಪ್ರಕ್ರಿಯೆಗೆ ಹೊರಡಿಸಿ ನೋಟಿಫಿಕೇಶನ್ ಪ್ರಕಾರ ಕೌನ್ಸಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ತಿಳಿಸಿದೆ.

    ದಿನಾಂಕ 01-09-2017 ರಂದು ಕರ್ನಾಟಕ ಲೋಕಸೇವಾ ಆಯೋಗವು 961 ಪ್ರಥಮ ದರ್ಜೆ ಸಹಾಯಕ ಹುದ್ದೆಗಳ 851 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿತ್ತು. 2018 ಲಿಖಿತ ಪರೀಕ್ಷೆ ನಡೆಸಿತ್ತು. ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಎರಡು ಹುದ್ದೆಗಳ ಪಟ್ಟಿಯಲ್ಲಿ ಇದ್ದಲ್ಲಿ ಆ ಅಭ್ಯರ್ಥಿಗಳನ್ನು ಕೌನ್ಸಲಿಂಗ್ ಮೂಲಕ ಒಂದು ಹುದ್ದೆಗೆ ನೇಮಿಸಿ ಆದೇಶ ನೀಡಲಾಗುವುದು ಎಂದು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿತ್ತು.

    ಎಫ್‌ಡಿಎ ಪಟ್ಟಿಯಲ್ಲಿ ಇದ್ದ ಅಭ್ಯರ್ಥಿಗಳನ್ನು ಎಸ್‌ಡಿಎ ಪಟ್ಟಿಯಿಂದ ಕೌನ್ಸಲಿಂಗ್ ನಡೆಸದೆ ಕೈ ಬಿಟ್ಟಿದ್ದರಿಂದ ಅಭ್ಯರ್ಥಿ ಬಯಸದೇ ಇರುವ ಇಲಾಖೆ ನಿಯೋಜನೆ ಮಾಡಿದರೆ ಅನ್ಯಾಯವಾಗಲಿದೆ ಎಂದು ಈ ಹಿಂದೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ದರಿಂದ 2017 ರಲ್ಲಿ ಕೌನ್ಸಲಿಂಗ್ ನಡೆಸುವ ನಿರ್ಧಾರವನ್ನು ಕರ್ನಾಟಕ ಲೋಕಸೇವಾ ಆಯೋಗ ಕೈಗೊಂಡಿತ್ತು.

    ಇದಾದ ನಂತರ ಆಯೋಗದ ಕಾರ್ಯದರ್ಶಿ ಬದಲಾದ ಕಾರಣ ಕೌನ್ಸಲಿಂಗ್ ನಡೆಸುವುದು ಕೆಸಿಎಸ್‌ ( ಕರ್ನಾಟಕ ಸಿವಿಲ್ ಸೇವೆ) ನಿಯಮಗಳಿಗೆ ವಿರುದ್ಧ ಎಂದು ಹೊಸ ಕಾರ್ಯದರ್ಶಿ ತಡೆ ಹಿಡಿದಿದ್ದು , ಅತಂತ್ರಗೊಂಡಿದ್ದ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಈ ಮನವಿಯನ್ನು ವಿಚಾರಣೆ ನಡೆಸಿದ ಕೆಎಟಿ, ‘ನೇಮಕಾತಿ ಅಧಿಸೂಚನೆ ಪ್ರಕಾರವೇ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಕೌನ್ಸಲಿಂಗ್ ನಡೆಸುವುದು ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳಿಗೆ ವಿರುದ್ಧ ಆಗುವುದಿಲ್ಲ’ ಎಂದು ಹೇಳಿದೆ.