Tag: Bio medical engineer

  • ಸರ್ ಸಿ.ವಿ‌.ರಾಮನ್ ಆಸ್ಪತ್ರೆಯಲ್ಲಿ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

    ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಹುದ್ದೆ : ಬಯೋಮೆಡಿಕಲ್ ಇಂಜಿನಿಯರ್ – 1 ಹುದ್ದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವನ್ನು ನೀಡಲಾಗುವುದು. ಒಬಿಸಿ ಅಭ್ಯರ್ಥಿಗಳು ಗರಿಷ್ಠ 35 ವರ್ಷ ವಯೋಮಿತಿಯನ್ನು ಮೀರಿರಬಾರದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/cat-1 ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.

    ನೇರ ಸಂದರ್ಶನದ ಸ್ಥಳ ಮತ್ತು ಸಮಯ : ದಿನಾಂಕ 02-08-2021 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01:00 ಗಂಟೆಯವರೆಗೆ. ಸರ್ ವಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು- 38

    6 ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ಗುತ್ತಿಗೆ, ಆಧಾರದ ಮೇಲೆ ನೇರ ಸಂದರ್ಶನದ ಮುಖಾಂತರ ( walk in interview) ದಿನಾಂಕ : 02-08-2021 ರಂದು ಬೆಳಿಗ್ಗೆ 10:30 ರ ಬೆಳಿಗ್ಗೆ 1:00 ಗಂಟೆಯವರೆಗೆ ವೈದ್ಯಕೀಯ ಅಧೀಕ್ಷಕರ ಕೊಠಡಿಯಲ್ಲಿ ನಡೆಸುತ್ತಿದ್ದು, ತಾವುಗಳು ಮೂಲ ದಾಖಲಾತಿ ಪ್ರಮಾಣ ಪತ್ರಗಳೊಂದಿಗೆ ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗುವುದು. ( ಅಭ್ಯರ್ಥಿಯ ವಯೋಮಿತಿ 40 ವರ್ಷದ ಒಳಗಿರಬೇಕು)

  • ಗದಗ ವೈಜ್ಞಾನಿಕ ವಿಜ್ಞಾನಗಳ ಸಂಸ್ಥೆ : ಬಯೋ ಮೆಡಿಕಲ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

    ಗದಗ ವೈಜ್ಞಾನಿಕ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿನ ವಿವಿಧ ವೈದ್ಯಕೀಯ ಉಪಕರಣ ಹಾಗೂ ಯಂತ್ರೋಪಕರಣಗಳ‌ ನಿರ್ವಹಣೆ ಗಾಗಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ: ಬಯೋ ಮೆಡಿಕಲ್ ಇಂಜಿನಿಯರ್ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುವುದಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಯ ವಿವರ: ಬಯೋ ಮೆಡಿಕಲ್ ಇಂಜಿನಿಯರ್ ( ಜೀವ ವೈದ್ಯಕೀಯ ಅಭಿಯಂತರರು)

    ವಿದ್ಯಾರ್ಹತೆ: ಬಯೋ ಮೆಡಿಕಲ್ ಇಂಜಿನಿಯರಿಂಗ್/ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

    ಹುದ್ದೆಗಳ ಸಂಖ್ಯೆ : 01

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,800/- ವೇತನವಿರುತ್ತದೆ.

    ವಯೋಮಿತಿ : ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.

    ಸಂದರ್ಶನದ ದಿನಾಂಕ : 08-07-2021 ರಂದು ಬೆಳಿಗ್ಗೆ 11.00 ಗಂಟೆಗೆ ನೇರ ನೇಮಕಾತಿ ಸಂದರ್ಶನ ಕರೆಯಲಾಗಿದ್ದು, ಅರ್ಹ ಇಚ್ಛೆಯುಳ್ಳ ಅಭ್ಯರ್ಥಿಗಳು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಂಸ್ಥೆಯ ವೆಬ್‌ಸೈಟ್‌ www.karnataka.gov.in/gimsgadag ನಲ್ಲಿ ಲಭ್ಯವಿರುವ ಅರ್ಜಿಯೊಂದಿಗೆ ನೇರ ನೇಮಕಾತಿ ಸಂದರ್ಶನಕ್ಕೆ ಹಾಜರಾಗಬಹುದು.