Tag: Bangalore university

  • ಬೆಂಗಳೂರು ನಗರ ವಿಶ್ವವಿದ್ಯಾನಿಲಯ : ಪೂರ್ಣ/ ಅರೆಕಾಲಿಕ ಅತಿಥಿ ಉಪನ್ಯಾಸಕ ಹುದ್ದೆ

    2021-22 ನೇ ಶೈಕ್ಷಣಿಕ ವರ್ಷಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕಲಾ ಮತ್ತು ವಿಜ್ಞಾನ ವಿಭಾಗಗಳ ಅಡಿಯಲ್ಲಿ ಈ ಕೆಳಗಿನ ಸ್ನಾತಕೋತ್ತರ ಅಧ್ಯಯನ ವಿಭಾಗದಲ್ಲಿ ಬೋಧಿಸಲು ಪೂರ್ಣ/ಅರೆಕಾಲಿಕ ಅತಿಥಿ ಉಪನ್ಯಾಸಕರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಯುಜಿಸಿ ನಿಯಮಗಳ ಪ್ರಕಾರ ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ವಿಶ್ವವಿದ್ಯಾನಿಲಯದ ಜಾಲತಾಣ www.bcu.ac.in ದಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಸಂಬಂಧಿತ ದಾಖಲೆಯ‌ ಪ್ರತಿಗಳೊಂದಿಗೆ ಕುಲಸಚಿವರು, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು – 560001 ಇವರಿಗೆ ಕಚೇರಿ ಸಮಯದಲ್ಲಿ ದಿನಾಂಕ : 30-11-2021 ರೊಳಗೆ ಸಲ್ಲಿಸಲು ಸೂಚಿಸಲಾಗಿದೆ.

    ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕವನ್ನು ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಲತಾಣಕ್ಕೆ ಭೇಟಿ ನೀಡಿ.

  • ಬೆಂಗಳೂರು ಯುನಿವರ್ಸಿಟಿ : ಬ್ಯಾಕ್ ಲಾಗ್ ಹುದ್ದೆಗೆ ಅರ್ಜಿ ಆಹ್ವಾನ

    ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳು ಮತ್ತು ಯು.ವಿ.ಸಿ.ಇ ಕಾಲೇಜಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿವರಗಳು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳ ( ಬ್ಯಾಕ್ ಲಾಗ್) ಭರ್ತಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಂದ ಅರ್ಜಿ ( ಎಂಟು ಪ್ರತಿ) ಆಹ್ವಾನಿಸಲಾಗಿದೆ.

    ಅರ್ಜಿಗಳನ್ನು ನಿಗದಿತ ಶುಲ್ಕದೊಂದಿಗೆ ಈ ತಿಂಗಳ 30 ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

    ಹುದ್ದೆ: ಪ್ರೊಫೆಸರ್ , ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್

    ಅರ್ಜಿ ಶುಲ್ಕ : ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ರೂ. 250/-, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಪ್ರೊಫೆಸರ್ ಹುದ್ದೆಗೆ ರೂ.500/-,ಜೊತೆಗೆ ಅಪ್ಲಿಕೇಶನ್ ಫೀಸ್ ರೂ.100/- ನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-07-2021( 30th July 2021) 5.00 ಗಂಟೆಯೊಳಗೆ.

  • ಬೆಂಗಳೂರು ಯುನಿವರ್ಸಿಟಿ ‌: ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಬೆಂಗಳೂರು ಯುನಿವರ್ಸಿಟಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್‌ www.bangaloreunivesity.ac.in ನಲ್ಲಿ ದಿನಾಂಕ 23-06-2021 ರ ನಂತರ ದೊರಕಲಿದೆ.

    ಅಭ್ಯರ್ಥಿಗಳು ರೂ.250/- ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ, ರೂ.500/- ನ್ನು ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗೆ ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

    ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು ರಿಜಿಸ್ಟ್ರಾರ್, ಬೆಂಗಳೂರು ಯುನಿವರ್ಸಿಟಿ, ಬೆಂಗಳೂರು – 560056 ಗೆ ದಿನಾಂಕ 30-07-2021 (5 ಗಂಟೆಯೊಳಗಾಗಿ) ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-07-2021( 5 ಗಂಟೆಯೊಳಗಾಗಿ)

  • ಬೆಂಗಳೂರು ವಿಶ್ವವಿದ್ಯಾನಿಲಯ : ಪರೀಕ್ಷೆ ಮುಂದೂಡಿಕೆ

    ಬೆಂಗಳೂರು ವಿಶ್ವವಿದ್ಯಾನಿಲಯ : ಪರೀಕ್ಷೆ ಮುಂದೂಡಿಕೆ

    ಬೆಂಗಳೂರು ವಿಶ್ವವಿದ್ಯಾನಿಲಯವು ಎಪ್ರಿಲ್ 19 ರಂದು ನಡೆಸಬೇಕಾಗಿದ್ದ ಸ್ನಾತಕ, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಯನ್ನು ಮುಂದೂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

    ಎಪ್ರಿಲ್ 19 , 20 ಮತ್ತು 21 ರಂದು ನಡೆಯಬೇಕಾಗಿದ್ದ ವಿವಿಧ ಪರೀಕ್ಷೆಗಳನ್ನು ಸೋಂಕು ಹೆಚ್ಚಳ ಕಾರಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಮುಂದೂಡಿದೆ.

    ಏ.19 ರಂದು ಪ್ರಾರಂಭವಾಗಬೇಕಾಗಿದ್ದ ಎಲ್ಲಾ ಎಲ್ಲಾ ಯುಜಿ ಕೋರ್ಸ್‌ಗಳ 1 ಮತ್ತು 3ನೇ ಸೆಮಿಸ್ಟರ್ , ಯುವಿಸಿಇನ ಬಿ.ಆರ್ಕ್‌/ಬಿ.ಟೆಕ್ (ಸಿಬಿಸಿಎಸ್‌) 1,2,3 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.

    20 ರಿಂದ ಪ್ರಾರಂಭವಾಗಬೇಕಾಗಿದ್ದ ಎಂಬಿಎ/ಎಂಸಿಎ/ಎಂ.ಇಡಿ/ಎಂ.ಎಸ್ಸಿ ಆರಂಭವಾಗಬೇಕಾಗಿದ್ದ ಎಂಎ/ಎಂಎಸ್ಸಿ/ಎಂಎಎಸ್‌ಎಲ್‌ಪಿ ನ 3 ನೇ ಸೆಮಿಸ್ಟರ್ ಹಾಗಝೂ ಎಂಸಿಎ 5 ನೇ ಸೆಮಿಸ್ಟರ್ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದು ಬೆಂಗಳೂರು ವಿವಿ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಫೆ.22 ರಿಂದ ಪಿ.ಜಿ.ಸೀಟುಗಳ ಕೌನ್ಸಿಲಿಂಗ್

    ಫೆ.22 ರಿಂದ ಪಿ.ಜಿ.ಸೀಟುಗಳ ಕೌನ್ಸಿಲಿಂಗ್

    ಫೆಬ್ರವರಿ 22, 2021 ರಿಂದ ಫೆಬ್ರವರಿ 24, 2021 ರವರೆಗೆ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ವಿವಿಯ ಇತರೆ ಸಂಯೋಜಿತ ಕಾಲೇಜುಗಳು, ಪಿಜಿ ಕೇಂದ್ರಗಳಲ್ಲಿ 2020-21 ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಉಳಿಕೆ ಸೀಟುಗಳ ಕೌನ್ಸಿಲಿಂಗ್ ನಡೆಸಲಾಗುವುದು.

    ಪ್ರತಿದಿನ ಬೆಳಗ್ಗೆ 9 ರಿಂದ ನಡೆಸಲಿದ್ದು, ಉಳಿಕೆ ಸೀಟುಗಳ ಪ್ರವೇಶ ಅಂದೇ ನೀಡಲಾಗುತ್ತದೆ.

    ವಾಣಿಜ್ಯ ಶಾಸ್ತ್ರ ವಿಷಯದ ಸೀಟುಗಳಿಗೆ – ಫ್ರೊ.ಎಂ.ಎಸ್.ತಿಮ್ಮಪ್ಪ ಸಭಾಂಗಣ

    ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರ ವಿಷಯದ ಸೀಟುಗಳಿಗೆ – ವೆಂಕಟಗಿರಿ ಸಭಾಂಗಣ

    ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ ವಿಷಯಗಳಿಗೆ – ಜ್ಞಾನಭಾರತಿ ಎಚ್ ಎನ್ ಸಭಾಂಗಣ

    ಉಳಿದ ಎಲ್ಲಾ ವಿಷಯಗಳಿಗರ ಆಯಾ ಸ್ನಾತಕೋತ್ತರ ವಿಭಾಗದಲ್ಲಿ ಕೌನ್ಸಿಲಿಂಗ್ ನಡೆಯಲಿದೆ.

    ಅಗತ್ಯ ದಾಖಲೆಗಳೊಂದಿಗೆ ಕೌನ್ಸಿಲಿಂಗ್ ಗೆ ಹಾಜರಾಗಲು ಸೂಚಿಸಲಾಗಿದೆ.