Tag: Bangalore Jobs

  • ITI Ltd Jobs: ಟೆಲಿಫೋನ್‌ ಇಂಡಸ್ಟ್ರೀಸ್‌ನಲ್ಲಿ ಕೆಲಸವಿದೆ; ಅಪ್ಲೈ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

    ITI Ltd Jobs: ಟೆಲಿಫೋನ್‌ ಇಂಡಸ್ಟ್ರೀಸ್‌ನಲ್ಲಿ ಕೆಲಸವಿದೆ; ಅಪ್ಲೈ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

    ITI Ltd Recruitment 2024: ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ ಐಟಿಐ ಲಿಮಿಟೆಡ್ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 06 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವೆಚ್ಚ ಮತ್ತು ನಿರ್ವಹಣಾ ಅಕೌಂಟೆಂಟ್ ಟ್ರೈನಿ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಇಲ್ಲಿ ಮೇಲ್ಕಂಡ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಪೋಸ್ಟಿಂಗ್‌ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು 29-ಮೇ-2024 10:00 AM ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹದು.

    ಪ್ರಮುಖ ದಿನಾಂಕಗಳು;
    ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ: 21-05-2024
    ನೇರ ಸಂದರ್ಶನದ ದಿನಾಂಕ: 29-ಮೇ-2024 10:00 AM

    ಹುದ್ದೆಯ ಕುರಿತ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು:
    ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ (ಐಟಿಐ ಲಿಮಿಟೆಡ್) ಇಲ್ಲಿ ಖಾಲಿ ಇರುವ 6 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬೆಂಗಳೂರು -ಕರ್ನಾಟಕದಲ್ಲಿ ಹುದ್ದೆಗಳ ಭರ್ತಿ ನಡೆಯಲಿದ್ದು, ಆಸಕ್ತರು ವೆಚ್ಚ ಮತ್ತು ನಿರ್ವಹಣೆ ಅಕೌಂಟೆಂಟ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಟೈಫಂಡ್‌ ರೂ.10000-12500/- ಪ್ರತಿ ತಿಂಗಳು ಸಿಗಲಿದೆ.

    ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ CMA ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷಗಳನ್ನು ಮೀರಿರಬಾರದು. ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಮೇಲೆ ತಿಳಿಸಿದ ಹುದ್ದೆಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ? ಕರ್ನಾಟಕದಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳ ಜೊತೆಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
    ನೇರ ಸಂದರ್ಶನದ ವಿಳಾಸ: ITI Limited, Regd. and Corporate Office, ITI Bhavan, Dooravani Nagar, Bangalore ಇಲ್ಲಿ 29-ಮೇ-2024 ರಂದು 10:00 AM ಗೆ ಅಭ್ಯರ್ಥಿಗಳು ಹಾಜರಿರಬೇಕು.

    ಮಹತ್ವದ ಸೂಚನೆ: ಅಭ್ಯರ್ಥಿಗಳು ಇಮೇಲ್ ಮೂಲಕ ಆಯ್ಕೆಯ ದಿನದಂದು ಈ ಕೆಳಗಿನ ಸ್ಥಳದಲ್ಲಿ ಹಾಜರಿರಲು ಮೊದಲೇ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಈ ಇಮೇಲ್‌ ವಿಳಾಸಕ್ಕೆ ಸಂಪರ್ಕಿಸಬಹುದು: [email protected]

  • ISRO Recruitment 2024: ಇಸ್ರೋದಲ್ಲಿ ಬಂಪರ್‌ ಉದ್ಯೋಗಾವಕಾಶ, 224 ವಿವಿಧ ಹುದ್ದೆ, ಬೆಂಗಳೂರಲ್ಲಿ ಪೋಸ್ಟಿಂಗ್‌

    ISRO Recruitment 2024: ಇಸ್ರೋದಲ್ಲಿ ಬಂಪರ್‌ ಉದ್ಯೋಗಾವಕಾಶ, 224 ವಿವಿಧ ಹುದ್ದೆ, ಬೆಂಗಳೂರಲ್ಲಿ ಪೋಸ್ಟಿಂಗ್‌

    ISRO Recruitment 2024: ಇಸ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಸೈಂಟಿಸ್ಟ್‌, ಇಂಜಿನಿಯರ್‌, ಟೆಕ್ನಿಕಲ್‌ ಅಸಿಸ್ಟೆಂಟ್‌ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಕುರಿತು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ-ಬೆಂಗಳೂರಿನಲ್ಲಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪೋಸ್ಟಿಂಗ್‌ ಮಾಡಲಾಗುವುದು.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಫೆ.10, 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:ಮಾರ್ಚ್‌ 01, 2024

    ಹುದ್ದೆಗಳ ವಿವರ
    ಹುದ್ದೆ: ಇಸ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಟೆಕ್ನಿಕಲ್‌ ಅಸಿಸ್ಟೆಂಟ್‌, ಡ್ರಪ್ಟಮನ್ಸ್‌-ಬಿ, ಸೈಂಟಿಸ್ಟ್‌, ಇಂಜಿನಿಯರ್‌, ಸೈಂಟಿಫಿಕ್‌ ಅಸಿಸ್ಟಂಟ್‌, ಲ್ರೈಬ್ರರಿ ಅಸಿಸ್ಟಂಟ್‌, ಪೈರಮನ್‌-ಎ, ಹೆವಿ ವೆಹಿಕಲ್‌ ಡ್ರೈವರ್, ಲೈಟ್‌ ವೆಹಿಕಲ್‌ ಡ್ರೈವರ್-‌ಎ

    ಹುದ್ದೆಗಳ ಸಂಖ್ಯೆ: ಒಟ್ಟು 224 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ ಮತ್ತು ನೀಡಲಾಗುವ ವೇತನ:
    ಸೈಂಟಿಸ್ಟ್‌ ಇಂಜಿನಿಯರ್‌- 5ಹುದ್ದೆ- ರೂ. 56,100
    ಟೆಕ್ನಿಕಲ್‌ ಅಸಿಸ್ಟೆಂಟ್‌-55 ಹುದ್ದೆ-ರೂ.44,900
    ಸೈಂಟಿಫಿಕ್‌ ಅಸಿಸ್ಟಂಟ್‌-6 ಹುದ್ದೆ-ರೂ.44,900
    ಲೈಬ್ರರಿ ಅಸಿಸ್ಟಂಟ್‌-1 ಹುದ್ದೆ-ರೂ.44,900
    ಟೆಕ್ನಿಷಿಯನ್-ಬಿ-126 ಹುದ್ದೆ- ರೂ.21,700
    ಡ್ರಾಫ್ಟಮನ್ಸ್‌-ಬಿ-16 ಹುದ್ದೆ-ರೂ.21,700
    ಕುಕ್‌-4 ಹುದ್ದೆ-ರೂ.19,900
    ಫೈರ್‌ಮನ್‌-ಎ-3 ಹುದ್ದೆ-ರೂ.19,900
    ಹೆವಿ ವೆಹಿಕಲ್‌ ಡ್ರೈವರ್‌ ಎ-6 ಹುದ್ದೆ-ರೂ.19,900
    ಲೈಟ್‌ ವೆಹಿಕಲ್‌ ಡ್ರೈವರ್‌ ಎ-2 ಹುದ್ದೆ-ರೂ.19,900

    ಶೈಕ್ಷಣಿಕ ಅರ್ಹತೆ: ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್‌ ಪದವಿ ಯನ್ನು ಹೊಂದಿರಬೇಕು.

    ವಯೋಮಿತಿ: ಈ ಮೇಲ್ಕಂಡ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿರಬೇಕು. ಉಳಿದ ಹಾಗೆ ಈ ಕೆಳಗೆ ಹುದ್ದೆಗಳಿಗೆ ತಕ್ಕಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
    ಸೈಂಟಿಸ್ಟ್‌ ಇಂಜಿನಿಯರ್‌-30 ವರ್ಷ
    ಟೆಕ್ನಿಕಲ್‌ ಅಸಿಸ್ಟಂಟ್‌, ಸೈಂಟಿಫಿಕ್‌ ಅಸಿಸ್ಟಂಟ್‌, ಲೈಬ್ರರಿ ಅಸಿಸ್ಟಂಟ್‌-35 ವರ್ಷ
    ಟೆಕ್ನಿಷಿಯನ್-ಬಿ, ಡ್ರಾಪ್ಟಮನ್ಸ್‌ ಬಿ, ಕುಕ್‌-35 ವರ್ಷ
    ಪೈರಮನ್‌ ಎ- 25 ವರ್ಷ
    ಹೆವಿ ವೆಹಕಲ್‌ ಡ್ರೈವರ್‌ ಎ, ಲೈಟ್‌ ವೆಹಿಕಲ್‌ ಡ್ರೈವರ್‌ ಎ-35ವರ್ಷ
    ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಸೈಂಟಿಸ್ಟ್‌ ಇಂಜಿನಿಯರ್‌, ಟೆಕ್ನಿಕಲ್‌ ಅಸಿಸ್ಟಂಟ್‌ , ಸೈಂಟಿಫಿಕ್‌ ಅಸಿಸ್ಟಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.250 ನ್ನು ಪಾವತಿಸಬೇಕು. ಪ್ರೊಸೆಸಿಂಗ್‌ ಶುಲ್ಕ 500 ರೂ. ನ್ನು ಪಾವತಿ ಮಾಡಬೇಕು. ( ಪ್ರೊಸೆಸಿಂಗ್‌ ಶುಲ್ಕವನ್ನು ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮರುಪಾವತಿ ಮಾಡಲಾಗುವುದು)

    ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ: ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌, ಯುಪಿಎ ಮೂಲಕ ಶುಲ್ಕ ಪಾವತಿ ಮಾಡಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಆಯ್ಕೆ ವಿಧಾನ; ಈ ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ/ ಸ್ಕಿಲ್‌ ಟೆಸ್ಟ್‌/ ಡ್ರೈವಿಂಗ್‌ ಟೆಸ್ಟ್‌ ಈ ಪರೀಕ್ಷೆಗಳನ್ನು ಹುದ್ದೆಗಳಿಗೆ ತಕ್ಕ ಹಾಗೆ ನಡೆಸಿ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • Sri Sudha Co-operative Bank Recruitment 2024: ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ನೇಮಕಾತಿ; ಮಾಸಿಕ ರೂ.88,300 ವೇತನ, ಫೆ.23, 2024 ಅರ್ಜಿ ಸಲ್ಲಿಸಲು ಕೊನೆಯ ದಿನ

    Sri Sudha Co-operative Bank Recruitment 2024: ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ನೇಮಕಾತಿ; ಮಾಸಿಕ ರೂ.88,300 ವೇತನ, ಫೆ.23, 2024 ಅರ್ಜಿ ಸಲ್ಲಿಸಲು ಕೊನೆಯ ದಿನ

    Shri Sudha Co-Operative Bank Ltd: ಶ್ರೀ ಸುಧಾ ಕೋ ಆಪರೇಟಿವ್‌ ಬ್ಯಾಂಕ್‌ ಲಿ.ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ-ಬೆಂಗಳೂರಿನಲ್ಲಿ ಉದ್ಯೋಗ ಹುಡುಕುವವರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಕಿರಿಯ ಸಹಾಯಕರು, ಸಿಸ್ಟಂ ಅಡ್ಮಿನಿಸ್ಟ್ರೆಟರ್‌, ಕಚೇರಿ ಸಹಾಯಕರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ, ಹೆಚ್ಚಿನ ವಿವರಗಳನ್ನು ಪಡೆದು ಅರ್ಜಿ ಸಲ್ಲಿಸಿ.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ; 02-02-2024
    ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ; 23-02-2024

    ಹುದ್ದೆಗಳ ವಿವರ;
    ಶ್ರೀ ಸುಧಾ ಕೋ-ಅಪರೇಟಿವ್‌ ಬ್ಯಾಂಕ್‌ ಲಿ. ನಲ್ಲಿ ಕಿರಿಯ ಸಹಾಯಕರು ಗ್ರೇಡ್‌-II, ಸಿಸ್ಟಂ ಅಡ್ಮಿನಿಸ್ಟ್ರೇಟರ್‌, ಕಚೇರಿ ಸಹಾಯಕರು(ಅಟೆಂಡರ್‌) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ:
    ಕಿರಿಯ ಸಹಾಯಕರು ಗ್ರೇಡ್‌-II: 10 ಹುದ್ದೆಗಳು
    ಸಿಸ್ಟಂ ಅಡ್ಮಿನಿಸ್ಟ್ರೇಟರ್‌: 01 ಹುದ್ದೆ
    ಕಚೇರಿ ಸಹಾಯಕರು(ಅಟೆಂಡರ್‌): 07 ಹುದ್ದೆಗಳು

    ವಿದ್ಯಾರ್ಹತೆ:
    ಕಿರಿಯ ಸಹಾಯಕರು ಗ್ರೇಡ್‌ -II: ಅಂಗೀಕೃತ ವಿಶ್ವವಿದ್ಯಾಲಯದ ಬ್ಯಾಚುಲರ್‌ ಪದವಿ, ಕಂಪ್ಯೂಟರ್‌ ಅಪರೇಷನ್ಸ್‌ ಮತ್ತು ಅಪ್ಲಿಕೇಷನ್ಸ್‌ ತಿಳಿದಿರಬೇಕು. ಕನ್ನಡದಲ್ಲಿ ಮಾತನಾಡುವ, ಬರೆಯುವ, ಅರ್ಥ ಮಾಡಿಕೊಳ್ಳುವ, ಓದುವ ಜ್ಞಾನ ಉಳ್ಳವರಿಗೆ ಆದ್ಯತೆ

    ಸಿಸ್ಟಂ ಅಡ್ಮಿನಿಸ್ಟ್ರೇಟರ್‌: ಅಂಗೀಕೃತ ವಿಶ್ವವಿದ್ಯಾಲಯದ ಕಂಪ್ಯೂಟರ್‌ ಸೈನ್ಸ್‌/ಎಲೆಕ್ಟ್ರಾನಿಕ್‌ ಮತ್ತು ಕಮ್ಯೂನಿಕೇಷನ್ಸ್‌/ಇನ್ಫಾರ್ಮೇಷನ್‌ ಸೈನ್ಸ್‌ನಲ್ಲಿ ಬಿಇ/ಬಿಟೆಕ್‌ ಅಥವಾ ತತ್ಸಮಾನ ತಾಂತ್ರಿಕ ಪದವಿಯನ್ನು ತೇರ್ಗಡೆ ಮಾಡಿರಬೇಕು. ಕನ್ನಡದಲ್ಲಿ ಮಾತನಾಡುವ, ಬರೆಯುವ, ಅರ್ಥ ಮಾಡಿಕೊಳ್ಳುವ, ಓದುವ ಜ್ಞಾನ ಜೊತೆಗೆ ಕೋರ್‌ ಬ್ಯಾಂಕಿಂಗ್‌, ನೆಟ್‌ವರ್ಕಿಂಗ್‌, ಸೈಬರ್‌ ಸೆಕ್ಯೂರಿಟಿಯಲ್ಲಿ ಪಾಂಡಿತ್ಯ ಹೊಂದಿರಬೇಕು.

    ಕಚೇರಿ ಸಹಾಯಕರು (ಅಟೆಂಡರ್‌): ಕನ್ನಡ ಪ್ರಥಮ ಭಾಷೆಯೊಂದಿಗೆ ಎಸ್‌ಎಸ್‌ಎಲ್‌ಸಿ, ಕನ್ನಡದಲ್ಲಿ ಮಾತನಾಡುವ, ಬರೆಯುವ, ಅರ್ಥ ಮಾಡಿಕೊಳ್ಳುವ, ಓದುವ ಜ್ಞಾನ ಉಳ್ಳವರಿಗೆ ಆದ್ಯತೆ

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ಸಾಮಾನ್ಯ ವರ್ಗಕ್ಕೆ 35 ವರ್ಷ, ಹಿಂದುಳಿದ ವರ್ಗ/ಜಾರಿಗೆ 38 ವರ್ಷ, ಪರಿಶಿಷ್ಟ ಜಾತಿ/ವರ್ಗಕ್ಕೆ 40 ವರ್ಷ ನಿಗದಿಪಡಿಸಲಾಗಿದೆ.

    ವೇತನ ಶ್ರೇಣಿ: ಕಿರಿಯ ಸಹಾಯಕರು -II; 27650-650-29600-750-32600-850-36000-950-39800- 1100-46400-1250-52650.
    ಸಿಸ್ಟಂ ಅಡ್ಮಿನಿಸ್ಟ್ರೇಟರ್:‌ 45300-1100-46400-1250-53900-1450-62600-1650-72500-1900-83900- 2200-88300
    ಕಚೇರಿ ಸಹಾಯಕರು (ಅಟೆಂಡರ್‌) : 23500-550-24600-600-27000-650-29600-750-32600-850-36000-950-39800-1100-46400-1250-47650

    ಅರ್ಜಿ ಶುಲ್ಕ:ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ರೂ.1180 ಡಿಡಿ ಪೇ/ಆರ್ಡರ್‌ನ್ನು “ಪ್ರಧಾನ ವ್ಯವಸ್ಥಾಪಕರು, ಶ್ರೀ ಸುಧಾ ಕೋ ಅಪರೇಟಿವ್‌ ಬ್ಯಾಂಕ್‌ ಲಿ., ಬೆಂಗಳೂರು” ಇಲ್ಲಿಗೆ ಪಾವತಿ ಮಾಡಬೇಕು.

    ಅರ್ಜಿ ಸಲ್ಲಿಸುವ ರೀತಿ;
    ಅರ್ಜಿಯನ್ನು ಪ್ರಧಾನ ವ್ಯವಸ್ಥಾಪಕರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸಿ, “ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ, ಶ್ರೀ ಸುಧಾ ಕೋ-ಆಪರೇಟಿವ್‌ ಬ್ಯಾಂಕ್‌ ಲಿ., ನಂ.195/33 ” ಶ್ರೀ ಸುಧಾ ರಜತ ಭವನ”, ಆರ್.ವಿ.ರಸ್ತೆ, ಜಯನಗರ, ಬೆಂಗಳೂರು-560004 ಕ್ಕೆ ದಿನಾಂಕ ಫೆ.23, 2024 ಸಮಯ 5.00 ಗಂಟೆಯೊಳಗೆ ತಲುಪಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

    ಅರ್ಜಿ ನಮೂನೆಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ, ಅಧಿಕೃತ ವೆಬ್‌ಸೈಟ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಉಪವ್ಯವಸ್ಥಾಪಕರು ( ಕಾನೂನು) ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಬೆಂಗಳೂರು ಇಲ್ಲಿ ಉಪವ್ಯವಸ್ಥಾಪಕರು ( ಕಾನೂನು) ( ಕಲ್ಯಾಣ ಣ ಕರ್ನಾಟಕ ವ್ಯಾಪ್ತಿಗೆ ಮೀಸಲು) ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಸಂಸ್ಥೆಯಿಂದ ಈಗಾಗಲೇ ಪತ್ರಿಕಾ ಪ್ರಕಟಣೆ ಸಂಖ್ಯೆ : ಕರಾಹಸಂ‌/ಪ್ರಕ/ಸಿಬ್ಬಂದಿ/ನೇಮಕಾತಿ/2021-22, ದಿನಾಂಕ 22.06.2021 ರ ಪ್ರಕಾರ ನೀಡಲಾಗಿದ್ದು, ಅರ್ಜಿ ಸಲ್ಲಿಕೆ ನಿಗದಿತ ದಿನಾಂಕವನ್ನು ಕೋವಿಡ್ – 19 ರ ಸಾಂಕ್ರಾಮಿಕ ಹಿನ್ನೆಲೆಯಲ್ಲಿ 10-08-2021 ರ ಸಂಜೆ 5.00 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿರುತ್ತದೆ.

    ಹೆಚ್ಚಿನ ವಿವರಗಳು ಸಂಸ್ಥೆಯ ವೆಬ್‌ಸೈಟ್‌ https://ksfc.karnataka.gov.in ನಲ್ಲಿ ಲಭ್ಯವಿರುತ್ತದೆ.

  • ಬೆಂಗಳೂರು ಯುನಿವರ್ಸಿಟಿ : ಬ್ಯಾಕ್ ಲಾಗ್ ಹುದ್ದೆಗೆ ಅರ್ಜಿ ಆಹ್ವಾನ

    ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಳು ಮತ್ತು ಯು.ವಿ.ಸಿ.ಇ ಕಾಲೇಜಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿವರಗಳು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕ ಹುದ್ದೆಗಳ ( ಬ್ಯಾಕ್ ಲಾಗ್) ಭರ್ತಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಂದ ಅರ್ಜಿ ( ಎಂಟು ಪ್ರತಿ) ಆಹ್ವಾನಿಸಲಾಗಿದೆ.

    ಅರ್ಜಿಗಳನ್ನು ನಿಗದಿತ ಶುಲ್ಕದೊಂದಿಗೆ ಈ ತಿಂಗಳ 30 ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

    ಹುದ್ದೆ: ಪ್ರೊಫೆಸರ್ , ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್

    ಅರ್ಜಿ ಶುಲ್ಕ : ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ರೂ. 250/-, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಪ್ರೊಫೆಸರ್ ಹುದ್ದೆಗೆ ರೂ.500/-,ಜೊತೆಗೆ ಅಪ್ಲಿಕೇಶನ್ ಫೀಸ್ ರೂ.100/- ನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-07-2021( 30th July 2021) 5.00 ಗಂಟೆಯೊಳಗೆ.

  • ಗ್ರಾಮ ಕಾಯಕ ಮಿತ್ರ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

    ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 04 ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ 04 ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಗೌರವ ಧನದ ಆಧಾರದ ಮೇಲೆ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಗ್ರಾಮ ಪಂಚಾಯತಿ ಹಾಗೂ ನೆಲಮಂಗಲ ತಾಲ್ಲೂಕಿನ ಕೋಡಿಗೆಹಳ್ಳಿ, ಯಂಟಗಾನಹಳ್ಳಿ ಮತ್ತು ನರಸೀಪುರ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 17-06-2021 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-06-2021 ರ ಸಂಜೆ 05.00 ಗಂಟೆಯವರೆಗೆ. ಹೆಚ್ಚಿನ ವಿವರಗಳಿಗಾಗಿ ಗ್ರಾಮ ಪಂಚಾಯತಿ/ ತಾಲ್ಲೂಕು ಪಂಚಾಯಿತಿಗಳನ್ನು ಸಂಪರ್ಕಿಸಬಹುದಾಗಿದೆ.

    ಅರ್ಹತೆಗಳು : ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
    ಕನಿಷ್ಠ 10 ನೇ ತರಗತಿ ಉತ್ತೀರ್ಣರಾಗಿರಬೇಕು.
    ದಿನಾಂಕ 01-01-2021ಕ್ಕೆ ಅನ್ವಯಿಸುವಂತೆ ತಾನು ಅರ್ಜಿ ಸಲ್ಲಿಸುವ ಗ್ರಾಮ‌ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬ್ ಕಾರ್ಡ್ ಹೊಂದಿರಬೇಕು.
    ಅಭ್ಯರ್ಥಿಯು ಕಳೆದ ಮೂರು ವರ್ಷಗಳಲ್ಲಿ (2018-19, 2019-20, 2020-21) ಕನಿಷ್ಠ ಎರಡು ವರ್ಚಯ ಯೋಜನೆಯಡಿ ಅಕುಶಲ ಕೂಲಿಕಾರ್ಮಿಕರಾಗಿ ಕೆಲಸ ನಿರ್ವಹಿಸಬೇಕು.
    ದಿನಾಂಕ 01-01-2021 ಕ್ಕೆ ಅನ್ವಯಿಸುವಂತೆ 45 ವರ್ಷ ಮೀರಿರಬಾರದು.
    ಓದು ಬರಹ ಚೆನ್ನಾಗಿ ತಿಳಿದಿರಬೇಕು.
    ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
    ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ರೋಜ್ ಗಾರ್ ಮಿತ್ರರು ಸಮುದಾಯ ಕಾರ್ಯನಿರ್ವಹಣೆ ಮಾಡಲು ನಿರ್ದಿಷ್ಟ ಸಮಯವನ್ನು ನೀಡಬೇಕಾಗಿದ್ದು, ಇದಕ್ಕೆ ಗ್ರಾಮ ರೋಜ್ ಗಾರ್ ಮಿತ್ರರ ಕುಟುಂಬ ಮತ್ತು ಸಮಾಜ ಬೆಂಬಲವಾಗಿರಬೇಕು.