ಮೂಡುಬಿದಿರೆ ಆಳ್ವಾಸ್ ಕ್ಯಾಂಪಸ್ ನಲ್ಲಿ ಜು.25 ರಂದು ನಡೆಯಬೇಕಿದ್ದ ಆರ್ಮಿ ರಿಕ್ರೂಟ್ ಮೆಂಟ್ ಕಾಮನ್ ಎಂಟ್ರೆನ್ಸ್ ಎಕ್ಸಾಂ ( ಸಿಇಒ) ಅನ್ನು ಮುಂದೂಡಲಾಗಿದಡ. ಕೊರೊನಾ ಬಿಕ್ಕಟ್ಟು ಮತ್ತು ಭಾರೀ ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದೆ. ಹೊಸ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Tag: Army
-
ಸೇನಾ ಪ್ರವೇಶ ಪರೀಕ್ಷೆ ಜುಲೈ 25 ಕ್ಕೆ
ಭಾರತೀಯ ಸೇನೆಯು ನಡೆಸುವ ಸಾಮಾನ್ಯ ಪರೀಕ್ಷೆಯು ( ಸಿಇಇ) ಜುಲೈ 25 ರಂದು ರಾಜ್ಯದ ಮೂರು ಕೇಂದ್ರಗಳಲ್ಲಿ ನಡೆಯಲಿದೆ.
ವೈದ್ಯಕೀಯ ಸಾಮರ್ಥ್ಯ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಲಿಖಿತ ಪರೀಕ್ಷೆಗೆ ಹಾಜರಾಗಬಹುದು.ಈ ಮೊದಲು ಎಪ್ರಿಲ್ 25 ರಂದು ಸಿಇಇ ನಿಗದಿ ಪಡಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು.
ಬೆಂಗಳೂರಿನ ಕಾಮರಾಜ ರಸ್ತೆಯಲ್ಲಿರುವ ಸೇನಾ ಶಾಲೆ, ಮಂಗಳೂರಿನ ಮೂಡುಬಿದಿರೆಯಲ್ಲಿರುವ ಆಳ್ವಾಸ್ ಸಂಸ್ಥೆ, ಬೆಳಗಾವಿಯ ಕೆಎಲ್ ಇ ಸೊಸೈಟಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಸೇನಾ ಪ್ರಕಟಣೆ ತಿಳಿಸಿದೆ.