Tag: ಎಐಎಎಸ್‌ಎಲ್‌ ನೇಮಕಾತಿ

  • AIATSL Jobs: ಏರ್‌ಇಂಡಿಯಾ ಏರ್‌ಟ್ರಾನ್ಸ್‌ಪೋರ್ಟ್‌ ಸರ್ವಿಸೆಸ್‌ನಿಂದ ಉದ್ಯೋಗಾವಕಾಶ, ನೇರಸಂದರ್ಶನಕ್ಕೆ ಅರ್ಜಿ ಆಹ್ವಾನ, ಉತ್ತಮ ವೇತನ

    AIATSL Jobs: ಏರ್‌ಇಂಡಿಯಾ ಏರ್‌ಟ್ರಾನ್ಸ್‌ಪೋರ್ಟ್‌ ಸರ್ವಿಸೆಸ್‌ನಿಂದ ಉದ್ಯೋಗಾವಕಾಶ, ನೇರಸಂದರ್ಶನಕ್ಕೆ ಅರ್ಜಿ ಆಹ್ವಾನ, ಉತ್ತಮ ವೇತನ

    AIATSL Recruitment 2024: ಏರ್‌ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವಿಸಸ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 145 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಜೂನಿಯರ್‌ ಆಫಿಸರ್‌ ಟೆಕ್ನಿಕಲ್‌, ಕಸ್ಟಮರ್‌ ಸರ್ವೀಸ್‌ ಎಕ್ಸಿಕ್ಯೂಟಿವ್‌ ಹೀಗೆ ಹಲವು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ:
    ನೇರ ಸಂದರ್ಶನಕ್ಕೆ ಹಾಜರಾಗಬೇಕಾದ ದಿನಾಂಕ:

    ಹುದ್ದೆಗಳ ವಿವರ ಇಲ್ಲಿದೆ;
    ಜೂನಿಯರ್ ಆಫೀಸರ್ – ಟೆಕ್ನಿಕಲ್ : 02
    ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 21
    ಜೂನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 21
    ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್ : 18
    ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಡ್ರೈವರ್ : 17
    ಹ್ಯಾಂಡಿಮನ್ : 66

    ವಿದ್ಯಾರ್ಹತೆ: ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳು ಬಿಇ/ಪದವಿ/ಐಟಿಐ (ಎನ್‌ಸಿವಿಟಿ/ಎಸ್‌ಸಿವಿಟಿ)/ಎಸ್‌ಎಸ್‌ಸಿ/ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 28 ವರ್ಷ ವಯಸ್ಸಾಗಿರಬೇಕು. ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.
    ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500, ಎಸ್‌ಸಿ/ಎಸ್‌ಟಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
    ಅಭ್ಯರ್ಥಿಗಳು ಡಿಡಿ ಮೂಲಕ ಶುಲ್ಕವನ್ನು ಪಾವತಿ ಮಾಡಬೇಕು.

    ಆಯ್ಕೆ ವಿಧಾನ: ಅಭ್ಯರ್ಥಿಗಳು ದಿನಾಂಕ 08-05-2024 ರಿಂದ 10-05-2024 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು;
    ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಅಂಕಪಟ್ಟಿ
    ಜಾತಿ ಮತ್ತು ಆದಾಯ ಪ್ರಮಾಣ ಪತ್ರ
    ಕಾರ್ಯಾನುಭವ ಇರುವ ದಾಖಲೆ, ಹಾಗೂ ಇತರೆ ದಾಖಲು ಅತ್ಯಗತ್ಯ

    ಮೇಲ್ಕಂಡ ಹುದ್ದೆಗೆ ನೇರ ಸಂದರ್ಶನಕ್ಕೆ ಹಾಜರಾಗುವ ಸಮಯದಲ್ಲಿ ಅಭ್ಯರ್ಥಿಗಳು ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ತಮ್ಮಲ್ಲಿ ಇಟ್ಟುಕೊಂಡು ಹೋಗಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

  • AIASTL Recruitment 2024: ಏರ್‌ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್‌ ನಲ್ಲಿ 422 ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾದವರಿಗೆ ಆದ್ಯತೆ

    AIASTL Recruitment 2024: ಏರ್‌ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್‌ ನಲ್ಲಿ 422 ಹುದ್ದೆಗಳಿಗೆ ಅರ್ಜಿ ಆಹ್ವಾನ, 10th ಪಾಸಾದವರಿಗೆ ಆದ್ಯತೆ

    AIASTL Recruitment 2024: ಏರ್‌ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್‌ ಲಿಮಿಟೆಡ್‌ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 422 ವಿವಿಧ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳಿಂದ ಹ್ಯಾಂಡಿಮ್ಯಾನ್‌, ಹ್ಯಾಂಡಿವುಮೆನ್‌, ಯುಟಿಲಿಟಿ ಏಜೆಂಟ್‌ ಕಮ್‌ ರ್ಯಾಂಪ್‌ ಡ್ರೈವರ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 02 ರಿಂದ 04, ಮೇ 2024 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬೇಕು.

    ಪ್ರಮುಖ ದಿನಾಂಕಗಳು
    ನೇರ ಸಂದರ್ಶನದ ದಿನಾಂಕ: 02 ರಿಂದ 04, ಮೇ 2024

    ಹುದ್ದೆಗಳ ವಿವರ ಇಲ್ಲಿದೆ:
    ಹುದ್ದೆ ಹೆಸರು: ಯುಟಿಲಿಟಿ ಏಜೆಂಟ್‌ ಕಮ್‌ ರ್ಯಾಂಪ್‌ ಡ್ರೈವರ್-130 ಹುದ್ದೆಗಳು
    ಹ್ಯಾಂಡಿಮ್ಯಾನ್‌/ಹ್ಯಾಂಡಿವುಮೆನ್-‌292 ಹುದ್ದೆಗಳು

    ವೇತನ: ಯುಟಿಲಿಟಿ ಏಜೆಂಟ್‌ ಕಮ್‌ ರ್ಯಾಂಪ್‌ ಡ್ರೈವರ್ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.24,960 ವೇತನವಿರಲಿದೆ.
    ಹ್ಯಾಂಡಿಮ್ಯಾನ್‌/ಹ್ಯಾಂಡಿವುಮೆನ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.22,530 ವೇತನ ಲಭ್ಯವಿದೆ.

    ವಿದ್ಯಾರ್ಹತೆ:
    ಯುಟಿಲಿಟಿ ಏಜೆಂಟ್‌ ಕಮ್‌ ರ್ಯಾಂಪ್‌ ಡ್ರೈವರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಸಿ/ಎಸ್‌ಎಸ್‌ಎಲ್‌ಸಿ ಪಾಸ್‌ ಜೊತೆಗೆ ಹೆವಿ ಮೋಟಾರ್‌ ವೆಹಿಕಲ್‌ ಲೈಸೆನ್ಸ್‌ ಪಡೆದಿರಬೇಕು.
    ಹ್ಯಾಂಡಿಮ್ಯಾನ್‌/ಹ್ಯಾಂಡಿವುಮೆನ್ ಈ ಹುದ್ದೆಗೆ ಇಂಗ್ಲೀಷ್‌ ಭಾಷೆ ಬರೆಯಲು ಓದಲು ಗೊತ್ತಿರಬೇಕು. ಹಿಂದಿ ಭಾಷೆ ತಿಳಿದಿರಬೇಕು.

    ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 28 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 31 ವರ್ಷ, ಇತರೆ ಕೆಟಗರಿಯವರಿಗೆ 33 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

    ನೇರ ಸಂದರ್ಶನ ನಡೆಯುವ ಸ್ಥಳ: ಹೆಚ್‌ಆರ್‌ಡಿ ಡಿಪಾರ್ಟ್‌ಮೆಂಟ್ ಕಚೇರಿ, ಎಐ ಯುನಿಟಿ ಕಾಂಪ್ಲೆಕ್ಸ್‌, ಪಲ್ಲವರಮ್, ಕಂಟಾನ್ಮೆಂಟ್, ಚೆನ್ನೈ – 600 043.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನೋಟಿಫಿಕೇಶನ್‌ ಮೇಲೆ ಕ್ಲಿಕ್‌ ಮಾಡಿ