Tag: ಸರಕಾರಿ ಉದ್ಯೋಗ ಮಾಹಿತಿ

  • Bank Jobs: ಮಂಗಳೂರು ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    Bank Jobs: ಮಂಗಳೂರು ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    The Mangalore Catholic Co-operative Bank Ltd; ಮಂಗಳೂರು ಕಥೋಲಿಕ್‌ ಕೋಪಾರೇಟಿವ್‌ ಬ್ಯಾಂಕ್‌, ನಿ, ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗೆ ನೀಡಲಾದ ಹುದ್ದೆಯ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಒಟ್ಟು ವಿವಿಧ 50 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸಬೇಕು.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 12.03.2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26.03.2024 (ಸಂಜೆ 5 ಗಂಟೆಯೊಳಗೆ)

    ಹುದ್ದೆಗಳ ವಿವರ ಇಲ್ಲಿದೆ;
    ಹಿರಿಯ ಪ್ರಬಂಧಕರು-2 ಹುದ್ದೆ
    ಶಾಖಾ ಪರಿವೀಕ್ಷಕರು-1 ಹುದ್ದೆ
    ವಸೂಲಾತಿ ಅಧಿಕಾರಿ – 1 ಹುದ್ದೆ
    ಶಾಖಾ ವ್ಯವಸ್ಥಾಪಕರು – 2 ಹುದ್ದೆ
    ಸುಪರ್‌ವೈಸರ್‌ – 1 ಹುದ್ದೆ
    ಮುಖ್ಯ ಅಕೌಂಟೆಂಟ್‌ – 1 ಹುದ್ದೆ
    ಅಕೌಂಟೆಂಟ್‌ – 5 ಹುದ್ದೆ
    ಡೇಟಾಬೇಸ್‌ ಅಡ್ಮಿನಿಸ್ಟ್ರೇಟರ್‌ ಡಿಬಿಎ – 2 ಹುದ್ದೆ
    ಕಿರಿಯ ಅಧಿಕಾರಿ – 10 ಹುದ್ದೆ
    ಹಿರಿಯ ಸಹಾಯಕ – 8 ಹುದ್ದೆ
    ಕಿರಿಯ ಸಹಾಯಕ – 13 ಹುದ್ದೆ
    ಅಟೆಂಡರ್/ಡ್ರೈವರ್‌ – 5 ಹುದ್ದೆ
    ಒಟ್ಟು ಹುದ್ದೆಗಳು 50

    ವೇತನ:
    ಹಿರಿಯ ಪ್ರಬಂಧಕರು ಹುದ್ದೆಗೆ ರೂ.30400-ರೂ.51300
    ಶಾಖಾ ಪರಿವೀಕ್ಷಕರು- ರೂ.30400-ರೂ.51300
    ವಸೂಲಾತಿ ಅಧಿಕಾರಿ – ರೂ.30400-ರೂ.51300
    ಶಾಖಾ ವ್ಯವಸ್ಥಾಪಕರು – ರೂ.28100-ರೂ.50100
    ಸುಪರ್‌ವೈಸರ್‌ – ರೂ..28100-ರೂ.50100
    ಮುಖ್ಯ ಅಕೌಂಟೆಂಟ್‌ – ರೂ.28100-ರೂ.50100
    ಅಕೌಂಟೆಂಟ್‌ – ರೂ.26000-ರೂ.47700
    ಡೇಟಾಬೇಸ್‌ ಅಡ್ಮಿನಿಸ್ಟ್ರೇಟರ್‌ ಡಿಬಿಎ -ರೂ.26000-ರೂ.47700
    ಕಿರಿಯ ಅಧಿಕಾರಿ – ರೂ.24000- ರೂ.45300
    ಹಿರಿಯ ಸಹಾಯಕ – ರೂ.21600-ರೂ.40050
    ಕಿರಿಯ ಸಹಾಯಕ – ರೂ.20000-ರೂ.36300
    ಅಟೆಂಡರ್/ಡ್ರೈವರ್‌ – ರೂ.16000-ರೂ.29600 ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ: ಹಿರಿಯ ಪ್ರಬಂಧಕರು ಹುದ್ದೆಗೆ ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಶಾಖಾ ಪರಿವೀಕ್ಷಕರು ಹುದ್ದೆಗೆ ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ವಸೂಲಾತಿ ಅಧಿಕಾರಿ – ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಶಾಖಾ ವ್ಯವಸ್ಥಾಪಕರು – ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಸುಪರ್‌ವೈಸರ್‌ – ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಮುಖ್ಯ ಅಕೌಂಟೆಂಟ್‌ – ಪದವಿ ಹೊಂದಿರಬೇಕು, ಕಂಪ್ಯೂಟರ್‌ ಅಪರೇಶನ್‌ ಮತ್ತು ಅಪ್ಲಿಕೇಶನ್‌ ಜ್ಞಾನ ಹೊಂದಿರಬೇಕು.
    ಅಕೌಂಟೆಂಟ್‌ – ವಾಣಿಜ್ಯ/ಸಹಕಾರ/ಮ್ಯಾನೇಜ್‌ಮೆಂಟ್‌ ವಿಷಯಗಳಲ್ಲಿ ಪದವಿ ಹೊಂದಿರಬೇಕು. Tally ಕೋರ್ಸ್‌ನಲ್ಲಿ ತೇರ್ಗಡೆಯಾಗಿರಬೇಕು. ಜೊತೆಗೆ ಕಂಪ್ಯೂಟರ್‌ ಅಪ್ಲೀಕೇಶನ್‌ ಮತ್ತು ಅಪರೇಷನ್‌ ಜ್ಞಾನ ಹೊಂದಿರಬೇಕು.
    ಡೇಟಾಬೇಸ್‌ ಅಡ್ಮಿನಿಸ್ಟ್ರೇಟರ್‌ ಡಿಬಿಎ – ಗಣಕ ವಿಜ್ಞಾನದಲ್ಲಿ ಬಿ.ಇ. ಪದವಿ ಅಥವಾ ಕಂಪ್ಯೂಟರ್‌ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.
    ಕಿರಿಯ ಅಧಿಕಾರಿ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು.
    ಹಿರಿಯ ಸಹಾಯಕ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು.
    ಕಿರಿಯ ಸಹಾಯಕ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಹೊಂದಿರಬೇಕು.
    ಅಟೆಂಡರ್/ಡ್ರೈವರ್‌ – ಎಸ್‌.ಎಸ್‌.ಎಲ್‌.ಸಿ ತೇರ್ಗಡೆ ಹೊಂದಿರಬೇಕು ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.

    ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿಯು 18ವರ್ಷ ಹಾಗೂ ಗರಿಷ್ಠ ಮಿತಿಯನ್ನು ಈ ಕೆಳಕಂಡತೆ ನೀಡಲಾಗಿದೆ.
    ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ವರ್ಗ -1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷ, ಹಿಂದುಳಿದ ಜಾತಿ ಅಥವಾ ಪಂಗಡಕ್ಕೆ (2ಎ,2ಬಿ,3ಎ,3ಬಿ) ಸೇರಿದ ಅಭ್ಯರ್ಥಿಗಳಿಗೆ 38 ವರ್ಷ, ಉಳಿದ ಅಭ್ಯರ್ಥಿಗಳಿಗೆ (ಸಾಮಾನ್ಯ ವರ್ಗ)-35ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

    ಅರ್ಜಿ ಶುಲ್ಕ: ಮೇಲ್ಕಂಡ ಹುದ್ದೆಗಳಲ್ಲಿ ಎಲ್ಲಾ ಹುದ್ದೆಗಳಿಗೆ ರೂ.1000 ಅರ್ಜಿ ಶುಲ್ಕ ವಿಧಿಸಲಾಗಿದೆ. ಆದರೆ ಅಟೆಂಡರ್/ಡ್ರೈವರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮತ್ತು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ವರ್ಗ -1 ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ʼThe Mangalore Catholic Co-operative Bank Ltd” ಇವರ ಹೆಸರಿಗೆ ಡಿಡಿ ಮುಖಾಂತರ ಪಾವತಿ ಮಾಡಬೇಕು

    ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವ ವಿಧಾನ
    ಅರ್ಜಿ ನಮೂನೆಯನ್ನು ಅಭ್ಯರ್ಥಿಗಳು ಬ್ಯಾಂಕಿನ ವೆಬ್‌ಸೈಟ್‌ನಿಂದ www.mccbank.in ಮೂಲಕ ಡೌನ್‌ಲೋಡ್‌ ಮಾಡಿ ಭರ್ತಿ ಮಾಡಬೇಕು.

    ಹೆಚ್ಚಿನ ವಿವರಗಳಿಗೆ ಬ್ಯಾಂಕ್‌ ಫೋನ್‌ ನಂಬರ್‌ 0824-2445746

    ಹುದ್ದೆಯ ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • BPNL Recruitment 2024: ಪಶುಪಾಲನಾ ನಿಗಮದಲ್ಲಿ 1125 ಹುದ್ದೆಗಳಿಗೆ ಅರ್ಜಿ ಆಹ್ವಾನ; 10th ಪಾಸಾದವರು ಅರ್ಜಿ ಸಲ್ಲಿಸಿ

    BPNL Recruitment 2024: ಪಶುಪಾಲನಾ ನಿಗಮದಲ್ಲಿ 1125 ಹುದ್ದೆಗಳಿಗೆ ಅರ್ಜಿ ಆಹ್ವಾನ; 10th ಪಾಸಾದವರು ಅರ್ಜಿ ಸಲ್ಲಿಸಿ

    BPNL Recruitment 2024: 1125 ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 1125 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಂಟರ್ ಅಸಿಸ್ಟೆಂಟ್, ಸೆಂಟರ್ ಎಕ್ಸ್‌ಟೆನ್ಶನ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 21-Mar-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಆನ್‌ಲೈನ್‌ನಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 10-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-03-2024

    ಹುದ್ದೆಯ ಕುರಿತು ಮಾಹಿತಿ ಇಲ್ಲಿದೆ
    ಹುದ್ದೆ ಹೆಸರು: ಸೆಂಟರ್ ಅಸಿಸ್ಟೆಂಟ್, ಸೆಂಟರ್ ಎಕ್ಸ್‌ಟೆನ್ಶನ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು, ಒಟ್ಟು 1125 ಹುದ್ದೆಗಳು ಖಾಲಿ ಇದೆ.

    ವೇತನ: ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.37,500-ರೂ.43,500 ವೇತನ ನಿಗದಿಪಡಿಸಲಾಗಿದೆ.
    ಸೆಂಟರ್‌ ಇನ್‌ ಚಾರ್ಜ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.43,500, ಸೆಂಟರ್‌ ಎಕ್ಸ್‌ಟೆಂಶನ್ ಆಫೀಸರ್‌ ಹುದ್ದೆಗೆ ರೂ.40500/- ಮಾಸಿಕ ವೇತನ, ಸೆಂಟರ್‌ ಅಸಿಸ್ಟೆಂಟ್‌ ಹುದ್ದೆಗೆ ಆಯ್ಕೆಯಾದವರಿಗೆ ರೂ.37,500/- ವೇತನ ನಿಗದಿಪಡಿಸಲಾಗಿದೆ.

    ಹುದ್ದೆ ಸಂಖ್ಯೆ;
    ಸೆಂಟರ್‌ ಇನ್‌ ಚಾರ್ಜ್‌-125 ಹುದ್ದೆಗಳು, ಸೆಂಟರ್‌ ಎಕ್ಸ್‌ಟೆಂಶನ್‌ ಆಫೀಸರ್‌ -250 ಹುದ್ದೆಗಳು, ಸೆಂಟರ್‌ ಅಸಿಸ್ಟೆಂಟ್‌ -750 ಹುದ್ದೆಗಳು ಖಾಲಿ ಇದೆ.

    ವಿದ್ಯಾರ್ಹತೆ: ಸೆಂಟರ್‌ ಇನ್‌ ಚಾರ್ಜ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯನ್ನು ಪಡೆದಿರಬೇಕು. ಸೆಂಟರ್‌ ಎಕ್ಸ್‌ಟೆಂಶನ್‌ ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು 12th ಪಾಸಾಗಿರಬೇಕು, ಸೆಂಟರ್‌ ಅಸಿಸ್ಟೆಂಟ್‌ ಹುದ್ದೆಗೆ 10th ಪಾಸಾದವರು ಅರ್ಜಿ ಸಲ್ಲಿಸಬಹುದು

    ವಯೋಮಿತಿ: ಸೆಂಟರ್‌ ಇನ್‌ ಚಾರ್ಜ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 21-40 ವರ್ಷದೊಳಗಿರಬೇಕು. ಸೆಂಟರ್‌ ಎಕ್ಸ್‌ಟೆಂಶನ್‌ ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 21-40 ವರ್ಷದೊಳಗಿರಬೇಕು.
    ಸೆಂಟರ್‌ ಅಸಿಸ್ಟೆಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 18-40 ವರ್ಷದೊಳಗಿರಬೇಕು.
    ವಯೋಮಿತಿ ಸಡಿಲಿಕೆಯನ್ನು ನಿಯಮಾನುಸಾರ ನೀಡಲಾಗುತ್ತದೆ.

    ಅರ್ಜಿ ಶುಲ್ಕ: ಸೆಂಟರ್‌ ಇನ್‌ ಚಾರ್ಜ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ.944 ಅರ್ಜಿ ಶುಲ್ಕ ಪಾವತಿ ಮಾಡಬೇಕು, ಸೆಂಟರ್‌ ಎಕ್ಸ್‌ಟೆಂಶನ್‌ ಆಫೀಸರ್‌ ಹುದ್ದೆಗೆ ರೂ.826 ಅರ್ಜಿ ಶುಲ್ಕ, ಸೆಂಟರ್‌ ಅಸಿಸ್ಟೆಂಟ್‌ ಹುದ್ದೆಗೆ ರೂ.708 ಅರ್ಜಿ ಶುಲ್ಕ ಪಾವತಿ ಮಾಡಬೇಕು. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

  • Karnataka Apex Bank Recruitment 2024: ಕರ್ನಾಟಕ ಅಪೆಕ್ಸ್‌ ಬ್ಯಾಂಕ್‌ನಲ್ಲಿ 93 ಸಹಾಯಕರ ಹುದ್ದೆ; ಪದವೀಧರರಿಗೆ ಸುವರ್ಣಾವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ

    Karnataka Apex Bank Recruitment 2024: ಕರ್ನಾಟಕ ಅಪೆಕ್ಸ್‌ ಬ್ಯಾಂಕ್‌ನಲ್ಲಿ 93 ಸಹಾಯಕರ ಹುದ್ದೆ; ಪದವೀಧರರಿಗೆ ಸುವರ್ಣಾವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ

    Karnataka Apex Bank Recruitment 2024: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್ ನಿ., ಬೆಂಗಳೂರು, ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಒಟ್ಟು 93 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬ್ಯಾಂಕ್‌ ಸಹಾಯಕರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-04-2024

    ಹುದ್ದೆಗಳ ವಿವರ:
    ಒಟ್ಟು ಹುದ್ದೆಗಳ ಸಂಖ್ಯೆ 93. ನೇಮಕಾತಿ ಸಂದರ್ಭದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ /ಕಡಿಮೆ ಮಾಡುವ ಅಧಿಕಾರ ಬ್ಯಾಂಕ್‌ಗೆ ಇದೆ.

    ವೇತನ: ಮೇಲ್ಕಂಡ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.28,425 ರಿಂದ ರೂ.87,125 ಶ್ರೇಣಿಯಲ್ಲಿ ಮಾಸಿಕ ವೇತನ ನೀಡಲಾಗುವುದು.

    ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದ ಯಾವುದೇ ಪರೀಕ್ಷೆಯಲ್ಲಿ ತೇರ್ಗಡೆಯಾಗಿರತಕ್ಕದ್ದು. ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಭಾಷಾ ವಿಷಯಗಳು ಸೇರಿದಂತೆ ಕ್ರೋಢೀಕೃತ ಶೇಕಡ 55 ರಷ್ಟು ಅಂಕಗಳೊಂದಿಗೆ ಹಾಗೂ ಪರಿಶಿಷ್ಟ ಜಾರಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮತ್ತು ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇಕಡ 50 ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರತಕ್ಕದ್ದು. ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡ ಮಾತನಾಡಲು , ಅರ್ಥ ಮಾಡಿಕೊಳ್ಳಲು ತಿಳಿದಿರಬೇಕು. ಕಂಪ್ಯೂಟರ್‌ ಅಪರೇಷನ್‌, ಅಪ್ಲಿಕೇಷನ್‌ನಲ್ಲಿ ಜ್ಞಾನ ಇರಬೇಕು. ಸಹಕಾರ ವಿಷಯದಲ್ಲಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

    ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಹಾಗೂ ಈ ಕೆಳಕಂಡಂತೆ ಗರಿಷ್ಠ ವಯೋಮಿತಿ ಮೀರಿರಬಾರದು.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು -40 ವರ್ಷಗಳು,
    ಇತರೆ ಹಿಂದುಳಿದ ಜಾತಿ/ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು-38ವರ್ಷಗಳು,
    ಸಾಮಾನ್ಯ ವರ್ಗದ ಅಭ್ಯರ್ಥಿಗಳು-35 ವರ್ಷಗಳು
    ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಆಯಾ ವರ್ಗ/ಪ್ರವರ್ಗಗಳನ್ವಯ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ನಿಗದಿಪಡಿಸಲಾಗಿದೆ.
    ಮಾಜಿ ಸೈನಿಕ ಅಭ್ಯರ್ಥಿಗಳಿಗೆ, ಅವರು “ಸೇವೆ ಸಲ್ಲಿಸಿದ ಅವಧಿಯ” ಜೊತೆಗೆ ಹೆಚ್ಚುವರಿ 03 ವರ್ಷಗಳ ರಿಯಾಯಿತಿಯನ್ನು ನೀಡಲಾಗುವುದು.

    ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳು ರೂ.500, ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ಜಾತಿ/ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ 2ಎ, 2ಬಿ,3ಎ,3ಬಿ ಅಭ್ಯರ್ಥಿಗಳಿಗೆ ರೂ.1000 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಅರ್ಜಿಗಳ ಪರಿಶೀಲನೆಯ ನಂತರ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಮೌಖಿತ ಸಂದರ್ಶನದ ಪ್ರಕ್ರಿಯೆಯ ಮೂಲಕ ನೇಮಕಾತಿ ಮಾಡಲಾಗುವುದು.

    ಅರ್ಜಿ ಸಲ್ಲಿಸುವ ವಿಧಾನ
    ಅರ್ಜಿ ಸಲ್ಲಿಕೆ ಮಾಡಿದ ಆರಂಭದ ದಿನದಂದು ವೆಬ್‌ಸೈಟ್‌ ತೆರೆದಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 06-04-2024 ರ ಸಾಯಂಕಾಲ 5.30 ಗಂಟೆಯೊಳಗೆ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಓರ್ವ ಅಭ್ಯರ್ಥಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರವನ್ನು ಒಂದು ಹಾಳೆಯ ಮೆಲಿಟ್ಟು ಅದರ ಕೆಳಗೆ ಕಪ್ಪು ಶಾಹಿಯ ಸ್ಕೆಚ್‌/ಮಾರ್ಕರ್‌ ಪೆನ್‌ನಲ್ಲಿ ಸಹಿಯನ್ನು ಸ್ಕ್ಯಾನ್‌ ಮಾಡಿ ಅರ್ಜಿಗೆ ಅಪ್ಲೋಡ್‌ ಮಾಡಬೇಕು.

    ಅರ್ಜಿಯನ್ನು ಕಡ್ಡಾಯವಾಗಿ ಆನ್‌ಲೈನ್‌ ಮುಖಾಂತರವೇ ಬ್ಯಾಂಕಿನ ವೆಬ್‌ಸೈಟ್‌ www.karnatakaapex.com ಮೂಲಕವೇ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಸಲ್ಲಿಸಿದ ಅರ್ಜಿಯನ್ನು ಡೌನ್‌ಲೋಡ್‌ ಮಾಡಿ ಪ್ರತಿಯನ್ನು ಪರಿಶೀಲನಾ ಸಮಯದಲ್ಲಿ ಹಾಜರುಪಡಿಸುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • Karnataka Jobs: ಗ್ರಾಮ ಪಂಚಾಯತ್‌ನಲ್ಲಿ ಕೆಲಸ, ಪಿಯು ಪಾಸಾದವರಿಗೆ ಉದ್ಯೋಗ

    Karnataka Jobs: ಗ್ರಾಮ ಪಂಚಾಯತ್‌ನಲ್ಲಿ ಕೆಲಸ, ಪಿಯು ಪಾಸಾದವರಿಗೆ ಉದ್ಯೋಗ

    Uttara Kannada Grama Panchayat Recruitment 2024: ಉತ್ತರ ಕನ್ನಡ ಗ್ರಾಮ ಪಂಚಾಯತ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿವಿಧ ಲೈಬ್ರರಿ ಮೇಲ್ವಿಚಾರಕರ ಹುದ್ದೆಗಳಿಗೆ ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ಉತ್ತರ ಕನ್ನಡ – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 20-Mar-2024 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-03-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-03-2024

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ;
    ಹುದ್ದೆಯ ಹೆಸರು: ಗ್ರಂಥಾಲಯ ಮೇಲ್ವಿಚಾರಕರು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಎಷ್ಟು ಹುದ್ದೆಗಳು ಖಾಲಿ ಇದೆ ಎಂದು ಇನ್ನೂ ಕೂಡಾ ನಿರ್ದಿಷ್ಟಪಡಿಸಿಲ್ಲ.

    ವೇತನ: ಉತ್ತರ ಕನ್ನಡ ಗ್ರಾಮ ಪಂಚಾಯತ್ ನಿಯಮಗಳ ಪ್ರಕಾರ ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ: ಉತ್ತರ ಕನ್ನಡ ಗ್ರಾಮ ಪಂಚಾಯತ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಗ್ರಂಥಾಲಯ ಮೇಲ್ವಿಚಾರಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು.

    ಆಯ್ಕೆ ಪ್ರಕ್ರಿಯೆ; ಮೆರಿಟ್‌ ಲಿಸ್ಟ್‌ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ? ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Office of Gram Panchayat Development Officer, Uttar Kannada, Karnataka ಇಲ್ಲಿಗೆ 20-Mar-2024 ರಂದು ಅಥವಾ ಮೊದಲು ಕಳುಹಿಸಬೇಕು.

  • NHPC Recruitment 2024: ಎನ್‌ಎಚ್‌ಪಿಸಿ ನಿಗಮದಿಂದ 269 ಹುದ್ದೆಗಳ ನೇಮಕ; ಅರ್ಜಿ ಸಲ್ಲಿಕೆಗೆ 26 ಮಾರ್ಚ್‌ ಕೊನೆಯ ದಿನಾಂಕ

    NHPC Recruitment 2024: ಎನ್‌ಎಚ್‌ಪಿಸಿ ನಿಗಮದಿಂದ 269 ಹುದ್ದೆಗಳ ನೇಮಕ; ಅರ್ಜಿ ಸಲ್ಲಿಕೆಗೆ 26 ಮಾರ್ಚ್‌ ಕೊನೆಯ ದಿನಾಂಕ

    NHPC Recruitment 2024: ನ್ಯಾಷನಲ್ ಹೈಡ್ರೊ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NHPC) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 269 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಟ್ರೈನಿ ಇಂಜಿನಿಯರ್/ಟ್ರೇನಿ ಆಫೀಸರ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತ ಸರ್ಕಾರದಲ್ಲಿ ಉದ್ಯೋಗ ಹುಡುಕುವವರಿಗೆ ಇದೊಂದು ಸುವರ್ಣಾವಕಾಶ. ಆಸಕ್ತ ಅಭ್ಯರ್ಥಿಗಳು 26-Mar-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 06-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 26-03-2024

    ಹುದ್ದೆಗಳ ಕುರಿತ ಮಾಹಿತಿ ಇಲ್ಲಿದೆ
    ಹುದ್ದೆ ಹೆಸರು; ಟ್ರೈನಿ ಇಂಜಿನಿಯರ್/ಟ್ರೇನಿ ಆಫೀಸರ್‌ ಹುದ್ದೆಗಳನ್ನು ಎನ್‌ಎಚ್‌ಪಿಸಿಯಲ್ಲಿ ಭರ್ತಿ ಮಾಡಲಾಗುತ್ತಿದೆ.

    ಹುದ್ದೆ ಹೆಸರು ಮತ್ತು ಹುದ್ದೆ ಸಂಖ್ಯೆ;
    ಟ್ರೈನಿ ಇಂಜಿನಿಯರ್ (ಸಿವಿಲ್) 91, ಟ್ರೈನಿ ಇಂಜಿನಿಯರ್ (ಮೆಕ್ಯಾನಿಕಲ್) 74, ಟ್ರೈನಿ ಇಂಜಿನಿಯರ್ (ಎಲೆಕ್ಟ್ರಿಕಲ್) 72, ಟ್ರೈನಿ ಇಂಜಿನಿಯರ್ (ಇ & ಸಿ) 4, ಟ್ರೈನಿ ಇಂಜಿನಿಯರ್/ಅಧಿಕಾರಿ (IT) 19, ತರಬೇತಿ ಅಧಿಕಾರಿ (ಭೂವಿಜ್ಞಾನ) 3, ತರಬೇತಿ ಇಂಜಿನಿಯರ್/ಅಧಿಕಾರಿ (ಪರಿಸರ) 6 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಒಟ್ಟು 269 ಹುದ್ದೆಗಳು ಖಾಲಿ ಇದೆ.

    ವೇತನ: ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.50000-160000/-ರೂ. ವೇತನವಿರಲಿದೆ.

    ವಿದ್ಯಾರ್ಹತೆ: ಮೇಲ್ಕಂಡ ಹುದ್ದೆಗಳಿಗೆ ತಕ್ಕಂತೆ ಅಭ್ಯರ್ಥಿಗಳು ವಿದ್ಯಾರ್ಹತೆಯನ್ನು ಹೊಂದಿರಏಕು. ಸಿವಿಲ್‌ ಇಂಜಿನಿಯರಿಂಗ್‌/ಟೆಕ್ನಾಲಜಿ/ಮೆಕ್ಯಾನಿಕಲ್‌ ಇಂಜಿನಿಯರಿಂಗ್‌/ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌, ಕಮ್ಯುನಿಕೇಷನ್‌ ಇಂಜಿನಿಯರಿಂಗ್‌,ಡಿಗ್ರಿ, ಎಂಸಿಎ,ಎಂ.ಎಸ್ಸಿ ಇನ್‌ ಜಿಯೋಲಾಜಿ/ಎನ್‌ವೈರ್‌ಮೆಂಟಲ್‌ ಇಂಜಿನಿಯರಿಂಗ್‌ ಪದವಿಯನ್ನು ಹೊಂದಿರಬೇಕು.

    ವಯೋಮಿತಿ: ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷಗಳನ್ನು ಮೀರಿರಬಾರದು. ಉಳಿದ ಹಾಗೆ, OBC (NCL) ಅಭ್ಯರ್ಥಿಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwBD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PwBD [OBC (NCL)] ಅಭ್ಯರ್ಥಿಗಳಿಗೆ 13 ವರ್ಷ, PwBD (SC/ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: SC/ST/ಮಹಿಳೆಯರು/ಮಾಜಿ ಸೈನಿಕರು/PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. UR/EWS/OBC (NCL) ಅಭ್ಯರ್ಥಿಗಳಿಗೆ ರೂ.708/- ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಅರ್ಜಿ ಶುಲ್ಕ ಪಾವತಿಯನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಲು ಸೂಚಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಗೇಟ್ 2023 ಅಂಕಗಳು, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು, ಹುದ್ದೆಯ ನೋಟಿಫಿಕೇಶನ್‌ಗೆ ಕ್ಲಿಕ್‌ ಮಾಡಿ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

  • Goa Shipyard Recruitment: ಗೋವಾ ಶಿಪ್‌ಯಾರ್ಡ್‌ನಲ್ಲಿ ನೇಮಕಾತಿ; ಡಿಪ್ಲೊಮಾ, ಡಿಗ್ರಿ ಆಗಿದ್ರೆ ಅರ್ಜಿ ಹಾಕಿ

    Goa Shipyard Recruitment 2024: ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 106 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಾನ್‌ ಎಕ್ಸಿಕ್ಯೂಟಿವ್‌-ಅಸಿಸ್ಟಂಟ್‌ ಸೂಪರಿಂಟೆಂಡಂಟ್‌, ಟೆಕ್ನಿಕಲ್‌ ಅಸಿಸ್ಟಂಟ್‌, ಆಫೀಸ್‌ ಅಸಿಸ್ಟಂಟ್‌, ಕ್ಲೆರಿಕಲ್‌ ಸ್ಟಾಫ್‌, ಪೇಂಟರ್‌, ವೆಹಿಕಲ್‌ ಡ್ರೈವರ್‌ ಮತ್ತು ಇತರೆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಓದಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 28-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-03-2024

    ಹುದ್ದೆಗಳ ವಿವಿರ ಇಲ್ಲಿದೆ;
    ಹುದ್ದೆಗಳ ವಿವರ;
    ಅಸಿಸ್ಟಂಟ್ ಸೂಪರಿಂಟೆಂಡಂಟ್ : 04
    ಟೆಕ್ನಿಕಲ್ ಅಸಿಸ್ಟಂಟ್ : 31
    ಆಫೀಸ್ ಅಸಿಸ್ಟಂಟ್ – ಕ್ಲೆರಿಕಲ್ ಸ್ಟಾಫ್: 32
    ಆಫೀಸ್ ಅಸಿಸ್ಟಂಟ್ (ಫೈನಾನ್ಸ್‌ / ಐಎ/) : 06
    ಪೇಂಟರ್ : 20, ಹಾಗೂ ಉಳಿದಂತೆ ಇತರೆ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
    ಒಟ್ಟು 106 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವಯೋಮಿತಿ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 36 ವರ್ಷ ಮೀರಿರಬಾರದು.

    ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಎಂಬಿಎ/ಇತರೆ ಪಿಜಿ/ಯುಜಿ/ವಿವಿಧ ಬ್ರ್ಯಾಂಚ್‌ಗಳಲ್ಲಿ ಡಿಪ್ಲೋಮಾ ಇನ್‌ ಇಂಜಿನಿಯರಿಂಗ್‌ ತೇರ್ಗಡೆ ಹೊಂದಿರಬೇಕು.

    ಅರ್ಜಿ ಶುಲ್ಕ:
    ಎಸ್‌ಸಿ,ಎಸ್‌ಟಿ, PWD, ಮಾಜಿ ಸೈನಿಕ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಉಳಿದವರು ರೂ.200 ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ವಿಶೇಷ ಸೂಚನೆ; ಅಭ್ಯರ್ಥಿಗಳು ಮೇಲ್ಕಂಡ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು. ಇತರೆ ಯಾವುದೇ ಮಾಧ್ಯಮದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮೇಲ್ಕಂಡ ಹುದ್ದೆಗಳನ್ನು ಮೂರು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ