Tag: ಕನ್ನಡ ಸುದ್ದಿಗಳು

  • Karnataka KAS Jobs 2024: 384 ಕೆಎಎಸ್‌ ಹುದ್ದೆ ಅರ್ಜಿ ದಿನಾಂಕ ಮುಂದೂಡಿಕೆ

    Karnataka KAS Jobs 2024: 384 ಕೆಎಎಸ್‌ ಹುದ್ದೆ ಅರ್ಜಿ ದಿನಾಂಕ ಮುಂದೂಡಿಕೆ

    Karnataka KAS Jobs 2024: ಕರ್ನಾಟಕ ಗೆಜೆಟೆಡ್‌ ಪ್ರೊಬೆಷನರ್‌ ನಿಯಮಗಳಡಿಯಲ್ಲಿ ಗೆಜೆಟೆಡ್‌ ಪ್ರೊಬೆಷನರ್‌ 2023-24 ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಒಟ್ಟು 384 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಹುದ್ದೆಯ ಕೊನೆಯ ದಿನಾಂಕ 03-04-2024 ಕೊನೆಯ ದಿನಾಂಕವಾಗಿತ್ತು. ಆದರೆ ಇದೀಗ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಹೌದು. 15-04-2024 ರವರೆಗೆ ನೀವು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಆರಂಭಿಕ ದಿನಾಂಕ; 04-03-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-04-2024
    ಪೂರ್ವಭಾವಿ ಪರೀಕ್ಷಾ ದಿನಾಂಕ (ತಾತ್ಕಾಲಿಕ) : 07-07-2024

    ಹುದ್ದೆಗಳ ವಿವರ;
    ಹುದ್ದೆ ಹೆಸರು: ಗೆಜೆಟೆಡ್‌ ಪ್ರೊಬೆಷನರ್ಸ್‌ (ಕೆಎಎಸ್‌ ಹುದ್ದೆಗಳು) ಗ್ರೂಪ್‌-ಎ, ಗ್ರೂಪ್‌ ಬಿ 384 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ:
    ಗ್ರೂಪ್‌ ಎ ಹುದ್ದೆಗಳು: 159
    ಗ್ರೂಪ್‌ ಬಿ ಹುದ್ದೆಗಳು: 225

    ವಿದ್ಯಾರ್ಹತೆ: ಪದವಿ ಅಥವಾ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
    ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷಗಳು, ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 41 ವರ್ಷಗಳು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷಗಳು

    ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರೂ.600, ಪ್ರವರ್ಗ 2(ಎ),2(ಬಿ),3(ಎ),3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.300, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ನೆಟ್‌ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌,ಯುಪಿಐ ಮೂಲಕ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
    ಹೊಸದಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅರ್ಜಿದಾರರು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ https://kpsconline.karnataka.gov.in ಗೆ ಭೇಟಿ ನೀಡಬೇಕು ಮತ್ತು ತಮ್ಮನ್ನು ನೋಂದಾಯಿಸಿಕೊಳ್ಳಲು New Registration ಲಿಂಕ್‌ಅನ್ನು ಕ್ಲಿಕ್ ಮಾಡಬೇಕು.
    ನೋಂದಣಿ ಮತ್ತು ಲಾಗಿನ್‌ ರುಜುವಾತುಗಳನ್ನು ಮಾಡಲು ಇಮೇಲ್‌ ಐಡಿ ಮತ್ತು ಮೊಬೈಲ್‌ ಸಂಖ್ಯೆಯನ್ನು ಇಟ್ಟುಕೊಳ್ಳಬೇಕು.
    ಒಮ್ಮೆ ನೋಂದಾಯಿಸಿದ ಮತ್ತು ಲಾಗಿನ್‌ ಆದ ನಂತರ ಅರ್ಜಿದಾರರ ವಿವರಗಳ ನೋಂದಣಿ ಕ್ಲಿಕ್‌ ಮಾಡಿ ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕು.
    ಅಭ್ಯರ್ಥಿಗಳು ಒಮ್ಮೆ ಮಾತ್ರ ಅರ್ಜಿ ಭರ್ತಿ ಮಾಡಬೇಕಾಗುತ್ತದೆ. ಹಾಗಾಗಿ ನಿಮ್ಮ user id ಮತ್ತು passoword ಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು.
    ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ಅನಂತರ ಸಲ್ಲಿಸು ಬಟನ್‌ ಕ್ಲಿಕ್‌ ಮಾಡಬೇಕು. ಸಲ್ಲಿಸಿದ ನಂತರ ವಿವರಗಳನ್ನು ತಪ್ಪಾಗಿ ಸಲ್ಲಿಸಿದ್ದಲ್ಲಿ ಸರಿಪಡಿಸಿಕೊಳ್ಳಲು ಆಯೋಗಕ್ಕೆ ಪತ್ರ ವ್ಯವಹಾರ ಅಥವಾ ಇ-ಮೇಲ್‌ ಮೂಲಕ ಕಳುಹಿಸುವ ಕೋರಿಕೆಯನ್ನು ಪರಿಗಣಿಸಲಾಗುವುದಿಲ್ಲ.

    ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಭರ್ತಿ ಮಾಡಿ, ಭಾವಚಿತ್ರ./ಸಹಿ/ವಯೋಮಿತಿ/ವಿದ್ಯಾರ್ಹತೆ ಹಾಗೂ ಕೋರಿದ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಅಪ್ಲೋಡ್‌ ಮಾಡಿದ ನಂತರ ಶುಲ್ಕವನ್ನು ನೆಟ್‌ಬ್ಯಾಂಕಿಂಗ್‌/ಡೆಬಿಟ್‌ ಕಾರ್ಡ್‌/ಕ್ರೆಡಿಟ್‌ ಕಾರ್ಡ್‌/ಯುಪಿಐ ಮೂಲಕ ಸಂದಾಯ ಮಾಡಬಹುದು.

    ಶುಲ್ಕವನ್ನು ಪಾವತಿಸದ ಹಾಗೂ ದಾಖಲೆಗಳನ್ನು/ಭಾವಚಿತ್ರ/ಸಹಿಯನ್ನು ಅಪ್ಲೋಡ್‌ ಮಾಡದೇ ಇರುವ ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್‌ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಂದರೆ ಉಂಟಾದಲ್ಲಿ ಈ ಕೆಳಕಂಡ ಹೆಲ್ಪ್‌ಲೈನ್‌ ನಂಬರ್‌ ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ. 080-30574957/30574901

    ದಿನಾಂಕ ವಿಸ್ತರಣೆ ಮಾಡಿದ ನೋಟಿಫಿಕೇಶನ್‌ ಇಲ್ಲಿದೆ

  • EPFO Jobs: ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಉದ್ಯೋಗಾವಕಾಶ; ಮಾಸಿಕ 2 ಲಕ್ಷಕ್ಕಿಂತ ಹೆಚ್ಚಿನ ಸಂಬಳ

    EPFO Jobs: ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಉದ್ಯೋಗಾವಕಾಶ; ಮಾಸಿಕ 2 ಲಕ್ಷಕ್ಕಿಂತ ಹೆಚ್ಚಿನ ಸಂಬಳ

    EPFO Recruitment 2024: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 92 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ​​ಸಹಾಯಕ ನಿರ್ದೇಶಕ, ಉಪ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಸಕ್ತರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 15-Apr-2024 ರಂದು ಅಥವಾ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-02-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-04-2024

    ಹುದ್ದೆಯ ವಿವರ ಈ ಕೆಳಗೆ ನೀಡಲಾಗಿದೆ;
    ಹುದ್ದೆ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯಲ್ಲಿ ಒಟ್ಟು 92 ಹುದ್ದೆಗಳು ಖಾಲಿ ಇದ್ದು, ಸಹಾಯಕ ನಿರ್ದೇಶಕ, ಉಪನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು 92 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15600-209200/- ದೊರಕಲಿದೆ.

    ಹುದ್ದೆ ಹೆಸರು ಮತ್ತು ಸಂಖ್ಯೆ: ಉಪ ನಿರ್ದೇಶಕರು (ವಿಜಿಲೆನ್ಸ್) 10, ಸಹಾಯಕ ನಿರ್ದೇಶಕರು (ವಿಜಿಲೆನ್ಸ್) 12, ಉಪ ನಿರ್ದೇಶಕರು (ಆಡಿಟ್) 13, ಸಹಾಯಕ ನಿರ್ದೇಶಕರು (ಆಡಿಟ್) 15, ಜಂಟಿ ನಿರ್ದೇಶಕ (IS) 6
    ಉಪ ನಿರ್ದೇಶಕರು (IS) 12, ಸಹಾಯಕ ನಿರ್ದೇಶಕ (IS) 24 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಶೈಕ್ಷಣಿಕ ಅರ್ಹತೆ: ಉಪ ನಿರ್ದೇಶಕರು (ವಿಜಿಲೆನ್ಸ್) , ಸಹಾಯಕ ನಿರ್ದೇಶಕ (ವಿಜಿಲೆನ್ಸ್), ಉಪ ನಿರ್ದೇಶಕರು (ಆಡಿಟ್), ಸಹಾಯಕ ನಿರ್ದೇಶಕ (ಆಡಿಟ್) ಹುದ್ದೆಗಳಿಗೆ ಇಪಿಎಫ್ಒ ನಿಯಮಗಳ ಪ್ರಕಾರ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.
    ಜಂಟಿ ನಿರ್ದೇಶಕ (IS), ಉಪ ನಿರ್ದೇಶಕ (IS), ಸಹಾಯಕ ನಿರ್ದೇಶಕ (IS) ಹುದ್ದೆಗೆ ಅಭ್ಯರ್ಥಿಗಳು ಪದವಿ, B.E ಅಥವಾ B.Tech, MCA, M.Sc ಪಾಸ್‌ ಆಗಿರಬೇಕು.

    ವಯೋಮಿತಿ: EPFO ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳನ್ನು ಮೀರಿರಬಾರದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯು ಅನ್ವಯವಾಗಲಿದೆ.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ: ಉಪ ನಿರ್ದೇಶಕರು (ವಿಜಿಲೆನ್ಸ್) , ಸಹಾಯಕ ನಿರ್ದೇಶಕ (ವಿಜಿಲೆನ್ಸ್), ಉಪ ನಿರ್ದೇಶಕರು (ಆಡಿಟ್), ಸಹಾಯಕ ನಿರ್ದೇಶಕ (ಆಡಿಟ್) ಹುದ್ದೆಗೆ ಆಯ್ಕೆಯಾದವರಿಗೆ ರೂ.15600-39100/-ರವರೆಗೆ ವೇತನ ಇರಲಿದೆ.
    ಜಂಟಿ ನಿರ್ದೇಶಕರು ಈ ಹುದ್ದೆಗೆ ಆಯ್ಕೆಯಾದವರಿಗೆ (IS) ರೂ.78800-209200/- ವೇತನ ಸಿಗಲಿದೆ.
    ಉಪ ನಿರ್ದೇಶಕರು ಈ ಹುದ್ದೆಗೆ ಆಯ್ಕೆಯಾದವರಿಗೆ (IS) ರೂ.67700-208700/- ವೇತನ ಸಿಗಲಿದೆ.
    ಸಹಾಯಕ ನಿರ್ದೇಶಕರು ಈ ಹುದ್ದೆಗೆ ಆಯ್ಕೆಯಾದವರಿಗೆ (IS) ರೂ.56100-177500/- ವೇತನ ಸಿಗಲಿದೆ.

    ಅಭ್ಯರ್ಥಿಗಳು ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಎಪ್ರಿಲ್‌ 15,2024 ರೊಳಗೆ ತಲುಪುವಂತೆ ಕಳುಹಿಸಬೇಕು.
    ವಿಳಾಸ ಇಲ್ಲಿದೆ;
    Shri Deepak Arya, Regional Provident Fund Commissioner-II (HRM-II), Bhavishya Nidhi Bhawan, 14 Bhikaiji Cama Place, New Delhi-110066

  • Post Office Jobs: ಐಪಿಪಿಬಿ ಇಂದ 47 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.30ಸಾವಿರ ಸಂಬಳ

    Post Office Jobs: ಐಪಿಪಿಬಿ ಇಂದ 47 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.30ಸಾವಿರ ಸಂಬಳ

    Indian Post Payments Bank Recruitment 2024: ಇಂಡಿಯನ್‌ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಎಕ್ಸಿಕ್ಯೂಟಿವ್‌ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು. ಒಟ್ಟು 47 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

    ಇಂಡಿಯನ್‌ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಸೇಲ್ಸ್‌ ಮತ್ತು ಅಪರೇಷನ್ಸ್‌ ವಿಭಾಗದಲ್ಲಿ ಈ ಪೋಸ್ಟ್‌ಗಳನ್ನು ಮಾಡಲಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-04-2024 (11.59 ಗಂಟೆ ರಾತ್ರಿ ವರೆಗೆ)
    ಅರ್ಜಿ ಪ್ರಿಂಟ್‌ ತೆಗೆದುಕೊಳ್ಳುವ ಕೊನೆಯ ದಿನಾಂಕ: 20-04-2024 (11.59ಗಂಟೆ ರಾತ್ರಿ ವರೆಗೆ)

    ಹುದ್ದೆ ವಿವಿರ ಇಲ್ಲಿದೆ;
    ಹುದ್ದೆ ಹೆಸರು: ಅಂಚೆ ವೃತ್ತದ ಎಕ್ಸಿಕ್ಯೂಟಿವ್‌
    ಹುದ್ದೆಗಳ ಒಟ್ಟು ಸಂಖ್ಯೆ: 47

    ಹುದ್ದೆಗಳ ವಿಂಗಡಣೆ;
    ಸಾಮಾನ್ಯ ವರ್ಗ – 21 ಹುದ್ದೆಗಳು
    ಆರ್ಥಿಕ ಹಿಂದುಳಿದವರಿಗೆ -04 ಹುದ್ದೆಗಳು
    ಒಬಿಸಿ ಅಭ್ಯರ್ಥಿಗಳಿಗೆ 12 ಹುದ್ದೆಗಳು
    ಪರಿಶಿಷ್ಟ ಜಾತಿ – 07 ಹುದ್ದೆಗಳು
    ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ – 3 ಹುದ್ದೆಗಳು
    ಒಟ್ಟು 47 ಹುದ್ದೆಗಳು ಖಾಲಿ ಇದೆ.

    ಕರ್ನಾಟಕದಲ್ಲಿ ಐಪಿಪಿಬಿ ಎಕ್ಸಿಕ್ಯೂಟಿವ್‌ ಹುದ್ದೆ ಸಂಖ್ಯೆ – 01 ಹುದ್ದೆ

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

    ವಿದ್ಯಾರ್ಹತೆ: ಪದವಿ ಪಾಸ್‌ ಆಗಿರಬೇಕು. ಎಂಬಿಎ ಇನ್‌ ಸೇಲ್ಸ್‌ ಅಥವಾ ಮಾರ್ಕೆಟಿಂಗ್‌ ಓದಿದವರಿಗೆ ಮೊದಲ ಆದ್ಯತೆ. ಸೇಲ್ಸ್‌/ ಅಪರೇಷನ್ಸ್‌ ಇನ್‌ ಫೈನಾನ್ಸ್‌ ನಲ್ಲಿ ಕಾರ್ಯಾರ್ನುಭವ ಇದ್ದರೆ ಹೆಚ್ಚಿನ ಆದ್ಯತೆ. ಈ ಹುದ್ದೆಗೆ ಫ್ರೆಶರ್ಸ್‌ಗಳು ಅರ್ಜಿ ಹಾಕಬಹುದು.

    ಆಯ್ಕೆ ವಿಧಾನ: ಪದವಿ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುವುದು, ನಂತರ ಗುಂಪು ಚರ್ಚೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ವೇತನ: ಈ ಮೇಲೆ ತಿಳಿಸಿದ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30000 ವೇತನ ನೀಡಲಾಗುವುದು.

    ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ/ಪಿಡಬ್ಲೂಡಿ ಅಭ್ಯರ್ಥಿಗಳಿಗೆ -150 ರೂ., ಉಳಿದ ಎಲ್ಲರಿಗೂ ರೂ.750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿವುದು ಹೇಗೆ?
    ಅಭ್ಯರ್ಥಿಗಳು ವೆಬ್‌ ವಿಳಾಸ https://ippbonline.com ಗೆ ಭೇಟಿ ನೀಡಬೇಕು.
    ಅಲ್ಲಿ careers ಎಂಬ ಆಪ್ಶನ್‌ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.
    ಆಗ current openings ಎಂಬ ಮೆನು ಕಾಣ ಸಿಗುತ್ತದೆ
    ಅಲ್ಲಿ Recruitment of 47 Circle Based Executive on Contract Basis ಎಂದಿರುತ್ತದೆ. ಅದಕ್ಕೆ ಕ್ಲಿಕ್‌ ಮಾಡಿದರೆ ಅರ್ಜಿ ಲಿಂಕ್‌, ಹುದ್ದೆಯ ವಿವರ, ನೇಮಕ ಅಧಿಸೂಚನೆ ದೊರಕುತ್ತದೆ
    ನಂತರ Apply Online ಕ್ಲಿಕ್‌ ಮಾಡಿ
    ಅನಂತರ click here for new registration ಎಂಬಲ್ಲಿ ಕ್ಲಿಕ್‌ ಮಾಡಿ
    ರಿಜಿಸ್ಟ್ರೇಷನ್‌ ಮಾಡಿ ಅನಂತರ ಅರ್ಜಿ ಸಲ್ಲಿಸಿ

    ನೋಟಿಫಿಕೇಶನ್‌ ಲಿಂಕ್‌ ಇಲ್ಲಿದೆ. ಅರ್ಜಿ ಸಲ್ಲಿಸಲು ಲಿಂಕ್‌ ಇಲ್ಲಿದೆ.

  • HSCC Jobs: ಹಾಸ್ಟಿಟಲ್‌ ಸರ್ವಿಸಸ್‌ ಕನ್ಸಲ್ಟೆನ್ಸಿಯಲ್ಲಿ ಉದ್ಯೋಗಾವಕಾಶ; ಆಸಕ್ತರು ಈಗಲೇ ಅಪ್ಲೈ ಮಾಡಿ

    HSCC Jobs: ಹಾಸ್ಟಿಟಲ್‌ ಸರ್ವಿಸಸ್‌ ಕನ್ಸಲ್ಟೆನ್ಸಿಯಲ್ಲಿ ಉದ್ಯೋಗಾವಕಾಶ; ಆಸಕ್ತರು ಈಗಲೇ ಅಪ್ಲೈ ಮಾಡಿ

    HSCC Recruitment 2024: ಹಾಸ್ಪಿಟಲ್ ಸರ್ವಿಸಸ್ ಕನ್ಸಲ್ಟೆನ್ಸಿ ಕಾರ್ಪೊರೇಷನ್ ಲಿಮಿಟೆಡ್ (HSCC) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 38 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಎಕ್ಸಿಕ್ಯೂಟಿವ್, ಡೆಪ್ಯೂಟಿ ಮ್ಯಾನೇಜರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 20-Apr-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 30-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-04-2024

    ಹುದ್ದೆಯ ಕುರಿತು ಹೆಚ್ಚಿನ ವಿವರ ಇಲ್ಲಿದೆ;
    ಹುದ್ದೆಯ ಹೆಸರು ಮತ್ತು ಸಂಖ್ಯೆ: ಹಾಸ್ಪಿಟಲ್ ಸರ್ವಿಸಸ್ ಕನ್ಸಲ್ಟೆನ್ಸಿ ಕಾರ್ಪೊರೇಷನ್ ಲಿಮಿಟೆಡ್ (HSCC)ನಲ್ಲಿ ಒಟ್ಟು 38 ಹುದ್ದೆಗಳು ಖಾಲಿ ಇದ್ದು, ಕಾರ್ಯನಿರ್ವಾಹಕ, ಉಪ ವ್ಯವಸ್ಥಾಪಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ರೂ.30000-220000/- ಪ್ರತಿ ತಿಂಗಳು ವೇತನವಿರಲಿದೆ.

    ಹುದ್ದೆಗಳ ಹೆಸರು ಮತ್ತು ಹುದ್ದೆ ಸಂಖ್ಯೆ;
    ಕಾರ್ಯನಿರ್ವಾಹಕ 19 ಹುದ್ದೆಗಳು
    ಉಪ ವ್ಯವಸ್ಥಾಪಕರು 8 ಹುದ್ದೆಗಳು
    ಮ್ಯಾನೇಜರ್ 7 ಹುದ್ದೆಗಳು
    ಹಿರಿಯ ವ್ಯವಸ್ಥಾಪಕರು 3 ಹುದ್ದೆಗಳು
    ಉಪ ಪ್ರಧಾನ ವ್ಯವಸ್ಥಾಪಕರು 1 ಹುದ್ದೆ
    ಒಟ್ಟು 38 ಹುದ್ದೆಗಳು

    ವಿದ್ಯಾರ್ಹತೆ:
    ಕಾರ್ಯನಿರ್ವಾಹಕ: ಸಿಎಸ್‌ಇ/ಐಟಿ/ಇಇಇ/ಸಿವಿಲ್/ಮೆಕ್ಯಾನಿಕಲ್/ಬಯೋ ಮೆಡಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, ಎಲ್‌ಎಲ್‌ಬಿ, ಬಿ.ಇ ಅಥವಾ ಬಿ.ಟೆಕ್, ಎಂಬಿಎ, ಸ್ನಾತಕೋತ್ತರ ಪದವಿ ಮಾಡಿರಬೇಕು.
    ಡೆಪ್ಯುಟಿ ಮ್ಯಾನೇಜರ್, ಮ್ಯಾನೇಜರ್: ICAI ಅಥವಾ ICWAI, ಪದವಿ, ಸಿವಿಲ್‌ನಲ್ಲಿ B.E ಅಥವಾ B.Tech, ಬಯೋ ಮೆಡಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, MBA, ಸ್ನಾತಕೋತ್ತರ ಪದವಿ ಮಾಡಿರಬೇಕು.
    ಸೀನಿಯರ್ ಮ್ಯಾನೇಜರ್: ಸಿವಿಲ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್, ಬಯೋ ಮೆಡಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, ಎಂಬಿಎ, ಸ್ನಾತಕೋತ್ತರ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
    ಉಪ ಪ್ರಧಾನ ವ್ಯವಸ್ಥಾಪಕರು: ಸಿವಿಲ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ತೇರ್ಗಡೆ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

    ವಯೋಮಿತಿ:
    ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು ಗರಿಷ್ಠ 28 ವರ್ಷ ಮೀರಿರಬಾರದು.
    ಉಪ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 33 ವರ್ಷ ಮೀರಿರಬಾರದು.
    ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 37 ವರ್ಷ ಮೀರಿರಬಾರದು.
    ಹಿರಿಯ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 41 ವರ್ಷ ಮೀರಿರಬಾರದು.
    ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 45 ವರ್ಷ ಮೀರಿರಬಾರದು.
    ಹಾಸ್ಪಿಟಲ್ ಸರ್ವಿಸಸ್ ಕನ್ಸಲ್ಟೆನ್ಸಿ ಕಾರ್ಪೊರೇಷನ್ ಲಿಮಿಟೆಡ್ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆಯ ನಿಯಮ ಅನ್ವಯವಾಗಲಿದೆ.

    ಅರ್ಜಿ ಶುಲ್ಕ:
    SC/ST/PWD/Internal ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಸಾಮಾನ್ಯ/OBC ಅಭ್ಯರ್ಥಿಗಳು ರೂ.1000/- ಅರ್ಜಿ ಶುಲ್ಕ ಪಾವತಿ ಮಾಡಬೇಕು. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ: ಕಾರ್ಯನಿರ್ವಾಹಕ; ರೂ.30000-120000/- ಮಾಸಿಕ ವೇತನ ಸಿಗಲಿದೆ.
    ಉಪ ವ್ಯವಸ್ಥಾಪಕರು; ರೂ.50000-120000/- ಮಾಸಿಕ ವೇತನ ಲಭ್ಯವಿದೆ.
    ಮ್ಯಾನೇಜರ್ : ರೂ.60000-180000/- ವೇತನವು ಮಾಸಿಕದಲ್ಲಿ ದೊರಕಲಿದೆ
    ಹಿರಿಯ ವ್ಯವಸ್ಥಾಪಕರು ರೂ.70000-200000/- ರವರೆಗೆ ಮಾಸಿಕ ವೇತನ ಸಿಗಲಿದೆ
    ಉಪ ಪ್ರಧಾನ ವ್ಯವಸ್ಥಾಪಕರು ರೂ.80000-220000/- ರವರೆಗೆ ಮಾಸಿಕ ವೇತನ ಲಭ್ಯ

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್‌ ಮಾಡಿ.

  • SSC JE Jobs 2024: ಎಸ್‌ಎಸ್‌ಸಿ ಇಂದ ಜೆಇ ಹುದ್ದೆಗೆ ನೋಟಿಫಿಕೇಶನ್‌; 968 ಹುದ್ದೆಗಳು, ಎ.18 ಅರ್ಜಿ ಸಲ್ಲಿಸಲು ಕೊನೆಯ ದಿನ

    SSC JE Jobs 2024: ಎಸ್‌ಎಸ್‌ಸಿ ಇಂದ ಜೆಇ ಹುದ್ದೆಗೆ ನೋಟಿಫಿಕೇಶನ್‌; 968 ಹುದ್ದೆಗಳು, ಎ.18 ಅರ್ಜಿ ಸಲ್ಲಿಸಲು ಕೊನೆಯ ದಿನ

    SSC Recruitment 2024: ಸಿಬ್ಬಂದಿ ನೇಮಕಾತಿ ಆಯೋಗವು ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ವಿವಿಧ ಸಂಸ್ಥೆಗಳು, ಸಚಿವಾಲಯ, ಇಲಾಖೆಗಳಲ್ಲಿ ಜೂನಿಯರ್‌ ಇಂಜಿನಿಯರ್‌ (ಸಿವಿಲ್‌, ಮೆಕ್ಯಾನಿಕಲ್‌, ಇಲೆಕ್ಟ್ರಿಕಲ್)‌ ಈ ಹುದ್ದೆಗಳ ಭರ್ತಿಯು ಮಾಡಲಿದೆ. ಒಟ್ಟು 968 ಹುದ್ದೆಗಳು ಖಾಲಿ ಇದ್ದು, ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿದ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 28-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-04-2024 (ರಾತ್ರಿ 11 ಗಂಟೆ ತನಕ)
    ಅರ್ಜಿ ಶುಲ್ಕ ಆನ್‌ಲೈನ್‌ ಮೂಲಕ ಪಾವತಿ ಮಾಡಲು ಕೊನೆಯ ದಿನಾಂಕ: 19-04-2024
    ಚಲನ್‌ ಜೆನೆರೇಟ್‌ ಆಫ್‌ಲೈನ್‌ ಮೂಲಕ ಮಾಡಲು ಕೊನೆಯ ದಿನಾಂಕ: 02-09-2024
    ಅರ್ಜಿ ತಿದ್ದು ಪಡಿಗೆ ಪ್ರಾರಂಭಿಕ ದಿನಾಂಕ: 22-04-2024 to 23-04-2024
    ಕಂಪ್ಯೂಟರ್‌ ಆಧಾರಿತ ಪರೀಕ್ಷೆ (ಪೇಪರ್‌ -1): 04-06-2024 to 06-06-2024
    ಪೇಪರ್‌ -2 ಪರೀಕ್ಷೆಗೆ ದಿನಾಂಕ ಪ್ರಕಟವಾಗಬೇಕಷ್ಟೇ.

    ಹುದ್ದೆಯ ವಿವರ ಈ ಕೆಳಗಿನಂತಿದೆ;
    ಹುದ್ದೆ: ಸಿಬ್ಬಂದಿ ನೇಮಕಾತಿ ಆಯೋಗವು ಜೂನಿಯರ್‌ ಇಂಜಿನಿಯರ್‌ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಒಟ್ಟು 968 ಹುದ್ದೆಗಳು ಖಾಲಿ ಇದ್ದು, ಅಧಿಸೂಚನೆಯಲ್ಲಿ ನೀಡಲಾದ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಹುದ್ದೆಯ ಹೆಸರು ಮತ್ತು ಸಂಖ್ಯೆ:
    ಕಿರಿಯ ಇಂಜಿನಿಯರ್ – ಗಡಿ ರಸ್ತೆ ಸಂಸ್ಥೆ : 475 ಹುದ್ದೆಗಳು
    ಕಿರಿಯ ಇಂಜಿನಿಯರ್ – ಬ್ರಹ್ಮಪುತ್ರ ಬೋರ್ಡ್‌, ಜಲಶಕ್ತಿ ಸಚಿವಾಲಯ : 02 ಹುದ್ದೆಗಳು
    ಕಿರಿಯ ಇಂಜಿನಿಯರ್ – ಸೆಂಟ್ರಲ್ ವಾಟರ್ ಕಮಿಷನ್ : 120 ಹುದ್ದೆಗಳು
    ಕಿರಿಯ ಇಂಜಿನಿಯರ್ – ಸೆಂಟ್ರಲ್ ಪಬ್ಲಿಕ್ ವರ್ಕ್ಸ್‌ ಡಿಪಾರ್ಟ್‌ಮೆಂಟ್ : 338 ಹುದ್ದೆಗಳು
    ಕಿರಿಯ ಇಂಜಿನಿಯರ್ – ಸೆಂಟ್ರಲ್ ವಾಟರ್ ಪವರ್ ರಿಸರ್ಚ್ ಸ್ಟೇಷನ್ : 05 ಹುದ್ದೆಗಳು
    ಕಿರಿಯ ಇಂಜಿನಿಯರ್ – ನೌಕಾಪಡೆ : 06 ಹುದ್ದೆಗಳು
    ಕಿರಿಯ ಇಂಜಿನಿಯರ್ – ಜಲ ಶಕ್ತಿ ಸಚಿವಾಲಯ : 04 ಹುದ್ದೆಗಳು
    ಕಿರಿಯ ಇಂಜಿನಿಯರ್ – NTRO : 06 ಹುದ್ದೆಗಳು
    ಕಿರಿಯ ಇಂಜಿನಿಯರ್ – ಮಿಲಿಟರಿ ಇಂಜಿನಿಯರ್ ಸರ್ವೀಸ್ – ನಿಗದಿ ಪಡಿಸಿಲ್ಲ
    ಒಟ್ಟು 968 ಹುದ್ದೆಗಳು ಖಾಲಿ ಇದೆ

    ಅರ್ಜಿ ಶುಲ್ಕ: ಮಹಿಳಾ ಅಭ್ಯರ್ಥಿಗಳು, ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಉಳಿದಂತೆ ಎಲ್ಲರೂ ರೂ.100 ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ವಯೋಮಿತಿ: ಈ ಹುದ್ದೆಗೆ ಗರಿಷ್ಠ 30 ವರ್ಷ ವಯಸ್ಸು ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ: ಅಭ್ಯರ್ಥಿಗಳಿಗೆ ಪೇ ಲೆವೆಲ್‌-7 ರ ಪ್ರಕಾರ ನಗರಗಳ ಆಧಾರಿತವಾಗಿ ವೇತನ ಸಿಗಲಿದೆ.
    X-ಸಿಟೀಸ್ : Rs.57,408.
    Y-ಸಿಟೀಸ್ : Rs.52,776.
    Z-ಸಿಟೀಸ್ : Rs.49.944.
    ಪೇಸ್ಕೇಲ್‌ (ಪೇ ಲೆವೆಲ್‌-7 ರ ಪ್ರಕಾರ ) : Rs.35,400-1,12,400

    ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ತಕ್ಕಂತೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್‌ ಪದವಿ ತೇರ್ಗಡೆ ಹೊಂದಿರಬೇಕು. ಅಥವಾ ಮೂರು ವರ್ಷ ಡಿಪ್ಲೋಮಾ ಪಾಸ್‌ ಜೊತೆಗೆ ಎರಡು ವರ್ಷದ ಕೆಲಸದ ಅನುಭವ ಹೊಂದಿರಬೇಕು.

    ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಬೇಸಿಕ್‌ ಪೇ ರೂ.35,400 ಮಾಸಿಕ ನೀಡಲಾಗುವುದು.
    ಜಮ್ಮು ಕಾಶ್ಮೀರ, ನಾರ್ಥ್‌ಈಸ್ಟ್‌ ಇಂಡಿಯಾ ಈ ಪ್ರದೇಶ ಹೊರತು ಪಡಿಸಿ ಬೇರೆ ಕಡೆ ನಿಯೋಜನೆ ಹೊಂದಿದ್ದರೆ ಅಂತಹ ಅಭ್ಯರ್ಥಿಗಳಿಗೆ ಎಸ್‌ಡಿಎ, ಎಸ್‌ಸಿಎ ಭತ್ಯೆ ಇಲ್ಲ.
    ಟ್ರಾವೆಲ್‌ ಅಲೊವೆನ್ಸ್‌ ದೊಡ್ಡ ನಗರಗಳಿಗೆ ನಿಯೋಜನೆಗೊಂಡವರಿಗೆ ಮಾತ್ರ ಲಭ್ಯ
    ಶೇ.8,16,24 ಮಾದರಿಯಲ್ಲಿ HRA ನಗರಗಳ ಆಧಾರದಲ್ಲಿ ಸಿಗಲಿದೆ.