Tag: ಕನ್ನಡ ಸುದ್ದಿಗಳು

  • RDPR Recruitment 2024; 51 ಹುದ್ದೆಗಳು, ಮಾಸಿಕ ವೇತನ ರೂ.60 ಸಾವಿರ! ಈ ಕೂಡಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!

    RDPR Recruitment 2024; 51 ಹುದ್ದೆಗಳು, ಮಾಸಿಕ ವೇತನ ರೂ.60 ಸಾವಿರ! ಈ ಕೂಡಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!

    RDPR Karnataka Recruitment 2024: ಕರ್ನಾಟಕ ಪಂಚಾಯತ್‌ರಾಜ್‌ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಫೆಲೋಶಿಪ್‌ ಇಲ್ಲಿ ಹಲವು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. 51 ಹುದ್ದೆಗಳಿಗೆ ಅರ್ಹ ಮತ್ತು ಅನುಭವ ಹೊಂದಿರುವ ಯುವ ವೃತ್ತಿರಪರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಪ್ರತಿ ತಾಲ್ಲೂಕಿಗೆ ಒಬ್ಬರನ್ನು ನಿಯುಕ್ತಿ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ವಿವರವಾದ ಮಾಹಿತಿಯನ್ನು ವೆಬ್‌ಸೈಟ್‌ ಮೂಲಕ ಪಡೆದುಕೊಂಡು, ಭರ್ತಿ ಮಾಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 22-01-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-02-2024

    ವಯೋಮಿತಿ: ಫೆಲೋಶಿಪ್‌ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 32 ವರ್ಷದೊಳಗಿರಬೇಕು.

    ವೇತನ ಶ್ರೇಣಿ: ಫೆಲೋಗಳಿಗೆ ತರಬೇತಿ ಮತ್ತು ತಾಲೂಕಿನಲ್ಲಿ ನಿಯೋಜನೆ ಮಾಡಿದ ನಂತರ ತಿಂಗಳಿಗೆ ರೂ.60,000 ಫೆಲೋಶಿಪ್‌ ನೀಡಲಾಗುವುದು. ಗ್ರಾಮ ಪಂಚಾಯತಿಗಳಿಗೆ ಪ್ರಯಾಣಿಸಲು ಮಾಸಿಕ ರೂ.1500 ಪ್ರಯಾಣ ಭತ್ಯೆ ನೀಡಲಾಗುವುದು.

    ವಿದ್ಯಾರ್ಹತೆ: ಸಾಮಾಜಿಕ ವಿಜ್ಞಾನಗಳಾದ ಸಮಾಜಶಾಸ್ತ್ರ ಅಥವಾ ಅರ್ಥಶಾಸ್ತ್ರ ಅಥವಾ ಗ್ರಾಮೀಣಾಭಿವೃದ್ಧಿ ಅಥವಾ ಸಮಾಜ ಕಾರ್ಯ ಅಥವಾ ಸಾರ್ವಜನಿಕ ನೀತಿ ವಿಷಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಸ್ನಾತಕ ಪದವೀಧರರು ಅಭಿವೃದ್ಧಿ ವಲಯದಲ್ಲಿ ಕನಿಷ್ಠ 1-2 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿದ್ದಲ್ಲಿ ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಕ್ಷೇತ್ರಮಟ್ಟದ ಅನುಭವ ಹೊಂದಿದ್ದಲ್ಲಿ ಹೆಚ್ಚುವರಿ ಅಂಕಗಳೊಂದಿಗೆ ಪರಿಗಣಿಸಲಾಗುವುದು. ಕ್ಷೇತ್ರ ಮಟ್ಟದ ಅನುಭವ ಹೊಂದಿರುವ ಸ್ನಾತಕೋತ್ತರ ಪದವೀಧರರನ್ನು ಕಾರ್ಯಕ್ಷಮತೆ ಮೌಲ್ಯಮಾಪನಕ್ಕೊಳಪಟ್ಟು ಆದ್ಯತೆ ನೀಡಲಾಗುವುದು. M.Phil ಅಥವಾ Ph.D ಉನ್ನತ ವಿದ್ಯಾರ್ಹತೆ ಅಪೇಕ್ಷಣೀಯವಾಗಿದ್ದು, ಹೆಚ್ಚುವರಿ Weightage ಅನ್ನು ನೀಡಲಾಗುವುದು.

    ಷರತ್ತುಗಳು:
    ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ತಿಳಿದಿರಬೇಕು. ಕ್ಷೇತ್ರಮಟ್ಟದಲ್ಲಿ ಮತ್ತು ನಾಗರಿಕರೊಂದಿಗೆ ಕೆಲಸ ಮಾಡಲು ಕನ್ನಡ ಭಾಷೆಯ ಜ್ಞಾನವು ಪ್ರಮುಖವಾಗಿದೆ. ಫೆಲೋಗಳು ಕಲ್ಯಾಣ ಕರ್ನಾಟಕ ವಿಭಾಗದ ಯಾವುದೇ ತಾಲ್ಲೂಕಿಗೆ ನಿಯೋಜಿಸಿದರೂ ಕೆಲಸ ಮಾಡಲು ಸಿದ್ಧರಿರಬೇಕು.
    ಫೆಲೋಷಿಪ್‌ನ ಸಂಪೂರ್ಣ ಅವಧಿಯವರೆಗೆ ನಿಯುಕ್ತಿಗೊಳಿಸಲಾದ ತಾಲ್ಲೂಕಿನಲ್ಲಿಯೇ ವಾಸ್ತವ್ಯ ಮಾಡಬೇಕು ಮತ್ತು ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಗೆ ನಿರಂತರವಾಗಿ ಪ್ರವಾಸ ಕೈಗೊಳ್ಳುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವುದು ಕಡ್ಡಾಯವಾಗಿರುತ್ತದೆ.
    ಫೆಲೋಗಳು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವುದು.

    ಆಯ್ಕೆ ವಿಧಾನ: ಮೆರಿಟ್‌ ಕಮ್‌ ಅಪ್ಟಿಟ್ಯೂಡ್‌ ಮೌಲ್ಯಮಾಪನ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಫೆಲೋಗಳನ್ನು ಆಯ್ಕೆ ಮಾಡಲಾಗುವುದು.

    ಸೂಚನೆ: ಅಂಚೆ, ಕೊರಿಯರ್‌, ಆಯುಕ್ತಾಲಯದಲ್ಲಿ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಹಾಯಕ ನಿರ್ದೇಶಕರು, ಮೊಬೈಲ್‌ ಸಂಖ್ಯೆ -9740790530, ಪಂಚಾಯತ್‌ರಾಜ್‌ ಆಯುಕ್ತಾಲುರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • DCC Bank Recruitment 2024: ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಜಾಬ್ಸ್‌, ಕಿರಿಯ ಸಹಾಯಕ, ವಾಹನ ಚಾಲಕ, ಅಟೆಂಡರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

    DCC Bank Recruitment 2024: ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಜಾಬ್ಸ್‌, ಕಿರಿಯ ಸಹಾಯಕ, ವಾಹನ ಚಾಲಕ, ಅಟೆಂಡರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಬಯಸುವುವರಿಗೆ ಸಿಹಿ ಸುದ್ದಿ. ಮಂಡ್ಯ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶವಿದೆ. ಕಿರಿಯ ಸಹಾಯಕ, ವಾಹನ ಚಾಲಕ, ಅಟೆಂಡರ್‌ ಹುದ್ದೆಗಳಿಗೆ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ವಯೋಮಿತಿ ಏನು? ಅರ್ಜಿ ಶುಲ್ಕ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ? ಯಾವ ಹುದ್ದೆಗೆ ಏನು ವಿದ್ಯಾರ್ಹತೆ ಬಯಸಲಾಗಿದೆ? ಇತ್ಯಾದಿ ವಿವರಗಳನ್ನು ಸರಕಾರಿಜಾಬ್ಸ್‌.ಕಾಂ ಇಲ್ಲಿ ನೀಡಿದೆ.

    ಪ್ರಮುಖ ದಿನಾಂಕಗಳು ಮತ್ತು ಮಾಹಿತಿ

    ಲಭ್ಯ ಇರುವ ಹುದ್ದೆಗಳ ಸಂಖ್ಯೆ: 94
    ಮಂಡ್ಯ ಡಿಸಿಸಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಜನವರಿ 18, 2024
    ಮಂಡ್ಯ ಡಿಸಿಸಿ ಬ್ಯಾಂಕ್‌ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 16, 2024
    ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
    ಅರ್ಜಿ ಸಲ್ಲಿಸಲು ವೆಬ್‌ಸೈಟ್‌: www.mandyadccbank.com
    ಸಹಾಯವಾಣಿ ಸಂಖ್ಯೆ: 91085328218
    ಮಂಡ್ಯ ಡಿಸಿಸಿ ಬ್ಯಾಂಕ್‌ ವಿಳಾಸ: HEAD OFFICE BRANCH Post Box No: 14. Market Road, Mandya, Mandya

    ವಿದ್ಯಾರ್ಹತೆ ಮತ್ತು ಇತರೆ ಅರ್ಹತೆಗಳು

    ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು ಗ್ರೇಡ್‌ 1 ಹುದ್ದೆಗಳ ಸಂಖ್ಯೆ 1. ವಿದ್ಯಾರ್ಹತೆ: ಅಂಗೀಕೃತ ವಿಶ್ವ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಎಂ.ಟೆಕ್ ಸ್ನಾತಕೊತ್ತರ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆಗೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಎಂದು ಅಧಿಸೂಚನೆ ತಿಳಿಸಿದೆ.

    ಡಿಸಿಸಿ ಬ್ಯಾಂಕ್‌ ಮಂಡ್ಯದಲ್ಲಿ ಅತ್ಯಧಿಕ ಸಂಖೆಯ ಕಿರಿಯ ಸಹಾಯಕರ ಹುದ್ದೆಗಳಿವೆ. ಒಟ್ಟು ಕಿರಿಯ ಸಹಾಯಕರ 70 ಹುದ್ದೆಗಳಿಗೆ ಪಿಯುಸಿ ಓದಿರುವವರು ಅರ್ಜಿ ಸಲ್ಲಿಸಬಹುದು. ಕನ್ನಡದಲ್ಲಿ ಓದಲು, ಬರೆಯಲು ತಿಳಿದಿರಬೇಕು, ಕಂಪ್ಯೂಟರ್‌ ಜ್ಞಾನ ಇರಬೇಕು.

    ವಾಹನ ಚಾಲಕ 2 ಹುದ್ದೆಗಳಿವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಬಯಸಲಾಗಿದೆ. ಕನ್ನಡ ತಿಳಿದಿರಬೇಕು. ಡ್ರೈವಿಂಗ್‌ ಲೈಸನ್ಸ್‌ ಹೊಂದಿರಬೇಕು.

    21 ಅಟೆಂಡರ್‌ ಹುದ್ದೆಗಳಿವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಬಯಸಲಾಗಿದೆ. ಕನ್ನಡ ತಿಳಿದಿರಬೇಕು.

    ಮಂಡ್ಯ ಡಿಸಿಸಿ ಬ್ಯಾಂಕ್‌ ನೇಮಕ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ
    ಆಸಕ್ತ ಅರ್ಹ ಅಭ್ಯರ್ಥಿಗಳು www.mandyadccbank.com ವೆಬ್‌ಸೈಟ್‌ನಲ್ಲಿ ಡಿಸಿಸಿ ಬ್ಯಾಂಕ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಓದಿಕೊಳ್ಳಲು ಮರೆಯಬೇಡಿ.