Tag: ಉದ್ಯೋಗ ವಾರ್ತೆ

  • Kolar Anganwadi Recruitment 2024: ಮಹಿಳೆಯರಿಗೆ ಬೃಹತ್‌ ಉದ್ಯೋಗಾವಕಾಶ; 513 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ

    Kolar Anganwadi Recruitment 2024: ಮಹಿಳೆಯರಿಗೆ ಬೃಹತ್‌ ಉದ್ಯೋಗಾವಕಾಶ; 513 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ

    WCD Kolar Recruitment 2024: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ಕೋಲಾರ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 513 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೋಲಾರ – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 19-Apr-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-04-2024

    ಹುದ್ದೆಯ ವಿವರ;
    ಹುದ್ದೆ ಸಂಖ್ಯೆ: 513 ಹುದ್ದೆಗಳು ಖಾಲಿ ಇದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
    ಅಂಗನವಾಡಿ ಕಾರ್ಯಕರ್ತೆ- 120 ಹುದ್ದೆಗಳು
    ಅಂಗನವಾಡಿ ಸಹಾಯಕಿ- 393 ಹುದ್ದೆಗಳು

    ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆ- ಪಿಯುಸಿ, ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
    ಅಂಗನವಾಡಿ ಸಹಾಯಕಿ – ಈ ಹುದ್ದೆಗೆ ಅರ್ಜಿ ಸಲ್ಲಿಸಿದವರು ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 19 ವರ್ಷ, ಗರಿಷ್ಠ 35 ವರ್ಷ ಆಗಿರಬೇಕು. PWD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಮೇಲ್ಕಂಡ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಬೇಕಾದಾಗ ದಾಖಲೆಗಳು ಯಾವುದು:
    ಜನನ ಪ್ರಮಾಣ ಪತ್ರ/ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವಿದ್ಯಾರ್ಹತೆಯ ಅಂಕಪಟ್ಟಿ, ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ, ಪತಿಯ ಮರಣ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ, ಅಂಗವಿಕಲತೆ ಪ್ರಮಾಣ ಪತ್ರ, ವಿಚ್ಛೇದನಾ ಪ್ರಮಾಣ ಪತ್ರ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • KPSC Jobs 2024: ಕೆಪಿಎಸ್‌ಸಿ ಇಂದ 327 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇಮಕ ಅಧಿಸೂಚನೆ ಪ್ರಕಟ

    KPSC Jobs 2024: ಕೆಪಿಎಸ್‌ಸಿ ಇಂದ 327 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇಮಕ ಅಧಿಸೂಚನೆ ಪ್ರಕಟ

    KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 327 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಹಾಯಕ ಇಂಜಿನಿಯರ್, ಸಹಾಯಕ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕದಲ್ಲಿ ಹುದ್ದೆ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 14-ಮೇ-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-04-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 14-05-2024
    HK ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 25-Aug-2024
    RPC ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 11-Aug-2024

    ಹುದ್ದೆಯ ಹೆಸರು:
    ಸಹಾಯಕ ಇಂಜಿನಿಯರ್ (ಸಿವಿಲ್) – 100 ಹುದ್ದೆ
    ಸಹಾಯಕ ಇಂಜಿನಿಯರ್ (ಸಿವಿಲ್) (WRD) – 90 ಹುದ್ದೆ
    ಭೂ ದಾಖಲೆಗಳ ಸಹಾಯಕ ನಿರ್ದೇಶಕರು – 27 ಹುದ್ದೆ
    ವ್ಯವಸ್ಥಾಪಕರು/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ – 40 ಹುದ್ದೆ
    ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರು – 23 ಹುದ್ದೆ
    ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) -10 ಹುದ್ದೆ
    ಕಾರ್ಖಾನೆಗಳ ಸಹಾಯಕ ನಿರ್ದೇಶಕರು – 9 ಹುದ್ದೆ
    ಬಾಯ್ಲರ್‌ಗಳ ಸಹಾಯಕ ನಿರ್ದೇಶಕರು -3 ಹುದ್ದೆ
    ಭೂವಿಜ್ಞಾನಿ – 25 ಹುದ್ದೆ
    ಒಟ್ಟು ಹುದ್ದೆ 327 ಹುದ್ದೆಗಳು

    ವಿದ್ಯಾರ್ಹತೆ: ಹುದ್ದೆಗನುಸಾರವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಲಾಗಿದೆ. ಅ

    ವಯೋಮಿತಿ: ಮೇಲ್ಕಂಡ ಹುದ್ದೆಗಳಿಗೆ 18 ವರ್ಷ ಕನಿಷ್ಠ, ಹಾಗೂ ಗರಿಷ್ಠ 35 ವರ್ಷ
    CAT-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 03 ವರ್ಷ, SC/ST/Cat-1 ಅಭ್ಯರ್ಥಿಗಳಿಗೆ 05 ವರ್ಷ, PWD/ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ:
    SC/ST/Cat-I ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಇಲ್ಲ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50/-, CAT-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ರೂ.150/-, ಸಾಮಾನ್ಯ ಅಭ್ಯರ್ಥಿಗಳಿಗೆ ರೂ.300/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ವೇತನ: ಸಹಾಯಕ ಇಂಜಿನಿಯರ್ (ಸಿವಿಲ್), ಸಹಾಯಕ ಇಂಜಿನಿಯರ್ (ಸಿವಿಲ್) (WRD), ಭೂ ದಾಖಲೆಗಳ ಸಹಾಯಕ ನಿರ್ದೇಶಕ, ವ್ಯವಸ್ಥಾಪಕರು/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.43100-83900/- ವೇತನವಿದೆ.
    ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರು ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.45300-88300/- ಮಾಸಿಕ ವೇತನವಿರಲಿದೆ.
    ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್), ಕಾರ್ಖಾನೆಗಳ ಸಹಾಯಕ ನಿರ್ದೇಶಕರು, ಬಾಯ್ಲರ್ ಸಹಾಯಕ ನಿರ್ದೇಶಕ, ಭೂವಿಜ್ಞಾನಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.43100-83900/- ಮಾಸಿಕ ವೇತನವಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ

    RPC, HK ನೋಟಿಫಿಕೇಶನ್‌ ಲಿಂಕ್‌ ಇಲ್ಲಿದೆ

  • Indian Bank Recruitment 2024: ಇಂಡಿಯನ್‌ ಬ್ಯಾಂಕ್‌ನಿಂದ ಉದ್ಯೋಗ, 146 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    Indian Bank Recruitment 2024: ಇಂಡಿಯನ್‌ ಬ್ಯಾಂಕ್‌ನಿಂದ ಉದ್ಯೋಗ, 146 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    Indian Bank Recruitment 2024: ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 146 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಪೋಸ್ಟ್‌ಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು 01-Apr-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: 01-04-2024

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
    ಹುದ್ದೆ: ಒಟ್ಟು 146 ಹುದ್ದೆಗಳು ಖಾಲಿ ಇದೆ. ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

    ಹುದ್ದೆಗಳು ಹಾಗೂ ಸಂಖ್ಯೆ
    ಮುಖ್ಯ ವ್ಯವಸ್ಥಾಪಕರು – ಕ್ರೆಡಿಟ್- 10, ಹಿರಿಯ ವ್ಯವಸ್ಥಾಪಕರು – ಕ್ರೆಡಿಟ್ 10, ಸಹಾಯಕ ವ್ಯವಸ್ಥಾಪಕರು – NR (BR) 30, ಸಹಾಯಕ ವ್ಯವಸ್ಥಾಪಕರು – ಭದ್ರತೆ 11, ಮುಖ್ಯ ವ್ಯವಸ್ಥಾಪಕ – MSME 5, ಹಿರಿಯ ವ್ಯವಸ್ಥಾಪಕರು – MSME 10, ಮ್ಯಾನೇಜರ್ – MSME 10, ಮುಖ್ಯ ವ್ಯವಸ್ಥಾಪಕರು – ಡಿಜಿಟಲ್ ಮಾರ್ಕೆಟಿಂಗ್ 1, ಹಿರಿಯ ವ್ಯವಸ್ಥಾಪಕ – ಎಸ್‌ಇಒ ಮತ್ತು ವೆಬ್‌ಸೈಟ್ ತಜ್ಞರು 1, ಹಿರಿಯ ವ್ಯವಸ್ಥಾಪಕ-ಸಾಮಾಜಿಕ ಮಾಧ್ಯಮ ತಜ್ಞರು 1, ಹಿರಿಯ ವ್ಯವಸ್ಥಾಪಕರು – ಸೃಜನಾತ್ಮಕ ತಜ್ಞರು 1, ಹಿರಿಯ ವ್ಯವಸ್ಥಾಪಕ – ವಿದೇಶೀ ವಿನಿಮಯ/ವ್ಯಾಪಾರ ಹಣಕಾಸು 5, ಮ್ಯಾನೇಜರ್ – ವಿದೇಶೀ ವಿನಿಮಯ/ವ್ಯಾಪಾರ ಹಣಕಾಸು 5
    ಮುಖ್ಯ ವ್ಯವಸ್ಥಾಪಕರು – (Treasury Dealer) 1 ಹೀಗೆ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ವಿವಿಧ ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯ ಮೂಲಕ ವಿವರಗಳನ್ನು ತಿಳಿದುಕೊಳ್ಳಬಹುದು.

    ವಯೋಮಿತಿ: ಮೇಲಿನ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳ ವಯೋಮಿತಿಯು 21-40 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, PwBD ಅಭ್ಯರ್ಥಿಗಳಿಗೆ 10ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ/PwBD ಅಭ್ಯರ್ಥಿಗಳಿಗೆ ರೂ.175/- ಉಳಿದ ಅಭ್ಯರ್ಥಿಗಳಿಗೆ ರೂ.1000 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬೇಕು. ಬೇರೆ ಯಾವುದೇ ವಿಧಾನದಿಂದ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ/ ಆನ್‌ಲೈನ್‌ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ವೇತನ:
    ಸ್ಕೇಲ್‌-1- ರೂ.36000-63840 ರೂ.
    ಸ್ಕೇಲ್II – ರೂ.48170-ರೂ.69810
    ಸ್ಕೇಲ್‌III – ರೂ.63840-ರೂ.78230
    ಸ್ಕೇಲ್‌ IV – ರೂ.76010-ರೂ.89890

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ

  • BSF Recruitment 2024: ಸಬ್‌ ಇನ್ಸ್‌ಪೆಕ್ಟರ್‌, ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ ಲಕ್ಷ ಸಂಬಳ; ಪದವಿ, ಐಟಿಐ, ಹತ್ತನೇ ತರಗತಿ ಪಾಸಾದವರು ಅರ್ಜಿ ಹಾಕಿ

    BSF Recruitment 2024: ಸಬ್‌ ಇನ್ಸ್‌ಪೆಕ್ಟರ್‌, ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ತಿಂಗಳಿಗೆ ಲಕ್ಷ ಸಂಬಳ; ಪದವಿ, ಐಟಿಐ, ಹತ್ತನೇ ತರಗತಿ ಪಾಸಾದವರು ಅರ್ಜಿ ಹಾಕಿ

    BSF Recruitment 2024: ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 82 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಯನ್ನು ಆಯ್ಕೆ ಮಾಡಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು 15-Apr-2024 ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 16-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-04-2024

    ಹುದ್ದೆಯ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು, ಹುದ್ದೆ ಸಂಖ್ಯೆ: ಗಡಿ ಭದ್ರತಾ ಪಡೆ (BSF) ಯಲ್ಲಿ ಒಟ್ಟು 82 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆಯ ಹೆಸರು: ಸಬ್ ಇನ್ಸ್‌ಪೆಕ್ಟರ್, ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ ಮತ್ತು ವೇತನ;
    ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್) 8 ಹುದ್ದೆ – ರೂ.29200-92300 ರೂ. ಮಾಸಿಕ ವೇತನ ಸಿಗಲಿದೆ.
    ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) 11 ಹುದ್ದೆ – ರೂ.29200-92300 ರೂ. ಮಾಸಿಕ ವೇತನ ಸಿಗಲಿದೆ.
    SI (Works) 13 ಹುದ್ದೆ – ರೂ.35400-112400 ರೂ. ಮಾಸಿಕ ವೇತನ
    SI/JE (Elect) 9 ಹುದ್ದೆ – ರೂ.35400-112400 ರೂ. ಮಾಸಿಕ ವೇತನ
    HC (ಪ್ಲಂಬರ್) 1 ಹುದ್ದೆ – ರೂ.25500-ರೂ.81100 ಮಾಸಿಕ ವೇತನ
    HC (ಕಾರ್ಪೆಂಟರ್) 1 ಹುದ್ದೆ – ರೂ.25500-ರೂ.81100 ಮಾಸಿಕ ವೇತನ
    ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್) 13 ಹುದ್ದೆ – ರೂ.21700-69100 ರೂ. ಮಾಸಿಕ ವೇತನ
    ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) 14 ಹುದ್ದೆ – ರೂ.21700-69100 ರೂ. ಮಾಸಿಕ ವೇತನ
    ಕಾನ್‌ಸ್ಟೆಬಲ್ (ಲೈನ್‌ಮ್ಯಾನ್) 9 ಹುದ್ದೆ – ರೂ.21700-69100 ರೂ. ಮಾಸಿಕ ವೇತನ
    ಕಾನ್ಸ್ಟೇಬಲ್ (ಸ್ಟೋರ್ಮ್ಯಾನ್) 3 ಹುದ್ದೆ – ರೂ.21700-69100 ರೂ. ಮಾಸಿಕ ವೇತನ
    ಒಟ್ಟು 82 ಹುದ್ದೆಗಳು

    ವಿದ್ಯಾರ್ಹತೆ: ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಸಹಾಯಕ ಸಬ್ ಇನ್‌ಸ್ಪೆಕ್ಟರ್),ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್‌ಸ್ಪೆಕ್ಟರ್),SI (works), SI/JE (elect) – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿ ಡಿಪ್ಲೋಮಾ ಪಾಸಾಗಿರಬೇಕು.
    HC (ಪ್ಲಂಬರ್) 10ನೇ, HC (ಕಾರ್ಪೆಂಟರ್)- ITI ತೇರ್ಗಡೆ ಹೊಂದಿರಬೇಕು.
    ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್), ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್), ಕಾನ್‌ಸ್ಟೆಬಲ್ (ಲೈನ್‌ಮ್ಯಾನ್), ಕಾನ್‌ಸ್ಟೆಬಲ್ (ಸ್ಟೋರ್‌ಮ್ಯಾನ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ:
    ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್), ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 28 ವರ್ಷ ಮೀರಿರಬಾರದು.
    SI (Works), SI/JE (ELect)- ಅಭ್ಯರ್ಥಿಗಳ ವಯೋಮಿತಿಯು 30 ವರ್ಷ ಮೀರಿರಬಾರದು.
    HC (ಪ್ಲಂಬರ್), HC (ಕಾರ್ಪೆಂಟರ್),ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್), ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್), ಕಾನ್‌ಸ್ಟೆಬಲ್ (ಲೈನ್‌ಮ್ಯಾನ್)- ವಯೋಮಿತಿಯು 18-25 ವರ್ಷ.
    ಕಾನ್‌ಸ್ಟೆಬಲ್ (ಸ್ಟೋರ್‌ಮ್ಯಾನ್) – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿಯು 20-25 ವರ್ಷದೊಳಗಿರಬೇಕು.
    ಗಡಿ ಭದ್ರತಾ ಪಡೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

    ಅರ್ಜಿ ಶುಲ್ಕ:
    Gen/OBC/EWS ಅಭ್ಯರ್ಥಿಗಳು: ರೂ.1000/- ಅರ್ಜಿ ಶುಲ್ಕ ಪಾವತಿ ಮಾಡಬೇಕು. SC/ST/ESM/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಶುಲ್ಕ ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಡಾಕ್ಯುಮೆಂಟ್‌ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • Central Bank Of India Recruitment 2024: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 3000 ಹುದ್ದೆ; ಅರ್ಜಿ  ಸಲ್ಲಿಕೆಗೆ ದಿನಾಂಕ ವಿಸ್ತರಣೆ

    Central Bank Of India Recruitment 2024: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 3000 ಹುದ್ದೆ; ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ

    Central Bank Of India Recruitment 2024: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾವು ಖಾಲಿ ಇರುವ 3000 ಅಪ್ರೆಂಟಿಸ್‌ ಹುದ್ದೆಗಳನ್ನು ನೇಮಕ ಮಾಡಲು ಫೆಬ್ರವರಿ ತಿಂಗಳಲ್ಲಿ ಅರ್ಜಿ ಆಹ್ವಾನಿಸಿತ್ತು. ಇದೀಗ ಅರ್ಜಿಗೆ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಇದರ ಜೊತೆಗೆ ಸಿಬಿಟಿ ಪರೀಕ್ಷೆಯ ಸಂಭಾವ್ಯ ದಿನಾಂಕವನ್ನು ವಿಸ್ತರಣೆ ಮಾಡಿದೆ.

    ಮಾರ್ಚ್‌ 06 ರವರೆಗೆ ಬ್ಯಾಂಕ್‌ ಅರ್ಜಿಗೆ ಅವಕಾಶ ನೀಡಿತ್ತು. ಇದೀಗ ಬ್ಯಾಂಕ್‌ ಅರ್ಜಿ ದಿನಾಂಕ ವಿಸ್ತರಣೆಯನ್ನು ಮಾರ್ಚ್‌ 27 ರವರೆಗೆ ಮಾಡಿದೆ. ಹಾಗಾಗಿ ಬ್ಯಾಂಕ್‌ ಉದ್ಯೋಗಾಕಾಂಕ್ಷಿಗಳು ಈಗಲೇ ಅರ್ಜಿ ಸಲ್ಲಿಸಿ.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 21-02-2024
    ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 27-03-2024
    ಆನ್‌ಲೈನ್‌ ಕಂಪ್ಯೂಟರ್‌ (ಸಿಬಿಟಿ) ಪರೀಕ್ಷಾ ಸಂಭಾವ್ಯ ದಿನಾಂಕ: 31-03-2024

    ವಯೋಮಿತಿ: ಅಭ್ಯರ್ಥಿಯು 01.04.1996 ರಿಂದ 31.03.2004 ರ ನಡುವೆ ಜನಿಸಿರಬೇಕು. ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಠ 28 ವರ್ಷ ಮೀರಿರಬಾರದು.
    SC/ST/OBC/PWBD ಇತ್ಯಾದಿ ವರ್ಗಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನಿಯಮಗಳು ಭಾರತದ ಮಾರ್ಗಸೂಚಿಗಳು ಅನ್ವಯವಾಗುತ್ತವೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ-5 ವರ್ಷ, ಇತರೆ ಹಿಂದುಳಿದ ವರ್ಗಗಳು – 8 ವರ್ಷಗಳು ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆಯ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಆನ್‌ಲೈನ್‌ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

    ಸ್ಟೈಫಂಡ್‌ ವಿವರ: ಗ್ರಾಮೀಣ/ಅರೆ-ನಗರ ಶಾಖೆಗಳು-ರೂ.15,000
    ನಗರ ಶಾಖೆಗಳು-ರೂ.15,000
    ಮೆಟ್ರೋ ಶಾಖೆಗಳು-ರೂ.15,000
    ಅಪ್ರೆಂಟಿಸ್‌ಗಳು ಯಾವುದೇ ಇತರ ಭತ್ಯೆಗಳು/ಸವಲತ್ತುಗಳಿಗೆ ಅರ್ಹರಾಗಿರುವುದಿಲ್ಲ.

    ಅರ್ಜಿ ಶುಲ್ಕ: PwBD ಅಭ್ಯರ್ಥಿಗಳಿಗೆ ರೂ.400/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಎಲ್ಲಾ ಮಹಿಳಾ ಅಭ್ಯರ್ಥಿಗಳು/EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.600 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಇತರೆ ಅಭ್ಯರ್ಥಿಗಳಿಗೆ ರೂ. 800 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ www.nats.education.gov.in ನಲ್ಲಿ ಅಪ್ರೆಂಟ್ಶಿಪ್‌ ಪೋರ್ಟಲ್‌ಗೆ ಭೇಟಿ ನೀಡಬೇಕು.
    ಅನಂತರ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಪ್ರೆಂಟಿಶಿಪ್‌ ನ ಆನ್‌ಲೈನ್‌ ಅರ್ಜಿಯ ಲಿಂಕ್‌ ಕ್ಲಿಕ್‌ ಮಾಡಿ
    ಅಭ್ಯರ್ಥಿಗಳು ಮೊದಲು ಅಪ್ರೆಂಟಿಶಿಪ್‌ ಪೋರ್ಟಲ್‌ಗೆ ಲಾಗಿನ್‌ ಆಗಬೇಕು.
    ಅಲ್ಲಿ ನೀವು ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ ನ್ಯಾವಿಗೇಟ್‌ ಮಾಡಿ
    ನಂತರ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಪ್ರೆಂಟಿಶಿಪ್‌ ಬಟನ್‌ ಕ್ಲಿಕ್‌ ಮಾಡಬೇಕು. ನಂತರ ಆಕ್ಷನ್‌ ಕಾಲಮ್‌ನಲ್ಲಿ ಅಪ್ಲೈ ಬಟನ್‌ ಇರುತ್ತದೆ. ಅದನ್ನು ಆಯ್ಕೆ ಮಾಡಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • KEA KLA Recruitment 2024: ಕೆಎಲ್‌ಎ ಇಂದ ನೇಮಕ ಅಧಿಸೂಚನೆ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ ರೂ.97ಸಾವಿರ

    KEA KLA Recruitment 2024: ಕೆಎಲ್‌ಎ ಇಂದ ನೇಮಕ ಅಧಿಸೂಚನೆ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ ರೂ.97ಸಾವಿರ

    KEA KLA Recruitment 2024: ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ-ಕರ್ನಾಟಕ ವೃಂದದಲ್ಲಿನ ವಿವಿಧ ವೃಂದಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ಮಾಡಬೇಕು. ಒಟ್ಟು 28 ಹುದ್ದೆಗಳು ಖಾಲಿ ಇದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 24.03.2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 23.04.2024
    ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 25.04.2024

    ಹುದ್ದೆಯ ಕುರಿತ ಮಾಹಿತಿ ಇಲ್ಲಿದೆ;
    ಯಾವೆಲ್ಲ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ?
    ಸೀನಿಯರ್‌ ಪ್ರೋಗ್ರಾಮರ್‌, ಜೂನಿಯರ್‌ ಪ್ರೋಗ್ರಾಮರ್‌, ಜೂನಿಯರ್‌ ಕನ್ಸೋಲ್‌ ಅಪರೇಟರ್‌, ಕಂಪ್ಯೂಟರ್‌ ಅಪರೇಟರ್‌, ಸಹಾಯಕರು, ಕಿರಿಯ ಸಹಾಯಕರು, ದತ್ತಾಂಶ ನಮೂದು ಸಹಾಯಕರು/ಬೆರಳಚ್ಚುಗಾರರು.

    ಹುದ್ದೆ ಸಂಖ್ಯೆ, ವೇತನ ಲಿಸ್ಟ್‌:
    ಸೀನಿಯರ್ ಪ್ರೋಗ್ರಾಮರ್ – 2 ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ರೂ.52650-97100ರೂ ವೇತನವಿದೆ.
    ಜೂನಿಯರ್ ಪ್ರೋಗ್ರಾಮರ್ – 2 ಹುದ್ದೆ‌ ಖಾಲಿ ಇದೆ. ರೂ. 43100-ರೂ.83900 ಮಾಸಿಕ ವೇತನವಿದೆ.
    ಜೂನಿಯರ್ ಕನ್ಸೋಲ್ ಆಪರೇಟರ್ – 4 ಹುದ್ದೆ ಖಾಲಿ ಇದ್ದು ಮಾಸಿಕ ರೂ.37900-ರೂ.70850 ವೇತನವಿದೆ.
    ಕಂಪ್ಯೂಟರ್ ಆಪರೇಟರ್ – 4 ಹುದ್ದೆ ಖಾಲಿ ಇದ್ದು, ಮಾಸಿಕ ರೂ.30350-ರೂ.58250 ವೇತನವಿದೆ.
    ಸಹಾಯಕರು – 3 ಹುದ್ದೆ ಖಾಲಿ ಇದ್ದು, ರೂ.30350-ರೂ.58250 ವೆತನ ನಿಗದಿ ಪಡಿಸಲಾಗಿದೆ.
    ಕಿರಿಯ ಸಹಾಯಕರು -8 ಹುದ್ದೆ ಖಾಲಿ ಇದ್ದು, ಮಾಸಿಕ ರೂ.21400-42000ರೂ. ವೇತನವಿದೆ.
    ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು – 5 ಹುದ್ದೆ ಖಾಲಿ ಇದ್ದು, ಮಾಸಿಕ ರೂ.21400-ರೂ.42000 ವೇತನ ಸಿಗಲಿದೆ.

    ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳ ಅಭ್ಯರ್ಥಿಗಳಿಗೆ ಪ್ರವರ್ಗ 2 (ಎ), 2(ಬಿ), 3(ಎ),3(ಬಿ) ರೂ.750/-, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.500/-, ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.250/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
    ಅಭ್ಯರ್ಥಿಗಳು ನಿಗದಿಪಡಿಸಿದ ಶುಲ್ಕವನ್ನು ಕಡ್ಡಾಯವಾಗಿ ವೆಬ್‌ಸೈಟ್‌ ಲಿಂಕ್‌ http://kea.kar.nic.in ಅಥವಾ https://cetonline.karnataka.gov.in/kea ಮೂಲಕ ಸಂದಾಯ ಮಾಡತಕ್ಕದ್ದು.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ಸಹಿ ಅಪ್ಲೋಡ್‌ ಮಾಡಿದ ನಂತರ ಪರೀಕ್ಷಾ ಶುಲ್ಕವನ್ನು ಪಾವತಿಸದೇ ಹಾಗೂ ದಾಖಲೆಗಳನ್ನು ಭಾವಚಿತ್ರ/ಸಹಿ ಅಪ್ಲೋಡ್‌ ಮಾಡದೇ ಇರುವ/ಅಸ್ಪಷ್ಟ ಭಾವಚಿತ್ರ/ಸಹಿಯನ್ನು ಅಪ್ಲೋಡ್‌ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿಗಳನ್ನು ಆನ್‌ಲೈನ್‌ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ.

    ವಯೋಮಿತಿ;
    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೂ ಈ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 11ಎ,11ಬಿ,111ಎ ಮತ್ತು 111ಬಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ:
    ಸೀನಿಯರ್‌ ಪ್ರೋಗ್ರಾಮರ್‌, ಜೂನಿಯರ್‌ ಪ್ರೋಗ್ರಾಮರ್‌, ಜೂನಿಯರ್‌ ಕನ್ಸೋಲ್‌ ಅಪರೇಟರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಬ್ಯರ್ಥಿಗಳು ಕಂಪ್ಯೂಟರ್‌ ಸೈನ್ಸ್‌/ಇನ್ಫಾರ್ಮೇಷನ್‌ ಸೈನ್ಸ್‌/ಎಲೆಕ್ಟ್ರಾನಿಕ್‌ ಮತ್ತು ಕಮ್ಯುನಿಕೇಷನ್‌ ವಿಷಯದಲ್ಲಿ ಇಂಜಿನಿಯರಿಂಗ್‌ ಪದವಿ ಮಾಡಿರಬೇಕು.
    ಕಂಪ್ಯೂಟರ್‌ ಅಪರೇಟರ್‌; ಕಂಪ್ಯೂಟರ್‌ ಅಪ್ಲಿಕೇಷನ್‌ ಅಥವಾ ಕಂಪ್ಯೂಟರ್‌ ಸೈನ್ಸ್‌ ಅಥವಾ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿ.ಎಸ್ಸಿ ಪದವಿ ಮಾಡಿರಬೇಕು.
    ಸಹಾಯಕರು ; ಕಾನೂನು ಪದವಿ ಹೊಂದಿರುವವರು, ಗಣಕಯಂತ್ರ ಜ್ಞಾನ ಇರುವವರು ಅರ್ಜಿ ಸಲ್ಲಿಸಬಹುದು.
    ಕಿರಿಯ ಸಹಾಯಕರು -ಪದವಿ ಹೊಂದಿರುವವರು ಜೊತೆಗೆ ಗಣಕಯಂತ್ರ ಜ್ಞಾನ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
    ದತ್ತಾಂಶ ನಮೂನು ಸಹಾಯಕರು/ಬೆರಳಚ್ಚುಗಾರರು- ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ, ಕನ್ನಡ ಮತ್ತು ಇಂಗ್ಲೀಷ್‌ ಹಿರಿಯ ದರ್ಜೆಯ ಬೆರಳಚ್ಚುಗಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು; 080-23460460

    ಹುದ್ದೆಯ ಕುರಿತ ಡಿಟೇಲ್ಡ್‌ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ