SSC Jobs 2024: ಸಿಬ್ಬಂದಿ ನೇಮಕಾತಿ ಆಯೋಗವು ಫೇಸ್ 12 ಸೆಲೆಕ್ಷನ್ ಪೋಸ್ಟ್‌ಗಳ ನೇಮಕಾತಿ ಪರೀಕ್ಷೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಎಸ್‌ಎಸ್‌ಸಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 2049 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 26-02-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-03-2024 ರ ರಾತ್ರಿ 11 ಗಂಟೆಯವರೆಗೆ
ಆನ್‌ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 19-03-2024
ಅರ್ಜಿ ತಿದ್ದುಪಡಿ ದಿನಾಂಕ: ಮಾರ್ಚ್ 23,24 ರ ರಾತ್ರಿ 11 ಗಂಟೆಯವರೆಗೆ ನಡೆಯಲಿದೆ.
ಪರೀಕ್ಷೆ ದಿನಾಂಕ (ಕಂಪ್ಯೂಟರ್): ಮೇ.6-8,2024 (ಸಂಭಾವ್ಯ)
ಹುದ್ದೆಗಳ ವಿವರ
ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
ಮಲ್ಟಿಟಾಸ್ಕಿಂಗ್ ಸ್ಟಾಫ್, ರಿಹ್ಯಾಬಿಲಿಟೇಶನ್ ಕೌನ್ಸೆಲರ್, ಕಂಸರ್‌ವೇಶನ್ ಅಸಿಸ್ಟಂಟ್, ಟೆಕ್ನಿಕಲ್ ಅಸಿಸ್ಟಂಟ್, ಟೆಕ್ನಿಕಲ್ ಸೂಪರಿಂಟೆಂಡೆಂಟ್, ಜೂನಿಯರ್ ಸೀಡ್ ಅನಾಲಿಸ್ಟ್, ಅಕೌಂಟೆಂಟ್, ಹೆಡ್ ಕ್ಲರ್ಕ್, ಸ್ಟಾಫ್ ಕಾರ್ ಡ್ರೈವರ್, ಗರ್ಲ್ಸ್ ಕೆಡೆಟ್ ಇನ್‌ಸ್ಟ್ರಕ್ಟರ್, ಮೆಕ್ಯಾನಿಕಲ್ ವಿಭಾಗ ಚಾರ್ಜ್‌ಮನ್, ಸೈಂಟಿಫಿಕ್ ಅಸಿಸ್ಟೆಂಟ್, ರಿಸರ್ಚ್ ಇನ್ವೆಸ್ಟಿಗೇಟರ್, ಜೂನಿಯರ್ ಕಂಪ್ಯೂಟರ್ ಅಪರೇಟರ್, ಸಬ್ ಎಡಿಟರ್ (ಹಿಂದಿ), ಸಬ್ ಎಡಿಟರ್ (ಇಂಗ್ಲೀಷ್), ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಬಯೋಲಜಿ), ಇತರೆ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಮೇಲೆ ನೀಡಲಾದ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.2000 ರಿಂದ ರೂ.40000 ವರೆಗೆ ವೇತನವಿರುತ್ತದೆ.
ಅರ್ಜಿ ಶುಲ್ಕ: ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮತ್ತು ಆಫ್‌ಲೈನ್ ಚಲನ್ ಮೂಲಕ ಪಾವತಿಸಬೇಕು. ಎಸ್‌ಸಿ.ಎಸ್ಟಿ,ಮಹಿಳಾ ಅಭ್ಯರ್ಥಿಗಳು,PwBD ಅಭ್ಯರ್ಥಿಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18, ಗರಿಷ್ಠ 42 ವರ್ಷ ವಯಸ್ಸಾಗಿರಬೇಕು.
ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯೂಡಿ (ಒಬಿಸಿ)ಅಭ್ಯರ್ಥಿಗಳಿಗೆ 13 ವರ್ಷ, ಪಿಡಬ್ಲೂಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸ್ಕಿಲ್ ಟೆಸ್ಟ್, ದಾಖಲೆಗಳ ಪರಿಶೀಲನೆ ಮೂಲಕ ಮೇಲ್ಕಂಡ ಹುದ್ದೆಗೆ ಆಯ್ಕೆ ಮಾಡಲಾಗುವುದು.
ಪರೀಕ್ಷೆಯ ಕೇಂದ್ರಗಳು ಎಲ್ಲೆಲ್ಲಿದೆ?
ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಕವರಟ್ಟಿ, ಬೆಳಗಾವಿ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ;
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://ssc.gov.in ಗೆ ಭೇಟಿ ನೀಡಬೇಕು, ನಂತರದ ಪುಟದಲ್ಲಿ ಕಾಣುವ Login or Register ಎಂಬಲ್ಲಿ ಕ್ಲಿಕ್ ಮಾಡಬೇಕು. ಈ ಲಿಂಕ್ ಕ್ಲಿಕ್ ಮಾಡಿದಾಗ ಇನ್ನೊಂದು ಪೇಜ್ ಬರುತ್ತದೆ, ಅಲ್ಲಿ ನಿಮ್ಮ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್ ಮಾಡ್ಕೊಳ್ಳಿ. ಆಮೇಲೆ ಇನ್ನೊಮ್ಮೆ ಲಾಗಿನ್ ಆಗಿ ಎಲ್ಲಾ ಮಾಹಿತಿ, ದಾಖಲೆ ಸಹಿತ ನೀಡಿ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ