SSC Recruitment 2024: ಸಿಬ್ಬಂದಿ ನೇಮಕಾತಿ ಆಯೋಗವು ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ವಿವಿಧ ಸಂಸ್ಥೆಗಳು, ಸಚಿವಾಲಯ, ಇಲಾಖೆಗಳಲ್ಲಿ ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್) ಈ ಹುದ್ದೆಗಳ ಭರ್ತಿಯು ಮಾಡಲಿದೆ. ಒಟ್ಟು 968 ಹುದ್ದೆಗಳು ಖಾಲಿ ಇದ್ದು, ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿದ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 28-03-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-04-2024 (ರಾತ್ರಿ 11 ಗಂಟೆ ತನಕ)
ಅರ್ಜಿ ಶುಲ್ಕ ಆನ್‌ಲೈನ್ ಮೂಲಕ ಪಾವತಿ ಮಾಡಲು ಕೊನೆಯ ದಿನಾಂಕ: 19-04-2024
ಚಲನ್ ಜೆನೆರೇಟ್ ಆಫ್‌ಲೈನ್ ಮೂಲಕ ಮಾಡಲು ಕೊನೆಯ ದಿನಾಂಕ: 02-09-2024
ಅರ್ಜಿ ತಿದ್ದು ಪಡಿಗೆ ಪ್ರಾರಂಭಿಕ ದಿನಾಂಕ: 22-04-2024 to 23-04-2024
ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪೇಪರ್ -1): 04-06-2024 to 06-06-2024
ಪೇಪರ್ -2 ಪರೀಕ್ಷೆಗೆ ದಿನಾಂಕ ಪ್ರಕಟವಾಗಬೇಕಷ್ಟೇ.
ಹುದ್ದೆಯ ವಿವರ ಈ ಕೆಳಗಿನಂತಿದೆ;
ಹುದ್ದೆ: ಸಿಬ್ಬಂದಿ ನೇಮಕಾತಿ ಆಯೋಗವು ಜೂನಿಯರ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಒಟ್ಟು 968 ಹುದ್ದೆಗಳು ಖಾಲಿ ಇದ್ದು, ಅಧಿಸೂಚನೆಯಲ್ಲಿ ನೀಡಲಾದ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು ಮತ್ತು ಸಂಖ್ಯೆ:
ಕಿರಿಯ ಇಂಜಿನಿಯರ್ – ಗಡಿ ರಸ್ತೆ ಸಂಸ್ಥೆ : 475 ಹುದ್ದೆಗಳು
ಕಿರಿಯ ಇಂಜಿನಿಯರ್ – ಬ್ರಹ್ಮಪುತ್ರ ಬೋರ್ಡ್, ಜಲಶಕ್ತಿ ಸಚಿವಾಲಯ : 02 ಹುದ್ದೆಗಳು
ಕಿರಿಯ ಇಂಜಿನಿಯರ್ – ಸೆಂಟ್ರಲ್ ವಾಟರ್ ಕಮಿಷನ್ : 120 ಹುದ್ದೆಗಳು
ಕಿರಿಯ ಇಂಜಿನಿಯರ್ – ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್‌ಮೆಂಟ್ : 338 ಹುದ್ದೆಗಳು
ಕಿರಿಯ ಇಂಜಿನಿಯರ್ – ಸೆಂಟ್ರಲ್ ವಾಟರ್ ಪವರ್ ರಿಸರ್ಚ್ ಸ್ಟೇಷನ್ : 05 ಹುದ್ದೆಗಳು
ಕಿರಿಯ ಇಂಜಿನಿಯರ್ – ನೌಕಾಪಡೆ : 06 ಹುದ್ದೆಗಳು
ಕಿರಿಯ ಇಂಜಿನಿಯರ್ – ಜಲ ಶಕ್ತಿ ಸಚಿವಾಲಯ : 04 ಹುದ್ದೆಗಳು
ಕಿರಿಯ ಇಂಜಿನಿಯರ್ – NTRO : 06 ಹುದ್ದೆಗಳು
ಕಿರಿಯ ಇಂಜಿನಿಯರ್ – ಮಿಲಿಟರಿ ಇಂಜಿನಿಯರ್ ಸರ್ವೀಸ್ – ನಿಗದಿ ಪಡಿಸಿಲ್ಲ
ಒಟ್ಟು 968 ಹುದ್ದೆಗಳು ಖಾಲಿ ಇದೆ
ಅರ್ಜಿ ಶುಲ್ಕ: ಮಹಿಳಾ ಅಭ್ಯರ್ಥಿಗಳು, ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಉಳಿದಂತೆ ಎಲ್ಲರೂ ರೂ.100 ಅರ್ಜಿ ಶುಲ್ಕ ಪಾವತಿ ಮಾಡಬೇಕು.
ವಯೋಮಿತಿ: ಈ ಹುದ್ದೆಗೆ ಗರಿಷ್ಠ 30 ವರ್ಷ ವಯಸ್ಸು ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ವೇತನ: ಅಭ್ಯರ್ಥಿಗಳಿಗೆ ಪೇ ಲೆವೆಲ್-7 ರ ಪ್ರಕಾರ ನಗರಗಳ ಆಧಾರಿತವಾಗಿ ವೇತನ ಸಿಗಲಿದೆ.
X-ಸಿಟೀಸ್ : Rs.57,408.
Y-ಸಿಟೀಸ್ : Rs.52,776.
Z-ಸಿಟೀಸ್ : Rs.49.944.
ಪೇಸ್ಕೇಲ್ (ಪೇ ಲೆವೆಲ್-7 ರ ಪ್ರಕಾರ ) : Rs.35,400-1,12,400
ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ತಕ್ಕಂತೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ತೇರ್ಗಡೆ ಹೊಂದಿರಬೇಕು. ಅಥವಾ ಮೂರು ವರ್ಷ ಡಿಪ್ಲೋಮಾ ಪಾಸ್ ಜೊತೆಗೆ ಎರಡು ವರ್ಷದ ಕೆಲಸದ ಅನುಭವ ಹೊಂದಿರಬೇಕು.
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಬೇಸಿಕ್ ಪೇ ರೂ.35,400 ಮಾಸಿಕ ನೀಡಲಾಗುವುದು.
ಜಮ್ಮು ಕಾಶ್ಮೀರ, ನಾರ್ಥ್‌ಈಸ್ಟ್ ಇಂಡಿಯಾ ಈ ಪ್ರದೇಶ ಹೊರತು ಪಡಿಸಿ ಬೇರೆ ಕಡೆ ನಿಯೋಜನೆ ಹೊಂದಿದ್ದರೆ ಅಂತಹ ಅಭ್ಯರ್ಥಿಗಳಿಗೆ ಎಸ್‌ಡಿಎ, ಎಸ್‌ಸಿಎ ಭತ್ಯೆ ಇಲ್ಲ.
ಟ್ರಾವೆಲ್ ಅಲೊವೆನ್ಸ್ ದೊಡ್ಡ ನಗರಗಳಿಗೆ ನಿಯೋಜನೆಗೊಂಡವರಿಗೆ ಮಾತ್ರ ಲಭ್ಯ
ಶೇ.8,16,24 ಮಾದರಿಯಲ್ಲಿ HRA ನಗರಗಳ ಆಧಾರದಲ್ಲಿ ಸಿಗಲಿದೆ.