SSC CHSL Recruitment 2024: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 3712 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಸಂಯೋಜಿತ ಹೈಯರ್ ಸೆಕೆಂಡರಿ (10+2) ಮಟ್ಟದ LDC/ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಮತ್ತು DEO ಪೋಸ್ಟ್‌ಗಳನ್ನು SSC CHSL ಅಧಿಕೃತ ಅಧಿಸೂಚನೆಯಯಲ್ಲಿ ಭರ್ತಿ ಮಾಡುವ ಕುರಿತು ಹೇಳಿದೆ. ಅಖಿಲ ಭಾರತ ಸರ್ಕಾರದಲ್ಲಿ ಈ ಹುದ್ದೆಯ ಪೋಸ್ಟಿಂಗ್ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು 07-ಮೇ-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು;
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08-04-2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-ಮೇ-2024
ಆನ್‌ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 08-ಮೇ-2024
ಅರ್ಜಿ ನಮೂನೆ ತಿದ್ದುಪಡಿ ಮತ್ತು ತಿದ್ದುಪಡಿ ಶುಲ್ಕಗಳ ಆನ್‌ಲೈನ್ ಪಾವತಿಯ ದಿನಾಂಕ: 10 ರಿಂದ 11 ನೇ ಮೇ 2024
ಶ್ರೇಣಿ-I (ಕಂಪ್ಯೂಟರ್ ಆಧಾರಿತ ಪರೀಕ್ಷೆ) ವೇಳಾಪಟ್ಟಿಯ ದಿನಾಂಕ: ಜೂನ್-ಜುಲೈ 2024
ಶ್ರೇಣಿ-II ವೇಳಾಪಟ್ಟಿಯ ದಿನಾಂಕ (ಕಂಪ್ಯೂಟರ್ ಆಧಾರಿತ ಪರೀಕ್ಷೆ): ಶೀಘ್ರದಲ್ಲೇ ತಿಳಿಸಲಾಗುವುದು
ಹುದ್ದೆಯ ಕುರಿತ ಮಾಹಿತಿ ಇಲ್ಲಿದೆ;
ಸಂಸ್ಥೆಯ ಹೆಸರು: ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಂಬೈನ್ಡ್ ಹೈಯರ್ ಸೆಕೆಂಡರಿ (10+2) ಮಟ್ಟ (SSC CHSL) ನಲ್ಲಿ ಒಟ್ಟು 3712 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಎಸ್‌ಎಸ್‌ಸಿಯಲ್ಲಿ LDC/Junior Secretariat Assistant & DEO ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.19900-92300/- ವೇತನ ನೀಡಲಾಗುವುದು.
ವಿದ್ಯಾರ್ಹತೆ: SSC CHSL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿ ಪಾಸ್ ಮಾಡಿರಬೇಕು.
ವಯಸ್ಸಿನ ಮಿತಿ: ಮೇಲಿನ ಹುದ್ದೆಗೆ ಅಭ್ಯರ್ಥಿಗಳ ವಯೋಮಿತಿಯು 01-ಆಗಸ್ಟ್-2024 ರಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯಸ್ಸಿನ ಮಿತಿ 27 ವರ್ಷ ಮೀರಿರಬಾರದು. OBC ಅಭ್ಯರ್ಥಿಗಳಿಗೆ 03 ವರ್ಷ,
SC/ST ಅಭ್ಯರ್ಥಿಗಳಿಗೆ 05 ವರ್ಷ, PwBD (UR/EWS) ಅಭ್ಯರ್ಥಿಗಳಿಗೆ 10 ವರ್ಷ, PwBD (OBC) ಅಭ್ಯರ್ಥಿಗಳಿಗೆ 13 ವರ್ಷ, PwBD (SC/ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ: SC/ST/PwBD/ಮಹಿಳೆ/ಮಾಜಿ-SM ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಸಾಮಾನ್ಯ/OBC ಅಭ್ಯರ್ಥಿಗಳು ರೂ.100/- ಅರ್ಜಿ ಶುಲ್ಕ ಪಾವತಿ ಮಾಡಬೇಕು. ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಶ್ರೇಣಿ-1 ಲಿಖಿತ ಪರೀಕ್ಷೆ, ಶ್ರೇಣಿ-2 ಲಿಖಿತ ಪರೀಕ್ಷೆ, ಶ್ರೇಣಿ-3 ಕೌಶಲ್ಯ ಪರೀಕ್ಷೆ/ಟೈಪಿಂಗ್ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
ವೇತನ: ಕೆಳ ವಿಭಾಗದ ಕ್ಲರ್ಕ್ (LDC)/ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA) ರೂ.19900-63200/- ವೇತನ, ಡೇಟಾ ಎಂಟ್ರಿ ಆಪರೇಟರ್ (DEO) ರೂ.25500-92300/- ವರೆಗೆ ವೇತನ ಲಭಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.