ನೈರುತ್ಯ ರೈಲ್ವೆ ಮೈಸೂರು ವಿಭಾಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

ನೈರುತ್ಯ ರೈಲ್ವೆ ಮೈಸೂರು ವಿಭಾಗವು ನೈರುತ್ಯ ರೈಲ್ವೆ, ‌ಮೈಸೂರು ವಿಭಾಗಕ್ಕಾಗಿ ಕೋವಿಡ್ 19 ಕ್ಕಾಗಿ ಪೂರ್ಣ ಸಮಯದ ಕೆಲಸಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ.

ಹುದ್ದೆ : ಕೋವಿಡ್ -19 ಕ್ಕಾಗಿ ಪೂರ್ಣ ಸಮಯದ ವೈದ್ಯರು (ತಜ್ಞರು), ಸ್ಟಾಫ್ ನರ್ಸ್ ಗಳು ಮತ್ತು ಜಿಡಿಎಂಒಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

ಹುದ್ದೆ ಸಂಖ್ಯೆ : ಸಿಎಂಪಿ ತಜ್ಞ (02 ಹುದ್ದೆಗಳು), ಜಿಡಿಎಂಒ (03 ಹುದ್ದೆಗಳು), ಸ್ಟಾಫ್ ನರ್ಸ್ ( 03 ಹುದ್ದೆಗಳು)

ಸೇವೆ ಅಗತ್ಯವಿರುವ ಸ್ಥಳ : ಕೋವಿಡ್ ಐಸೊಲೇಷನ್ ವಾರ್ಡ್, ರೈಲ್ವೆ ಆಸ್ಪತ್ರೆ, ಮೈಸೂರು.

03 ತಿಂಗಳ ಅವಧಿಗೆ ಅಥವಾ 30-06-2021 ರವರೆಗೆ ಯಾವುದು ಮೊದಲಾಗಯತ್ತದೆಯೋ ಅದರಂತೆ ಮತ್ತು ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ 06 ತಿಂಗಳ ಅವಧಿಗೆ ಅಥವಾ 30-09-2021 ರವರೆಗೆ ಯಾವುದು ಮೊದಲಾಗುತ್ತದೆಯೋ ಅದರಂತೆ ತೊಡಗಿಸಿಕೊಳ್ಳಲು ಪ್ರಸ್ತಾಪಿಸಿದೆ.

ವಾಕ್ – ಇನ್ – ಸಂದರ್ಶನದ ಸ್ಥಳ ಮತ್ತು ದಿನಾಂಕ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿರವರ ಕಚೇರಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ, ಇರ್ವಿನ್ ರಸ್ತೆ, ಮೈಸೂರು

ದಿನಾಂಕ 19-04-2021 ಸೋಮವಾರ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment