ದಕ್ಷಿಣ ರೈಲ್ವೆ ವಲಯವು ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.
ಹುದ್ದೆ : ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಿದೆ. ಅರ್ಹ ಅಭ್ಯರ್ಥಿಗಳಿಂದ ಪ್ಯಾರಾ ಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆ ಸಂಖ್ಯೆ : ಒಟ್ಟು 191 ಅರೆ ವೈದ್ಯಕೀಯ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ನೇಮಕಾತಿ ಮಾಡಿಕೊಳ್ಳಲಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 30, 2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆಯಾಗುವ ಅಭ್ಯರ್ಥಿಗಳು ಚೆನ್ನೈನ ಪೆರಂಬೂರಿನಲ್ಲಿರೋ ರೈಲ್ವೇ ಆಸ್ಪತ್ರೆಯ ಹೆಡ್‌ಕ್ವಾಟ್ರಸ್‌ಗೆ ನೇಮಕಾತಿ ಮಾಡಿಕೊಳ್ಳಲಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕ ಮೀರುವ ಮೊದಲು ಅರ್ಜಿ ಸಲ್ಲಿಸುವುದು ಒಳ್ಳೆಯದು.
ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ರೂ. 83 , ಫಿಸಿಯೋಥೆರಪಿಸ್ಟ್ 1 ಹುದ್ದೆ, ಇಸಿಜಿ ಟೆಕ್ನಿಷಿಯನ್ 4 ಹುದ್ದೆ, ಹಿಮೋಡಯಾಲಿಸಿಸ್ ಟೆಕ್ನಿಷಿಯನ್ 3 ಹುದ್ದೆ, ಹಾಸ್ಪಿಟಲ್ ಅಸಿಸ್ಟೆಂಟ್ 48 ಹುದ್ದೆ, ಹೌಸ್ ಕೀಪಿಂಗ್ ಅಸಿಸ್ಟೆಂಟ್ (ಮೆಡಿಕಲ್ ) 40 ಹುದ್ದೆ, ಲ್ಯಾನ್ ಅಸಿಸ್ಟೆಂಟ್ ಗ್ರೇಡ್ – 2 – 29 ಹುದ್ದೆ, ಹಾಗೂ ರೇಡಿಯೋಗ್ರಾಫರ್ 3 ಹುದ್ದೆಗಳಿಗೆ ಈ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೊದಲು ಫಿಟ್‌ನೆಸ್‌ಗಾಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಅರೆ ವೈದ್ಯಕೀಯ ಸಿಬ್ಬಂದಿಯ ಅಭ್ಯರ್ಥಿಗಳ ಆಯ್ಕೆಯಾಗಿ ದೂರವಾಣಿ ಸಂದರ್ಶನ ನಡೆಸಲಾಗುವುದು. ಒಪ್ಪಂದದ ಪ್ರಕಾರ ಅಭ್ಯರ್ಥಿಗಳು ತಮ್ಮಸ್ವಂತ ಖರ್ಚಿನಲ್ಲಿ ಆಡಳಿತಾತ್ಮಕ ಅಗತ್ಯಗಳಿಗೆ ಅನುಗುಣವಾಗಿ ಡ್ರೆಸ್ ಕೋಡ್ ನ್ನು ಅನುಸರಿಸಬೇಕು.
ವೇತನ : ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ರೂ. 44,900/-, ಫಿಸಿಯೋಥೆರಪಿಸ್ಟ್ ಹುದ್ದೆಗೆ ರೂ.35,400/- ಇಸಿಜಿ ಟೆಕ್ನಿಷಿಯನ್ ಗೆ ರೂ.25,500/-, ಹಿಮೋಡಯಾಲಿಸಿಸ್ ಟೆಕ್ನಿಷಿಯನ್ ಹುದ್ದೆಗೆ ರೂ.35,400/-, ಹಾಸ್ಪಿಟಲ್ ಅಸಿಸ್ಟೆಂಟ್ ಹುದ್ದೆಗೆ ರೂ. 18,000/-, ಹೌಸ್ ಕೀಪಿಂಗ್ ಅಸಿಸ್ಟೆಂಟ್ (ಮೆಡಿಕಲ್ ) ರೂ.18,000/- , ಲ್ಯಾನ್ ಅಸಿಸ್ಟೆಂಟ್ ಗ್ರೇಡ್ – 2 ರೂ. 21,700/- ಹಾಗೂ ರೇಡಿಯೋಗ್ರಾಫರ್ ಹುದ್ದೆಗೆ ರೂ. 29,200 ಸಂಬಳ ದೊರಕಲಿದೆ.ಇದರಲ್ಲಿ ಡಿಎ ಹಾಗೂ ಇನ್ನಿತರೆ ಅಲವೆನ್ಸ್ ಇರಲಿವೆ.
ಪ್ಯಾರಾ ವೈದ್ಯಕೀಯ ಸಿಬ್ಬಂದಿಯ ಒಪ್ಪಂದವು ಸೆಪ್ಪೆಂಬರ್ 30, 2021 ರವರೆಗೆ ಗುತ್ತಿಗೆ ಆಧಾರದಲ್ಲಿರುತ್ತದೆ.
ಆಸಕ್ತ ಅಭ್ಯರ್ಥಿಗಳು ಮೊದಲು ಆಯ್ಕೆ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಬೇಕು. ದಕ್ಷಿಣ ರೈಲ್ವೆಯ ಅಧಿಕೃತ ವೆಬ್‌ಸೈಟ್ ಗೆ ಲಾಗಿನ್ ಆಗಿ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ