South Eastern Coalfields Ltd Recruitment: ಸೌಥ್ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್ (SECL)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 87 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಮೆಡಿಕಲ್ ಸ್ಪೆಷಲಿಸ್ಟ್, ಸೀನಿಯರ್ ಮೆಡಿಕಲ್ ಆಫೀಸರ್, ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್ ಹಾಗೂ ಇತರೆ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 11-04-2024 ಕೊನೆಯ ದಿನಾಂಕವಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-04-2024
ಹುದ್ದೆಯ ಮಾಹಿತಿ
ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್ (ಇ4)/ಮೆಡಿಕಲ್ ಸ್ಪೆಷಲಿಸ್ಟ್ (ಇ3) : 58 ಹುದ್ದೆಗಳು- ಎಂಬಿಬಿಎಸ್/ಪಿಜಿ ಡಿಪ್ಲೋಮಾ/ ಡಿಗ್ರಿ/ಡಿಎನ್‌ಬಿ ಮಾಡಿರಬೇಕು.
ಸೀನಿಯರ್ ಮೆಡಿಕಲ್ ಆಫೀಸರ್ (ಇ3) : 27 ಹುದ್ದೆಗಳು- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್ ಮಾಡಿರಬೇಕು.
ಸೀನಿಯರ್ ಮೆಡಿಕಲ್ ಆಫೀಸರ್ (ಡೆಂಟಲ್) (ಇ3) : 02 ಹುದ್ದೆಗಳು- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಡಿಎಸ್ ಮಾಡಿರಬೇಕು.
ವಯೋಮಿತಿ: ಮೆಡಿಕಲ್ ಸ್ಪೆಷಲಿಸ್ಟ್ – ಗರಿಷ್ಠ 42 ವರ್ಷ ವಯಸ್ಸು
ಮೆಡಿಕಲ್ ಆಫೀಸರ್ – ಗರಿಷ್ಠ 35 ವರ್ಷ
ನಿಯಮ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ವಯೋಮಿತಿ:
ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್(ಇ4) / ಮೆಡಿಕಲ್ ಸ್ಪೆಷಲಿಸ್ಟ್ (ಇ3) ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ Rs.70,000- 2,00,000 ವೇತನ ಸಿಗಲಿದೆ.
ಸೀನಿಯರ್ ಮೆಡಿಕಲ್ ಆಫೀಸರ್ (ಇ3) ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ Rs.60,000-1,80,000 ವೇತನ ಸಿಗುತ್ತದೆ.
ಸೀನಿಯರ್ ಮೆಡಿಕಲ್ ಆಫೀಸರ್ (ಡೆಂಟಲ್) (ಇ3) ಆಯ್ಕೆಯಾದ ಅಭ್ಯರ್ಥಿಗಳಿಗೆ Rs.60,000-1,80,000 ವೇತನ ಲಭಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ