Railway Jobs 2024: ಸೌಥ್‌ ಈಸ್ಟ್‌ ಸೆಂಟ್ರಲ್‌ ರೈಲ್ವೆಯಲ್ಲಿ ಭರ್ಜರಿ 1113 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

South East Central Railway Recruitment 2024: ಸೌಥ್‌ ಈಸ್ಟ್‌ ಸೆಂಟ್ರಲ್‌ ರೈಲ್ವೆಯು ( ಆಗ್ನೇಯ ಮಧ್ಯೆ ರೈಲ್ವೆಯ) ರಾಯ್‌ಪುರ್‌ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 1113 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಕಚೇರಿಗಳು, ವ್ಯಾಗನ್‌ ರಿಪೇರ್‌ ಆಫೀಸ್‌ಗಳಲ್ಲಿ ಅಗತ್ಯ ಇರುವ ಅಪ್ರೆಂಟಿಸ್‌ ಪೋಸ್ಟ್‌ಗಳ ಭರ್ತಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಹುದ್ದೆಯ ಕುರಿತ ಇತರ ಮಾಹಿತಿಯನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 01-05-2024 ರವರೆಗೆ ಸಮಯಾವಕಾಶವಿದ್ದು, ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 02-04-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-05-2024 ರ ರಾತ್ರಿ 11-59 ರವರೆಗೆ.

ಹುದ್ದೆಯ ಕುರಿತ ಮಾಹಿತಿ ಇಲ್ಲಿದೆ;
ಡಿಆರ್‌ಎಂ ಆಫೀಸ್ – ರಾಯ್‌ಪುರ್ ವಿಭಾಗದ ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ;
ವೆಲ್ಡರ್ – 161 ಹುದ್ದೆಗಳು
ಟರ್ನರ್ – 54 ಹುದ್ದೆಗಳು
ಫಿಟ್ಟರ್ – 207 ಹುದ್ದೆಗಳು
ಇಲೆಕ್ಟ್ರೀಷಿಯನ್ – 212 ಹುದ್ದೆಗಳು
ಸ್ಟೆನೋಗ್ರಾಫರ್ (ಇಂಗ್ಲಿಷ್) – 15 ಹುದ್ದೆಗಳು
ಸ್ಟೆನೋಗ್ರಾಫರ್ (ಹಿಂದಿ) : 8 ಹುದ್ದೆಗಳು
ಕಂಪ್ಯೂಟರ್ ಆಪರೇಟರ್ / ಪ್ರೋಗ್ರಾಮ್ ಅಸಿಸ್ಟಂಟ್ : 10 ಹುದ್ದೆಗಳು
ಹೆಲ್ತ್‌ ಅಂಡ್ ಸ್ಯಾನಿಟರಿ ಇನ್ಸ್‌ಪೆಕ್ಟರ್ : 25 ಹುದ್ದೆಗಳು
ಮಷಿನಿಸ್ಟ್ : 15 ಹುದ್ದೆಗಳು
ಮೆಕ್ಯಾನಿಕಲ್ ಡೀಸೆಲ್ : 81 ಹುದ್ದೆಗಳು
ಮೆಕ್ಯಾನಿಕಲ್ ರೆಫ್ರಿಜರೇಟರ್ ಅಂಡ್ ಏರ್‌ ಕಂಡೀಷನರ್ : 21 ಹುದ್ದೆಗಳು
ಮೆಕ್ಯಾನಿಕ್ ಆಟೋ ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್‌ : 35 ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ವ್ಯಾಗನ್ ರಿಪೇರ್ ಶಾಪ್ ರಾಯ್‌ಪುರ್‌ ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ;
ಫಿಟ್ಟರ್ – 110 ಹುದ್ದೆಗಳು
ವೆಲ್ಡರ್ – 110 ಹುದ್ದೆಗಳು
ಮಷಿನಿಸ್ಟ್‌ – 15 ಹುದ್ದೆಗಳು
ಟರ್ನರ್ – 14 ಹುದ್ದೆಗಳು
ಇಲೆಕ್ಟ್ರೀಷಿಯನ್ – 14 ಹುದ್ದೆಗಳು
ಕಂಪ್ಯೂಟರ್ ಆಪರೇಟರ್ / ಪ್ರೋಗ್ರಾಮ್ ಅಸಿಸ್ಟಂಟ್ – 4 ಹುದ್ದೆಗಳು
ಸ್ಟೆನೋ (ಇಂಗ್ಲಿಷ್) – 1 ಹುದ್ದೆ
ಸ್ಟೆನೋ (ಹಿಂದಿ) : 1 ಹುದ್ದೆ ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10th ಪಾಸ್‌ ಜೊತೆಗೆ ಐಟಿಐ ವಿವಿಧ ಟ್ರೇಡ್‌ನಲ್ಲಿ ಮಾಡಿರಬೇಕು. ಹಾಗೆನೇ ಎನ್‌ಸಿವಿಟಿ, ಎಸ್‌ಸಿವಿಟಿ ಪ್ರಮಾಣಪತ್ರಗಳನ್ನು ಪಡೆದಿರಬೇಕು.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯೋಮಿತಿಯು 15 ವರ್ಷ, ಗರಿಷ್ಠ 24 ವರ್ಷ ಮೀರಿರಬಾರದು. ಒಬಿಸಿ-3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮತಿ ಸಡಿಲಿಕೆಯನ್ನು ನೀಡಲಾಗಿದೆ.

ಮಾಸಿಕ ಸ್ಟೈಫಂಡ್‌; ರೂ.8000-10000 ರವರೆಗೆ ಮಾಸಿಕ ಸ್ಟೈಫಂಡ್‌ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?
https://www.apprenticeshipindia.gov.in/candidate-registration ಗೆ ಅಭ್ಯರ್ಥಿಗಳು ಕ್ಲಿಕ್‌ ಮಾಡಿ. ಇದು ಓಪನ್‌ ಆದ ನಂತರ ಅಲ್ಲಿ ಇಮೇಲ್‌ ವಿಳಾಸ, ಇತರೆ ಮಾಹಿತಿ ನೀಡಬೇಕು. ಆಗ ನಿಮಗೆ ರಿಜಿಸ್ಟ್ರೇಶನ್‌ ದೊರಕುತ್ತದೆ. ನಂತರ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಐಟಿಐ ಪಾಸ್ ಸರ್ಟಿಫಿಕೇಟ್‌, ಇತರೆ ಮಾಹಿತಿಗಳನ್ನು ಇಟ್ಟುಕೊಂಡಿರಬೇಕು.