ಸರ್ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ ಇಂದಿರಾನಗರ ಬೆಂಗಳೂರು ಆಸ್ಪತ್ರೆಯ ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆ ಸಮಯದಲ್ಲಿ ಆಸ್ಪತ್ರೆಗಳಲ್ಲಿ ರಚಿಸಲಾದ ಐಸಿಯುಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಕಾರ್ಯಗತಗೊಳಿಸಿ ನಿರ್ವಹಿಸಲು ಹೆಚ್ಚುವರಿ ಮಾನವ ಸಂಪನ್ಮೂಲಗಳನ್ನು 06 ತಿಂಗಳು ಮಟ್ಟಿಗೆ ತಾತ್ಕಾಲಿಕವಾಗಿ ಗುತ್ತಿಗೆ, ಆಧಾರದ ಮೇಲೆ 18 ಶ್ರುಶ್ರೂಷಕರುಗಳ ಸಿಬ್ಬಂದಿಗಳನ್ನು ನೇರ ಸಂದರ್ಶನದ ಮುಖಾಂತರ (walk in Interview) ದಿನಾಂಕ : 25-05-2021 ರಿಂದ 28-05-2021 ರವರೆಗೆ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 4:30 ಗಂಟೆಯವರೆಗೆ ವೈದ್ಯಕೀಯ ಅಧೀಕ್ಷಕರ ಕೊಠಡಿಯಲ್ಲಿ ನಡೆಸುತ್ತಿದ್ದು ತಾವುಗಳು ಮೂಲ ದಾಖಲಾತಿ ಪ್ರಮಾಣ ಪತ್ರಗಳೊಂದಿಗೆ, ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗುವುದು. ( ಅಭ್ಯರ್ಥಿಯ ವಯೋಮಿತಿ 40 ವರ್ಷದ ಒಳಗಿರಬೇಕು) 18 ಶ್ರುಶ್ರೂಷಕರುಗಳ ಸಿಬ್ಬಂದಿಯ ಹುದ್ದೆಗಳ ವೇತನಕ್ಕೆ ಸಂಬಂಧಿಸಿದಂತೆ, ಸರಕಾರವು ಸದರಿ ಅವಧಿಗೆ ನಿಗದಿಪಡಿಸಿದ ವೇತನವನ್ನು ನೀಡಲಾಗುವುದು.
ಹುದ್ದೆ : ಶ್ರುಶ್ರೂಷಕರುಗಳು -18 ಹುದ್ದೆ
ನೇರ ಸಂದರ್ಶನ : ದಿನಾಂಕ 25-05-2021 ರಿಂದ 28-05-2021 ರವರೆಗೆ ಸಮಯ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 4:30 ವರೆಗೆ.
ವಯೋಮಿತಿ : ಒಬಿಸಿ ಅಭ್ಯರ್ಥಿಗಳು 35 ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಸಿಎಟಿ-1 ಅಭ್ಯರ್ಥಿಗಳಿಗೆ 40 ವರ್ಷ.
ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 25,000/- ವೇತನವಿರುತ್ತದೆ.
ಸ್ಥಳೀಯ ಅಭ್ಯರ್ಥಿಗಳಿಗೆ ಹಾಗೂ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಅನುಭವುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.