ಶ್ರೀ ಬಾಲಾಜಿ ಬಂಜಾರಾ ವಿದ್ಯಾವರ್ಧಕ ಸಂಘ ( ರಿ) ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಅನುದಾನಿತ ಪ್ರೌಢಶಾಲೆಯಲ್ಲಿ ಈ ಕೆಳಗೆ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ ವಿವರ : ಸಹ ಶಿಕ್ಷಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸಮಾಜ ವಿಜ್ಞಾನ ಮತ್ತು ಕನ್ನಡ ಪಂಡಿತ ಅನುದಾನಿತ ವಿಷಯ ಹಾಗೂ ಬಿಎ,ಬಿಎಡ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಮೀಸಲಾತಿ ಗುಂಪು : ಸಮಾಜ ವಿಜ್ಞಾನ : ಪರಿಶಿಷ್ಟ ಜಾತಿ : 1 ಹುದ್ದೆ
ಕನ್ನಡ ಪಂಡಿತ : ಸಾಮಾನ್ಯ : 1 ಹುದ್ದೆ
ವೇತನ : ರೂ.33,460/- ರಿಂದ ರೂ.62,600/-
ಅರ್ಜಿ ಸಲ್ಲಿಸುವ ವಿಧಾನ : ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ ಅರ್ಜಿಯೊಂದಿಗೆ ತಮ್ಮ ಶೈಕ್ಷಣಿಕ ವಿದ್ಯಾರ್ಹತೆ, ಜಾತಿ , ಪ್ರಮಾಣ ಪತ್ರ, ಜನ್ಮದಾಖಲೆ ಮತ್ತು ಇತರೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳು ದೃಢೀಕರಿಸಿ ನಕಲುಗಳೊಂದಿಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ರೂ. 600/-, ಸಾಮಾನ್ಯ ಅಭ್ಯರ್ಥಿಗಳು ರೂ.1000/- ಗಳ ರಾಷ್ಟ್ರೀಕೃತ ಬ್ಯಾಂಕ್ ಹುಂಡಿ ( ಡಿಡಿ)ಯನ್ನು ಅಧ್ಯಕ್ಷರು ಶ್ರೀ ಬಾಲಾಜಿ , ಬಂಜಾರಾ, ವಿದ್ಯಾವರ್ಧಕ ಸಂಘ , ಐನಾಪುರ, ತಾಂಡಾ, ತಾ/ ಜಿ/ ಇವರ ಹೆಸರಿಗೆ ಪಡೆದು, ಅರ್ಜಿಯ ಜೊತೆ ಲಗತ್ತಿಸಿ ಈ ಪ್ರಕಟಣೆ ಪ್ರಕಟಗೊಂಡ 21 ದಿನಗಳ ಅಂದರೆ ದಿನಾಂಕ 26-08-2021 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಮತ್ತು ಅರ್ಜಿಯ ಪ್ರತಿಯೊಂದನ್ನು ಅಗತ್ಯ ದಾಖಲೆಗಳ ಸಹಿತವಾಗಿ ಉಪನಿರ್ದೇಶಕರು,ಸಾ.ಶಿ. ಇಲಾಖೆ ವಿಜಯಪುರ ಇವರಿಗೆ ನಿಗದಿತ ಸಮಯದೊಳಗೆ ಅರ್ಜಿಯನ್ನು ಸಲ್ಲಿಸಬೇಕು.
ಸಂದರ್ಶನ ನಡೆಯುವ ದಿನಾಂಕವನ್ನು ಲಿಖಿತವಾಗಿ ತಿಳಿಸಲಾಗುವುದು.
ಅರ್ಜಿ ಸಲ್ಲಿಸುವ ವಿಳಾಸ : ಅಧ್ಯಕ್ಷರು, ಐನಾಪುರ ಪ್ರೌಢಶಾಲೆ, ಐನಾಪುರ, ತಾ/ಜಿ/ವಿಜಯಪುರ
ವಿಶೇಷ ಸೂಚನೆ : ಈ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಬೇಕು.