Shivamogga DCC Bank Recruitment 2022- ಡಿಸಿಸಿ ಬ್ಯಾಂಕ್‌ನಲ್ಲಿರುವ ಹುದ್ದೆಗಳಿಗೆ 4ನೇ ತರಗತಿಯಿಂದ ಪದವಿ ಓದಿರುವವರೆಗೆ ವಿವಿಧ ಹುದ್ದೆಗಳಿವೆ, ಇಲ್ಲಿದೆ ಸಂಪೂರ್ಣ ಮಾಹಿತಿ

Advertisements

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಶಿವಮೊಗ್ಗ, ಇದರಲ್ಲಿ ಖಾಲಿಯಿರುವ ಈ ಕೆಳಕಂಡ ವಿವಿಧ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕಿನ ನೌಕರರ ಸೇವಾ ನಿಯಮಾವಳಿ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಸಿಒ 58 ಸಿಸಿಬಿ 2018, ಬೆಂಗಳೂರು, ದಿನಾಂಕ 05-02 -2019 ಹಾಗೂ ಸಹಕಾರ ಇಲಾಖೆಯ ಪತ್ರ ಸಂಖ್ಯೆ: ಆರ್‍ಸಿಎಸ್/ಸಿಆರ್‍ಡಿ/ಕೆಎಂಸಿ-4/ 205/201718 ದಿನಾಂಕ 31-05-2021 ರನ್ವಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛೆಯುಳ್ಳ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಅರ್ಜಿ ನಮೂನೆಯಲ್ಲಿ ಸ್ವಹಸ್ತದ / ಗಣಕಯಂತ್ರದಿಂದ ಮಾಡಿದ ಅರ್ಜಿಯನ್ನು ಪೂರ್ಣ ವಿವರ, ಅಗತ್ಯ ದಾಖಲಾತಿಗಳ ದೃಢೀಕೃತ ಪ್ರತಿ ಹಾಗೂ ಅರ್ಜಿ ಶುಲ್ಕದೊಂದಿಗೆ ಈ ಕೆಳಗೆ ಸಹಿ ಮಾಡಿದವರಿಗೆ ಸಲ್ಲಿಸಬೇಕು. ನೇಮಕಾತಿ ಮಾಡಲುದ್ದೇಶಿಸಿರುವ ಹುದ್ದೆಗಳ ಒಟ್ಟು ಸಂಖ್ಯೆ: 98. ಸದರಿ ಹುದ್ದೆಗಳನ್ನು ಸರ್ಕಾರಿ ಆದೇಶ ಪ್ರಕಾರ ಈ ಕೆಳಕಂಡಂತೆ ವರ್ಗೀಕರಿಸಿ ಮೀಸಲಿರಿಸಲಾಗಿದೆ.

ವಿಶೇಷ ಸೂಚನೆ:- ಈ ಕೆಳಕಂಡ ಹುದ್ದೆಗಳ ಭರ್ತಿಗಾಗಿ ಬ್ಯಾಂಕು ಈ ಹಿಂದೆ ನೀಡಿದ್ದ ಪತ್ರಿಕಾ ಪ್ರಕಟಣೆ ಸಂಖ್ಯೆ: ಆ ಮತ್ತು ಸಿ/ 3041/2018-19 ದಿನಾಂಕ 22-02-2019ರ ಅನ್ವಯ ಅರ್ಜಿ ಸಲ್ಲಿಸಿ ಬ್ಯಾಂಕಿನಿಂದ ಲಿಖಿತ ಪರೀಕ್ಷೆಗೆ `ಪ್ರವೇಶ ಪತ್ರ’ ಸ್ವೀಕರಿಸಿದ ಅಭ್ಯರ್ಥಿಗಳು ಈ ಪ್ರಕಟಣೆಯನ್ನನುಸರಿಸಿ ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಹಿಂದಿನ ಅರ್ಜಿಯನ್ನೇ ಪರಿಗಣಿಸಲಾಗುವುದು.

Shivamogga DCC Bank Recruitment 2022- ಡಿಸಿಸಿ ಬ್ಯಾಂಕ್‌ನಲ್ಲಿರುವ ಹುದ್ದೆಗಳಿಗೆ 4ನೇ ತರಗತಿಯಿಂದ ಪದವಿ ಓದಿರುವವರೆಗೆ ವಿವಿಧ ಹುದ್ದೆಗಳಿವೆ, ಇಲ್ಲಿದೆ ಸಂಪೂರ್ಣ ಮಾಹಿತಿ 2

ಡಿಸಿಸಿ ಬ್ಯಾಂಕ್‌ ಉದ್ಯೋಗ- ವೇತನ ಎಷ್ಟು?

ಆಪ್ತ ಸಹಾಯಕರು/ಶೀಘ್ರಲಿಪಿಗಾರರು : ರೂ.33450-850-36000-950-39800-1100-46400- 1250-53900-1450-62600
ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು/ನಗದು ಗುಮಾಸ್ತರು : ರೂ.30350-750-32600-850-36000-950-39800- 1100-46400-1250-53900-1450-58250
ವಾಹನ ಚಾಲಕರು : ರೂ.27650-650-29600-750-32600-850-36000-950-39800-1100-46400-1250-52650
ಅಟೆಂಡರ್ಸ್ : ರೂ.23500-550-24600-600-27000-650-29600-750-32600-850-36000-950-39800-1100- 46400-1250-47650
ಜಲಗಾರರು: ರೂ.17000-400-18600-450-20400-500-22400-550- 24600-600-27000-650-28950 ಮತ್ತು ನಿಯಮಗಳ ಪ್ರಕಾರ ಅನ್ವಯಿಸುವ ಇತರೆ ಭತ್ಯೆಗಳು.

Shivamogga DCC Bank Recruitment 2022: ವಿದ್ಯಾರ್ಹತೆ ಏನು?

ಆಪ್ತ ಸಹಾಯಕರು/ಶೀಘ್ರಲಿಪಿಗಾರರು:
ಅಂಗೀಕೃತ ವಿಶ್ವವಿದ್ಯಾನಿಲಯದ ಪದವಿ ಹೊಂದಿರತಕ್ಕದ್ದು ಹಾಗೂ ಕರ್ನಾಟಕ ಪ್ರೌಡ ಶಿಕ್ಷಣ ಮಂಡಳಿ ಏರ್ಪಡಿಸುವ ಇಂಗ್ಲೀಷ್/ಕನ್ನಡ ಬೆರಳಚ್ಚು ಪರೀಕ್ಷೆಯ ಮತ್ತು ಶೀಘ್ರಲಿಪಿ ಪರೀಕ್ಷೆಯ ಪ್ರೌಢÀ ದರ್ಜೆ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರತಕ್ಕದ್ದು. ಕಂಪ್ಯೂಟರ್‍ನಲ್ಲಿ ಹೆಚ್ಚಿನ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು/ನಗದು ಗುಮಾಸ್ತರು: (1) ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದ ಪದವಿ (2) ಸಹಕಾರ ವಿಷಯಗಳಲ್ಲಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಕಂಪ್ಯೂಟರ್‍ನಲ್ಲಿ ಹೆಚ್ಚಿನ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

ವಾಹನ ಚಾಲಕರು: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ಡ್ರೈವಿಂಗ್ ಲೈಸನ್ಸ್ ಹೊಂದಿರತಕ್ಕದ್ದು.

ಅಟೆಂಡರ್: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಜಲಗಾರರು: ಕನ್ನಡ ಭಾಷೆಯಲ್ಲಿ 4ನೇ ತರಗತಿವರೆಗೆ ಓದಿರತಕ್ಕದ್ದು.

Shivamogga DCC Bank Recruitment 2022: ವಯೋಮಿತಿ ಎಷ್ಟು?

ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಟ 18 ವರ್ಷಗಳು ಹಾಗೂ ಕೆಳಕಂಡಂತೆ ಗರಿಷ್ಟ ವಯೋಮಿತಿಗೊಳಪಟ್ಟಿರತಕ್ಕದ್ದು.

  1. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳು : 40 ವರ್ಷಗಳು
  2. ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳು : 38 ವರ್ಷಗಳು
  3. ಸಾಮಾನ್ಯ ಗುಂಪಿನ ಅಭ್ಯರ್ಥಿಗಳು : 35 ವರ್ಷಗಳು
    ಸರ್ಕಾರಿ ಆದೇಶದ ಅನುಸಾರ ಮಾಜಿ ಸೈನಿಕರಿಗೆ ಸೈನ್ಯದಲ್ಲಿ ಸಲ್ಲಿಸಿದ ಸೇವೆಯನ್ನು ಕಳೆದು ಆಯಾ ವರ್ಗಕ್ಕೆ ನಿಗದಿಪಡಿಸಿದ ವಯೋಮಿತಿಯೊಳಗಿರಬೇಕು.
    ವಿಧವೆಯರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ.

Shivamogga DCC Bank Recruitment 2022: ಅರ್ಜಿ ಶುಲ್ಕ ಎಷ್ಟು?

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ, ಸಾಮಾನ್ಯ ಮತ್ತು ಇತರೆ ಹಿಂದುಳಿದ ಜಾತಿ ಮತ್ತು ವರ್ಗಗಳು ಅಂದರೆ; ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಾಗಿದ್ದಲ್ಲಿ ಅರ್ಜಿ ಶುಲ್ಕವನ್ನಾಗಿ ರೂ.900/- (ರೂಪಾಯಿ ಒಂಬೈನೂರು ಮಾತ್ರ)ಗಳೊಂದಿಗೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಾಗಿದ್ದಲ್ಲಿ ರೂ.450/- (ರೂಪಾಯಿ ನಾಲ್ಕು ನೂರಾ ಐವತ್ತು ಮಾತ್ರ)ಗಳೊಂದಿಗೆ (ಅರ್ಜಿ ಶುಲ್ಕ ಹಿಂದಿರುಗಿಸುವುದಿಲ್ಲ) ಮುಖ್ಯ ಕಾರ್ಯನಿರ್ವಾಹಕರು, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ, ಇವರ ಹೆಸರಿಗೆ ಡಿಮ್ಯಾಂಡ್ ಡ್ರಾಫ್ಟ್ / ಪೇ ಆರ್ಡರ್ ಪಡೆದು ಇತರೇ ದಾಖಲಾತಿಗಳೊಂದಿಗೆ ಅಭ್ಯರ್ಥಿಯ ಇತ್ತೀಚಿನ ನಾಲ್ಕು ಭಾವಚಿತ್ರಗಳ ಪಾಸ್‍ಪೋರ್ಟ್ ಸೈಜ್ ಪ್ರತಿಯನ್ನು ಲಗತ್ತಿಸಿ, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬಾಲರಾಜ್ ಅರಸ್ ರಸ್ತೆ, ಪಿ.ಬಿ. ನಂ.62, ಶಿವಮೊಗ್ಗ – 577 201, ಈ ವಿಳಾಸಕ್ಕೆ ದಿನಾಂಕ 16-05-2022 ರಂದು ಸಂಜೆ 5-30 ಘಂಟೆ ಒಳಗೆ ತಲುಪುವಂತೆ ಅಂಚೆ/ಕೋರಿಯರ್ ಮೂಲಕ ಅಥವಾ ಖುದ್ದಾಗಿ ಕಳುಹಿಸತಕ್ಕದ್ದು.

ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ತಡವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. (5) ಭರ್ತಿ ಮಾಡಬೇಕಾಗಿರುವ ಮೇಲಿನ ಹುದ್ದೆಗಳನ್ನು ಕರ್ನಾಟಕ ಸಹಕಾರ ಕಾಯ್ದೆ 1959 ಹಾಗೂ ನಿಯಮಗಳು 1960 ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮಗಳ ಆದೇಶದ ರೀತ್ಯಾ ಮೀಸಲಾತಿ ನೀಡಿ ನೇಮಕಾತಿ ಮಾಡಲಾಗುವುದು. (6) ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಹಾಗೂ ಇನ್ನಿತರೆ ಮೀಸಲಾತಿ ಸೌಲಭ್ಯ ಪಡೆಯಲು ಇಚ್ಛಿಸುವವರು ಸರ್ಕಾರ ನಿಗದಿಪಡಿಸಿರುವ ನಮೂನೆಯಲ್ಲಿ ಸಂಬಂಧಿಸಿದವರಿಂದ ದೃಢೀಕರಣ ಪಡೆದು ಅದರ ದೃಢೀಕೃತ ಪ್ರತಿಯನ್ನು ಅರ್ಜಿಯ ಜೊತೆ ಲಗತ್ತಿಸಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳು ಸಿಂಧುತ್ವ ಪ್ರಮಾಣ ಪತ್ರವನ್ನು ಪಡೆದು ಬ್ಯಾಂಕಿಗೆ ಸಲ್ಲಿಸಬೇಕಾಗಿರುತ್ತದೆ. (7) ಅಭ್ಯರ್ಥಿಗಳು ಅರ್ಜಿಯೊಂದಿಗೆ ಪದವಿ ವರ್ಷಗಳ ಎಲ್ಲಾ ಅಂಕಪಟ್ಟಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸಲ್ಲಿಸತಕ್ಕದ್ದು.

ನಿಬಂಧನೆಗಳು:

  1. ಅರ್ಜಿಯನ್ನು ಬ್ಯಾಂಕಿನ ವೆಬ್‍ಸೈಟ್‍ನಲ್ಲಿ ತಿಳಿಸಿರುವ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸತಕ್ಕದ್ದು.
  2. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ.85ಕ್ಕೆ ಇಳಿಸಿ, ಪಡೆಯಲಾದ ಅಂಕಗಳ ಶೇಕಡಾವಾರು ಆಧಾರದ ಮೇಲೆ 1 : 5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು ಹಾಗೂ ವಾಹನ ಚಾಲಕರ ಹುದ್ದೆಗೆ ವಾಹನ ಚಾಲನಾ ಪರೀಕ್ಷೆ ನಡೆಸಲಾಗುವುದು.
  3. ಹುದ್ದೆಗಳನ್ನು ಭರ್ತಿ ಮಾಡುವುದು ಬ್ಯಾಂಕಿನಲ್ಲಿ ಅಂತಿಮವಾಗಿ ಲಭ್ಯವಾಗಬಹುದಾದ ಖಾಲಿ ಹುದ್ದೆಗಳನ್ನು ಅವಲಂಬಿಸುತ್ತದೆ. ಆದುದರಿಂದ ಮೇಲ್ಕಂಡ ಹುದ್ದೆಗಳ ಸಂಖ್ಯೆ ಬದಲಾವಣೆಗೆ ಒಳಪಟ್ಟಿರುತ್ತದೆ.
    ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಬ್ಯಾಂಕು ತೆಗೆದುಕೊಳ್ಳುವ ತೀರ್ಮಾನಗಳೇ ಅಂತಿಮವಾಗಿರುತ್ತದೆ ಮತ್ತು ಅವುಗಳಿಗೆ ಎಲ್ಲಾ ಅಭ್ಯರ್ಥಿಗಳು ಬದ್ಧರಾಗಿರತಕ್ಕದ್ದು. ಪ್ರಕಟಣೆಯಲ್ಲಿ ಪ್ರಕಟಿಸಿದ ಹುದ್ದೆಗಳಿಗೆ ಸಂಬಂಧಿಸಿದಂತೆ, ಮೀಸಲಾತಿ ಕೋರಿ ಬಯಸುವ ಅಭ್ಯರ್ಥಿಗಳು ಸರ್ಕಾರದ ವಿವಿಧ ಇಲಾಖೆಗಳು ನೇಮಕಾತಿಗಾಗಿ ನಿಗದಿಪಡಿಸಿರುವ ನಮೂನೆಗಳಲ್ಲಿ ಹಾಗೂ ಚಾಲ್ತಿಯಲ್ಲಿರುವ ಅಗತ್ಯ ಪ್ರಮಾಣ ಪತ್ರಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಲಗತ್ತಿಸತಕ್ಕದ್ದು.

ಅಭ್ಯರ್ಥಿಗಳು ತಾವು ಕೋರಿಬಯಸುವ ಮೀಸಲಾತಿಯನ್ನು ಅರ್ಜಿ ಫಾರಂನ ಸಂಬಂಧಪಟ್ಟ ಕಾಲಂನಲ್ಲಿ ಕೋರಿರುವ ಮೀಸಲಾತಿ ಮತ್ತು ಒಳ ಮೀಸಲಾತಿ ವರ್ಗದಲ್ಲಿ ಅಭ್ಯರ್ಥಿಗಳು ಇಚ್ಛಿಸುವ ಆಯ್ಕೆಯನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.

ಮೀಸಲಿರಿಸಿದ ವರ್ಗಗಳಲ್ಲಿ ಸಮತಳ ಮೀಸಲಾತಿಗಳ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅಂತಹ ಹುದ್ದೆಗಳನ್ನು ಅದೇ ವರ್ಗಕ್ಕೆ ಸೇರಿದ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.

ಎ) ಅಂಗವಿಕಲ ಅಭ್ಯರ್ಥಿ: ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಅಂಗವಿಕಲರಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರಗಳನ್ನು ಕರ್ನಾಟಕ ಸರ್ಕಾರವು ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರದ ದೃಢೀಕೃತ ಪ್ರತಿಯನ್ನು ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಬಿ) ಗ್ರಾಮೀಣ ಅಭ್ಯರ್ಥಿ: ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರ ಸಹಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲು ರುಜು ಪಡೆದು ದೃಢೀಕರಿಸಿ ಲಗತ್ತಿಸತಕ್ಕದ್ದು ಹಾಗೂ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು ಗ್ರಾಮೀಣ ಮೀಸಲಾತಿ ಕೋರಲು ಇಚ್ಛಿಸಿದಲ್ಲಿ ಈ ಪ್ರಮಾಣ ಪತ್ರವಲ್ಲದೇ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಪ್ರಮಾಣ ಪತ್ರವನ್ನು ಪಡೆದು ದೃಢೀಕರಿಸಿ ಕಡ್ಡಾಯವಾಗಿ ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಸಿ) ಕನ್ನಡ ಮಾಧ್ಯಮ ಅಭ್ಯರ್ಥಿ: ಕನ್ನಡ ಮಾಧ್ಯಮ ಮೀಸಲಾತಿ ಕೋರುವ ಅಭ್ಯರ್ಥಿಗಳು ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರ ಸಹಿಯೊಂದಿಗೆ ಪಡೆದ ಪ್ರಮಾಣ ಪತ್ರವನ್ನು ದೃಢೀಕರಿಸಿ ಲಗತ್ತಿಸತಕ್ಕದ್ದು.

ಡಿ) ಯೋಜನಾ ನಿರಾಶ್ರಿತರು: ಸರ್ಕಾರದ ಆದೇಶ ಅನುಸಾರ ಯೋಜನಾ ನಿರಾಶ್ರಿತ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸರ್ಕಾರದ ಸಂಬಂಧಪಟ್ಟ ಅಧಿಸೂಚನೆ ಪ್ರಕಾರ ದೃಢೀಕೃತ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಇ) ಮಾಜಿ ಸೈನಿಕ ಅಭ್ಯರ್ಥಿ: ಮಾಜಿ ಸೈನಿಕ ಅಂದರೆ ಭೂದಳ, ನೌಕಾದಳ ಮತ್ತು ವಾಯುದಳದಲ್ಲಿ ಯಾವುದೇ ಶ್ರೇಣಿಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ. ಇವರು ಸರ್ಕಾರದ ಜಾರಿಯಲ್ಲಿರುವ ನಿಯಮಗಳನ್ವಯ ಮಾಜಿ ಸೈನಿಕ ಅಭ್ಯರ್ಥಿ ಪ್ರಮಾಣ ಪತ್ರವನ್ನು ಪಡೆದು ದೃಢೀಕರಿಸಿ ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಜನ್ಮ ದಿನಾಂಕದ ದೃಢೀಕರಣಕ್ಕಾಗಿ ದೃಢೀಕರಿಸಿದ ಎಸ್.ಎಸ್.ಎಲ್.ಸಿ. ಅಂಕ ಪಟ್ಟಿ ಅಥವಾ ಶಾಲಾ ವರ್ಗಾವಣೆ ಪತ್ರ ಅಥವಾ ಕ್ಯುಮ್ಯೂಲೇಟೀವ್ ರೆಕಾರ್ಡ್ ದೃಢೀಕರಣ ಪತ್ರ ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅರ್ಜಿ ತಿರಸ್ಕರಿಸಲಾಗುವುದು. ವಿದ್ಯಾರ್ಹತೆಗೆ ಸಂಬಂಧಿಸಿದ ದೃಢೀಕರಿಸಿದ ಅಂಕಪಟ್ಟಿಗಳು ಹಾಗೂ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು ಹಾಗೂ ಎಲ್ಲಾ ವರ್ಷಗಳ/ಸೆಮಿಸ್ಟರ್‍ಗಳ ಅಂಕಗಳನ್ನು ಒಟ್ಟು ಪಡೆದ ಅಂಕಗಳನ್ನು ಮತ್ತು ಶೇಕಡಾವಾರು ಅಂಕಗಳನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸತಕ್ಕದ್ದು.

ಲಿಖಿತ ಪರೀಕ್ಷೆ / ಸಂದರ್ಶನ / ಕೌಶಲ್ಯ ಪರೀಕ್ಷೆಗೆ ಕರೆಯಲ್ಪಟ್ಟ ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಹಾಜರಾಗಬೇಕು.

ಯಾವುದೇ ಪ್ರಯಾಣ ಭತ್ಯೆ / ದಿನ ಭತ್ಯೆಗಳನ್ನು ನೀಡಲಾಗುವುದಿಲ್ಲ.

ಲಿಖಿತ ಪರೀಕ್ಷೆಯ ದಿನಾಂಕ, ವೇಳೆ, ಸ್ಥಳ ಇವುಗಳ ವಿವರವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು. ಕನ್ನಡ ಭಾಷೆ ಪರಿಜ್ಞಾನ ಅಂದರೆ ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು ಕಡ್ಡಾಯವಾಗಿ ಬರಬೇಕು.

ಅರ್ಜಿ ಮೇಲ್ಭಾಗದಲ್ಲಿ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 1 ಭಾವಚಿತ್ರವನ್ನು ಅಂಟಿಸಿ ಅದರ ಮೇಲೆ ಅರ್ಜಿದಾರರು ಸಹಿ ಮಾಡತಕ್ಕದ್ದು. 3 ಭಾವಚಿತ್ರಗಳಿಗೆ ಹಿಂಭಾಗದಲ್ಲಿ ಸಹಿ ಮಾಡಿ ಅರ್ಜಿಯೊಂದಿಗೆ ಪ್ರತ್ಯೇಕ ಕವರ್‍ನಲ್ಲಿ ಹಾಕಿ ಲಗತ್ತಿಸತಕ್ಕದ್ದು.

ಅಭ್ಯರ್ಥಿಗಳು ಈಗಾಗಲೇ ಯಾವುದಾದರೂ ಸಂಸ್ಥೆಯಲ್ಲಿ ಅನುಮತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಅಂತಹ ಸಂಸ್ಥೆಯ ಮುಖ್ಯಸ್ಥರ 12. ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣವನ್ನು ನೀಡದೇ ರದ್ದುಗೊಳಿಸುವ ಅಥವಾ ಮುಂದೂಡುವ ಅಧಿಕಾರವನ್ನು ಬ್ಯಾಂಕು ಹೊಂದಿರುತ್ತದೆ.

ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷ ಅವಧಿಯವರೆಗೆ ಕಡ್ಡಾಯ ಪರೀಕ್ಷಾರ್ಥ ಸೇವೆ ಸಲ್ಲಿಸಬೇಕು. 14. ನೇಮಕಾತಿ ಪ್ರಕ್ರಿಯೆಯು ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳು ಹಾಗೂ ಆದೇಶಕ್ಕೆ ಒಳಪಟ್ಟಿರುತ್ತದೆ.

ಪೂರ್ಣವಾಗಿ ಭರ್ತಿ ಮಾಡದೇ ಇರುವಂತಹ, ದೃಢೀಕೃತ ದಾಖಲಾತಿಗಳೆಲ್ಲವನ್ನೂ ಲಗತ್ತಿಸದೇ ಇರುವಂತಹ, ಅರ್ಜಿ ಶುಲ್ಕದ ಡಿ.ಡಿ. ಅಥವಾ ಪೇ ಆರ್ಡರ್ ಅನ್ನು ಲಗತ್ತಿಸದೇ ಇರುವಂತಹ, ಸಹಿ ಮಾಡದೇ ಇರುವಂತಹ ಹಾಗೂ ನಿಗದಿಪಡಿಸಿದ ದಿನಾಂಕದೊಳಗಾಗಿ ಬ್ಯಾಂಕಿಗೆ ತಲುಪದೆ ಇರುವಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು

ಆಯ್ಕೆಯಾದ ಶೀಘ್ರಲಿಪಿಗಾರರು, ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು/ನಗದು ಗುಮಾಸ್ತರು ಭದ್ರತಾ ಠೇವಣಿ ರೂ.30,000/- ಗಳನ್ನು ಹಾಗೂ ರೂ.1,00,000/-ಗಳ ಇಂಡೆಮ್ನಿಟಿ ಬಾಂಡನ್ನು ಸಲ್ಲಿಸಬೇಕು. ವಾಹನ ಚಾಲಕರು, ಅಟೆಂಡರ್ ಮತ್ತು ಜಲಗಾರರು ಭದ್ರತಾ ಠೇವಣಿ ರೂ.15,000/- ಗಳನ್ನು ಹಾಗೂ ರೂ.50,000/- ಗಳ ಇಂಡೆಮ್ನಿಟಿ ಬಾಂಡನ್ನು ಸಲ್ಲಿಸಬೇಕು.

ಕನಿಷ್ಟ 5 ವರ್ಷಗಳ ಅವಧಿಯವರೆಗೆ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಪತ್ರವನ್ನು ಬ್ಯಾಂಕಿಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಭದ್ರತಾ ಠೇವಣಿಯನ್ನು ಬ್ಯಾಂಕಿಗೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. 17. ನೇಮಕಾತಿಯಿಂದ ಭರ್ತಿ ಮಾಡುವ ಹುದ್ದೆಗಳನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಅಧಿಕಾರವು ಬ್ಯಾಂಕಿನ ಆಡಳಿತ ಮಂಡಳಿಗೆ ಇರುತ್ತದೆ. 18. ಅಭ್ಯರ್ಥಿಗಳು ಗುರುತಿಗಾಗಿ ಪಡಿತರ ಚೀಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಅಥವಾ ವಾಹನ ಪರವಾನಿಗೆ ಇವುಗಳಲ್ಲಿ ಯಾವುದಾದರೊಂದನ್ನು ಸ್ವಯಂ ದೃಢೀಕರಿಸಿ ಲಗತ್ತಿಸತಕ್ಕದ್ದು. 19. ಹೆಚ್ಚಿನ ವಿವರಗಳಿಗೆ ಕಛೇರಿ ವೇಳೆಯಲ್ಲಿ ಬ್ಯಾಂಕಿನ ಪ್ರಧಾನ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ವಿವರ ಪಡೆಯಲು ಭೇಟಿ ನೀಡಬೇಕಾದ ಬ್ಯಾಂಕ್‌ನ ವೆಬ್‌ಸೈಟ್‌ ವಿಳಾಸ

ಡಿಸಿಸಿ ಬ್ಯಾಂಕ್‌ಗಳಲ್ಲಿರುವ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Leave a Comment