Science & Technology Department Gadag Recruitment 2024: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಮಾಹಿತಿಯನ್ನು ಆಧರಿಸಿ ಅರ್ಜಿ ಸಲ್ಲಿಸಬಹುದು. ಒಟ್ಟು ನಾಲ್ಕು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಫೆ.21,2024 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಆಯ್ಕಯಾದ ಅಭ್ಯರ್ಥಿಗಳು ಗದಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 13-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 21-02-2024
ಹುದ್ದೆಗಳ ವಿವರ;
ಮೇಲ್ವಿಚಾರಕರು, ಶಿಕ್ಷಣ ಸಹಾಯಕರು, ತಾಂತ್ರಿಕ ಸಹಾಯಕರು, ತಂತ್ರಜ್ಞರು ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಸಂಖ್ಯೆ: ಮೇಲೆ ತಿಳಿಸಿದ ಹುದ್ದೆಗಳಲ್ಲಿ ಒಂದೊಂದು ಹುದ್ದೆ ಖಾಲಿ ಇದ್ದು, ಒಟ್ಟು ನಾಲ್ಕು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವೇತನ:
ಮೇಲ್ವಿಚಾರಕರು- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.32,000ವೇತನ ಸಿಗಲಿದೆ.
ಶಿಕ್ಷಣ ಸಹಾಯಕರು- ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.28,000 ವೇತನ ಸಿಗಲಿದೆ
ತಾಂತ್ರಿಕ ಸಹಾಯಕರು- ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.16,000 ವೇತನ ದೊರಕಲಿದೆ
ತಂತ್ರಜ್ಞರು- ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾಸಿಕ ರೂ.15,000 ವೇತನ ನಿಗದಿ ಪಡಿಸಲಾಗಿದೆ.
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ಅನುಸಾರವಾಗಿ ಬಿಎಸ್ಸಿ, B.Ed, ಡಿಪ್ಲೋಮಾ, ಬಿಇ, ಐಟಿಐ ತೇರ್ಗಡೆ ಹೊಂದಿರಬೇಕು.
ವಯೋಮಿತಿ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಗದಗ ನಿಯಮಾವಳಿ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮೀಸಲಾತಿ ಅನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗ ಅಭ್ಯರ್ಥಿಗಳ ಆಯ್ಕೆಯನ್ನು ಮೆರಿಟ್ ಲಿಸ್ಟ್ ಮೂಲಕ ಆಯ್ಕೆ ಮಾಡಲಾಗುವುದು.
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛೆ ಪಡುವ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯ ಗದಗ ವೆಬ್‌ಸೈಟ್ gadag.nic.in ನಲ್ಲಿ ಹಾಗೂ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಿದ ಅರ್ಜಿ ನಮೂನೆಯನ್ನು ಪಡೆದು ಅರ್ಜಿಯೊಂದಿಗೆ ಬಯೋಡೇಟಾ, ಶೈಕ್ಷಣಿಕ ಹಾಗೂ ಅನುಭವ ಪ್ರಮಾಣ ಪತ್ರಗಳ ನಕಲು ಪ್ರತಿಗಳನ್ನು ದೃಢೀಕರಣದೊಂದಿಗೆ ದಿನಾಂಕ ಫೆ.21,2024 ರಂದು ಬುಧವಾರ ಸಂಜೆ 5.00 ಗಂಟೆಗೊಳಗಾಗಿ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಠಡಿ ಸಂಖ್ಯೆ 123, 1ನೇ ಮಹಡಿ ಜಿಲ್ಲಾಧಿಕಾರಿಗಳ ಗದಗ ಕಾರ್ಯಾಲಯಕ್ಕೆ ಸಲ್ಲಿಸಬೇಕು.