SBI Recruitment 2024: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಹುಡುಕುವವರಿಗೆ ಸಿಹಿ ಸುದ್ದಿ; ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

Advertisements

SBI Recruitment 2024: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹುದ್ದೆ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಹೌದು, ಎಸ್‌ಬಿಐ (State Bank Of India) ದಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್‌ಬಿಐ ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್, ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಸಲಹೆಗಾರರ ​​ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 04-Mar-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 13-02-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 04-03-2024

ಹುದ್ದೆಗಳ ವಿವರ
ಹುದ್ದೆಗಳು ಮತ್ತು ಸಂಖ್ಯೆ;
ಸರ್ಕಲ್‌ ಡಿಫೆನ್ಸ್‌ ಬ್ಯಾಂಕಿಂಗ್‌ ಅಡೈವಸರ್‌ – 1 ಹುದ್ದೆ
ಅಸಿಸ್ಟೆಂಟ್‌ ಮ್ಯಾನೇಜರ್‌- 23 ಹುದ್ದೆಗಳು
ಡೆಪ್ಯೂಟಿ ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) -51 ಹುದ್ದೆಗಳು
ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) – 3 ಹುದ್ದೆಗಳು
ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ (ಅಪ್ಲಿಕೇಶನ್‌ ಸೆಕ್ಯುರಿಟಿ- 3 ಹುದ್ದೆಗಳು
ಮ್ಯಾನೇಜರ್‌ (ಕ್ರೆಡಿಟ್‌ ಅನಾಲಿಸ್ಟ್‌) – 50 ಹುದ್ದೆಗಳು
ಒಟ್ಟು 131 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಯೋಮಿತಿ: ಸರ್ಕಲ್‌ ಡಿಫೆನ್ಸ್‌ ಬ್ಯಾಂಕಿಂಗ್‌ ಅಡೈವಸರ್‌ – ಈ ಹುದ್ದೆಗೆ 60 ವರ್ಷ ವಯಸ್ಸನ್ನು ನಿಗದಿಪಡಿಸಲಾಗಿದೆ.
ಅಸಿಸ್ಟೆಂಟ್‌ ಮ್ಯಾನೇಜರ್‌- 30 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು.
ಡೆಪ್ಯೂಟಿ ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) – 35 ವರ್ಷದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು
ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) – 38 ವರ್ಷ ವಯೋಮಿತಿಯವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು
ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ (ಅಪ್ಲಿಕೇಶನ್‌ ಸೆಕ್ಯುರಿಟಿ- 42 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು
ಮ್ಯಾನೇಜರ್‌ (ಕ್ರೆಡಿಟ್‌ ಅನಾಲಿಸ್ಟ್‌) – 25 ರಿಂದ 35 ವರ್ಷದೊಳಗಿನವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು

ವಯೋಮಿತಿ ಸಡಿಲಿಕೆಯನ್ನು ನಿಯಮಾನುಸರ ನೀಡಲಾಗುವುದು.

ಅರ್ಜಿ ಶುಲ್ಕ: SC/ST/PwBD ಅಭ್ಯರ್ಥಿಗಳು ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಉಳಿದ ಹಾಗೆ General/EWS/OBC ಅಭ್ಯರ್ಥಿಗಳು ರೂ.750 ನ್ನು ಪಾವತಿ ಮಾಡಬೇಕು. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಮಾತ್ರ ಪಾವತಿ ಮಾಡಬೇಕು.

ವೇತನ: ಸರ್ಕಲ್‌ ಡಿಫೆನ್ಸ್‌ ಬ್ಯಾಂಕಿಂಗ್‌ ಅಡೈವಸರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.2450000/-ವಾರ್ಷಿಕ ವೇತನ ನಿಗದಿಪಡಿಸಲಾಗಿದೆ.
ಅಸಿಸ್ಟೆಂಟ್‌ ಮ್ಯಾನೇಜರ್‌- ಈ ಹುದ್ದೆಗೆ ರೂ.36,000-ರೂ.63840 ಮಾಸಿಕ ವೇತನವಿರಲಿದೆ
ಡೆಪ್ಯೂಟಿ ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) -ಈ ಹುದ್ದೆಗೆ ಆಯ್ಕಯಾದವರಿಗೆ ರೂ.48170-ರೂ.69810 ಮಾಸಿಕ ವೇತನ ನೀಡಲಾಗುವುದು.
ಮ್ಯಾನೇಜರ್‌ (ಸೆಕ್ಯುರಿಟಿ ಅನಾಲಿಸ್ಟ್‌) – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರೂ.63840-ರೂ.78230 ಮಾಸಿಕ ವೇತನ ಸಿಗಲಿದೆ.
ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ (ಅಪ್ಲಿಕೇಶನ್‌ ಸೆಕ್ಯುರಿಟಿ- ಈ ಹುದ್ದೆಗೆ ರೂ.89890-ರೂ.100350 ರೂ. ಮಾಸಿಕ ವೇತನ ದೊರಕಲಿದೆ.
ಮ್ಯಾನೇಜರ್‌ (ಕ್ರೆಡಿಟ್‌ ಅನಾಲಿಸ್ಟ್‌) – ರೂ.63840-ರೂ.78230 ರೂ. ಮಾಸಿಕ ವೇತನ ಇರಲಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳು ಕಿರುಪಟ್ಟಿ, ಸಂವಹನ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?
ಮೊದಲನೆಯದಾಗಿ SBI ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
ಎಸ್‌ಬಿಐ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ದಾಖಲಿಸಿ ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅರ್ಜಿಯಲ್ಲಿ ಕೇಳಿದ್ದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿ, ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ (ಅನ್ವಯಿಸಿದರೆ ಮಾತ್ರ)
ನಂತರ ಕೊನೆಯದಾಗಿ ಸಲ್ಲಿಸು ಬಟನ್‌ ಅನ್ನು ಕ್ಲಿಕ್‌ ಮಾಡಿ.

ಅಭ್ಯರ್ಥಿಗಳು ನೋಟಿಫಿಕೇಶನ್‌ಗಾಗಿ ಇಲ್ಲಿ ನೀಡಲಾಗಿರುವ ಮಾಹಿತಿಯ ಮೇಲೆ ಕ್ಲಿಕ್‌ ಮಾಡಿ;
ಉಪ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು: ಇಲ್ಲಿ ಕ್ಲಿಕ್ ಮಾಡಿ
ಮ್ಯಾನೇಜರ್ (ಕ್ರೆಡಿಟ್ ವಿಶ್ಲೇಷಕ): ಇಲ್ಲಿ ಕ್ಲಿಕ್ ಮಾಡಿ
ಸರ್ಕಲ್ ಡಿಫೆನ್ಸ್ ಬ್ಯಾಂಕಿಂಗ್ ಸಲಹೆಗಾರ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: sbi.co.in