SBI ಕ್ಲರ್ಕ್ ಫಲಿತಾಂಶ ಬಿಡುಗಡೆ

Advertisements

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು, ಎಸ್‌ಬಿಐ ಕ್ಲರ್ಕ್ 2020 ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಎಸ್‌ಬಿಐ ಕ್ಲರ್ಕ್ 2020 ಪರೀಕ್ಷೆ ಬರೆದ ಅಭ್ಯರ್ಥಿಗಳು ಮೊದಲ ಕಾಯ್ದಿರಿಸಿದ ಪಟ್ಟಿಯನ್ನುsbi.co.in ವೆಬ್‌ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಲು ಅವಕಾಶವಿದೆ.

ಎಸ್‌ಬಿಐ ಕ್ಲರ್ಕ್ 2020 ಫಲಿತಾಂಶವನ್ನು ಮುಖ್ಯ ಪರೀಕ್ಷೆಗೆ ಬಿಡುಗಡೆ ಮಾಡಿದೆ. ಈ ಪರೀಕ್ಷೆಯನ್ನು ನವಂಬರ್ 07 ಮತ್ತು ಡಿಸೆಂಬರ್ 31,2020 ರಂದು ಮಾಡಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆ ಮೂಲಕ 8000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಿಶೇಷ ನೇಮಕಾತಿ ಡ್ರೈವ್ ನಲ್ಲಿ 130 ಹುದ್ದೆಗಳನ್ನು. 7870 ಹುದ್ದೆಗಳನ್ನು ರೆಗ್ಯುಲರ್ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.

ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಇತರೆ ದಾಖಲೆಗಳನ್ನು ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕದಂದು ನೀಡಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಎಸ್‌ಬಿಐ ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್ ವಿಭಾಗಕ್ಕೆ ಜೂನಿಯರ್ ಅಸಿಸ್ಟೆಂಟ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

Leave a Comment