ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕ

Advertisements

ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಗ್ರಾಮಿಣ ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ್ ಮಿಶನ್ – ಗ್ರಾಮೀಣ ಜಲಜೀವನ ಯೋಜನೆ ಅನುಷ್ಠಾನಕ್ಕೆ ತಂದು ಅಭಿವೃದ್ಧಿ ಪಡಿಸುತ್ತಿದೆ. ಈ ಯೋಜನೆಯ ಅಭಿವೃದ್ಧಿಯ ಸಲುವಾಗಿ ಇಲಾಖೆಯು ಅಗತ್ಯ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ( RDPR) ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ( ಗ್ರಾಮೀಣ) ಯೋಜನೆಯಡಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.

ಕೇಂದ್ರ ಕಚೇರಿ:
ಹುದ್ದೆ : ಜ್ಯೂನಿಯರ್ ಕನ್ಸಲ್ಟೆಂಟ್ ( ಎಕ್ಸಿಕ್ಯುಟಿವ್ ಇಂಜಿನಿಯರ್ ಲೆವಲ್) – 1 ಹುದ್ದೆ
ಮಾನಿಟರಿಂಗ್ ಆಂಡ್ ಇವ್ಯಾಲ್ಯುಯೇಷನ್ ಎಕ್ಸೊರ್ಟ್ – 1 ಹುದ್ದೆ

ಜಿಲ್ಲಾ ಪಂಚಾಯತ ಕಚೇರಿ: ಜಲ ಜೀವನ್ ಮಿಶನ್ ಮತ್ತು ಸ್ವಚ್ಛ ಭಾರತ ಮಿಶನ್ ( ಗ್ರಾಮೀಣ)
ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಮ್ಯಾನೇಜರ್ – 02 ಹುದ್ದೆ
ಎಂಐಎಸ್ ಕನ್ಸಲ್ಟೆಂಟ್ – 03 ಹುದ್ದೆ
ಡಿಸ್ಟ್ರಿಕ್ಟ್‌ ಸ್ಯಾನಿಟೈಜೇಶನ್ ಮತ್ತು ಹೈಜಿನ್ ಪ್ರೊಮಿಷನ್ ಕನ್ಸಲ್ಟೆಂಟದ (ಎಸ್ ಹೆಚ್ )- 02 ಹುದ್ದೆ
ಸಾಲಿಡ್ ಆಂಡ್ ಲಿಕ್ವಿಡ್ ವೇಸ್ಟ್ ಮ್ಯಾನೆಜ್‌ಮೆಂಟ್‌ ಕನ್ಸಲ್ಟೆಂಟ್ – 03 ಹುದ್ದೆ

ವಯೋಮಿತಿ : ಈ ಪ್ರಕಟಣೆ ಪ್ರಕಟಗೊಂಡ ದಿನದಂದು ಅಭ್ಯರ್ಥಿಗಳ ವಯೋಮಿತಿಯು 45 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-08-2021 ಸಂಜೆ 5.30 ರೊಳಗೆ.

ಅರ್ಜಿ ಸಲ್ಲಿಕೆ ಹೇಗೆ?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಫೀಶಿಯಲ್ ವೆಬ್ ಸೈಟ್ ನಲ್ಲಿ ನೀಡಲಾದ ನಿಗದಿತ ಅರ್ಜಿ ನಮೂನೆಗಳನ್ನು ಹುದ್ದೆಗಳಿಗೆ ಅನುಗುಣವಾಗಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ : ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2 ನೇ ಮಹಡಿ, ಕೆ.ಹೆಚ್.ಬಿ.ಕಟ್ಟಡ, ಕಾವೇರಿ ಭವನ, ಕೆ.ಜಿ.ರಸ್ತೆ, ಬೆಂಗಳೂರು -560009

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment