ರೈಲ್ವೆ ನೇಮಕಾತಿ ಮಂಡಳಿಯ ಮಿನಿಸ್ಟೇರಿಯಲ್ ಮತ್ತು ಐಸೋಲೇಟೆಡ್ ಕೆಟಗರಿ ಹುದ್ದೆಗಳ ಪರೀಕ್ಷಾ ಶುಲ್ಕ ಮರುಪಾವತಿ ಪ್ರಕ್ರಿಯನ್ನು ಆರಂಭಿಸಿದೆ. ಸಿಇಎನ್-03/2019 ಗೆ ಸಂಬಂಧಿಸಿದ ಪರೀಕ್ಷಾ ಶುಲ್ಕ ಮರುಪಾವತಿ ಪ್ರಕ್ರಿಯೆ ಇದು.
ಕಂಪ್ಯೂಟರ್ ಆಧಾರಿತ ಪರೀಕ್ಷೆ ಬರೆದ ಮಿನಿಸ್ಟೇರಿಯಲ್ ಮತ್ತು ಐಸೋಲೇಟೆಡ್ ಕೆಟಗರಿ ಹುದ್ದೆಗಳಿಗೆ ಪರೀಕ್ಷಾ ಶುಲ್ಕ ರಿಫಂಡ್ ಆಗಲಿದೆ. ಅಭ್ಯರ್ಥಿಗಳು ಆರ್‌ಆರ್‌ಬಿ ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಅಪ್‌ಡೇಟ್ ಮಾಡಬಹುದು.
ಲಿಂಕ್ ಕ್ಲಿಕ್ ಮಾಡಿ ಅಭ್ಯರ್ಥಿಗಳು ತಮ್ಮ ರೋಲ್ ನಂಬರ್, ಜನ್ಮ ದಿನಾಂಕ, ಸೆಕ್ಯೂರಿಟಿ ಪಿನ್ ನೀಡಿ ಲಾಗಿ ಆಗಿ ನಂತರ ಬ್ಯಾಂಕ್ ಡೀಟೆಲ್ಸ್‌ಗಳಾದ ಬ್ಯಾಂಕ್ ಖಾತೆ ನಂಬರ್, ಐಎಫ್‌ಎಸ್‌ಸಿ ಕೋಡ್, ಹೆಸರು, ಬ್ರ್ಯಾಂಚ್ ಹೆಸರು ಮತ್ತು ಇತರೆ ಮಾಹಿತಿಗಳನ್ನು ನಿಖರವಾಗಿ ನೀಡಬೇಕು.
ಎಸ್‌ಎಂಎಸ್ ಮತ್ತು ಇ-ಮೇಲ್ ಮೂಲಕ ಒನ್ ಟೈಮ್ ಪಾಸ್‌ವರ್ಡ್ ನ್ನು ಕಳುಹಿಸಲಾಗುತ್ತದೆ. ಅದನ್ನು ನೀಡಬೇಕು. ಒಮ್ಮೆ ಬ್ಯಾಂಕ್ ಖಾತೆ ಮಾಹಿತಿ ನೀಡಿ ಸಬ್‌ಮಿಟ್ ಮಾಡಿದ ನಂತರ, ತಿದ್ದುಪಡಿಗೆ ಅವಕಾಶವಿಲ್ಲ. ಆದ್ದರಿಂದ ಅಭ್ಯರ್ಥಿಗಳು ಜಾಗರೂಕತೆಯಿಂದ ಮಾಹಿತಿ ನೀಡಬೇಕು.
ಆರ್‌ಆರ್‌ಬಿ ಪರೀಕ್ಷಾ ಶುಲ್ಕ ರಿಫಂಡ್ ಗಾಗಿ ಬ್ಯಾಂಕ್ ಡಿಟೇಲ್ಸ್ ಗಾಗಿ ಮಾಹಿತಿ ಸಲ್ಲಿಸಲು ಆರಂಭಿಕ ದಿನಾಂಕ-02-03-2021
ಆರ್‌ಆರ್‌ಬಿ ಪರೀಕ್ಷಾ ಶುಲ್ಕ ರಿಫಂಡ್ ಗಾಗಿ ಬ್ಯಾಂಕ್ ಡಿಟೇಲ್ಸ್ ಗಾಗಿ ಮಾಹಿತಿ ಸಲ್ಲಿಸಲು ಕೊನೆಯ ದಿನಾಂಕ-17-03-2021
ಡೈರೆಕ್ಟ್ ಲಿಂಕ್ ಟು ಅಪ್ಲೈ ಬ್ಯಾಂಕ್ ಡಿಟೈಲ್ಸ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ