ರೈಲ್ ಇಂಡಿಯಾ ಟೆಕ್ನಿಕಲ್ ಆಂಡ್ ಎಕನಾಮಿಕ್ ಸರ್ವಿಸ್ ಲಿಮಿಟೆಡ್ (ಆರ್ ಐಟಿಇಎಸ್) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 07, ಎಪ್ರಿಲ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.
ಕ್ವಿಕ್ ಲುಕ್
ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 16 ಮಾರ್ಚ್ ,2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07, ಎಪ್ರಿಲ್, 2021
ಅರ್ಜಿ ಶುಲ್ಕ: ಆನ್ಲೈನ್ ಮೂಲಕ
ರೈಲ್ ಇಂಡಿಯಾ ಟೆಕ್ನಿಕಲ್ ಆಂಡ್ ಎಕೊನಮಿಕ್ ಸರ್ವಿಸ್ ಲಿಮಿಟೆಡ್ (ಆರ್ ಐಟಿಇಎಸ್ ಲಿಮಿಟೆಡ್) ನಲ್ಲಿ ಜ್ಯೂನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆ : 07
ಹುದ್ದೆ ಸ್ಥಳ : ಆಲ್ ಇಂಡಿಯಾ
ಅರ್ಜಿ ಸಲ್ಲಿಕೆ:
ಆರ್ ಐಟಿಇಎಸ್ ನಲ್ಲಿರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.
ಅರ್ಜಿ ಶುಲ್ಕ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆನ್ಲೈನ್ ಪಾವತಿ ವಿಧಾನದ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು. ಜನರಲ್ ಮ್ಯಾನೇಜರ್ ಹುದ್ದೆಗಳಿಗೆ:
ಜನರಲ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 600/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇಡ್ಬ್ಯುಎಸ್/ಪಿಡ್ಬ್ಯುಬಿಡಿ ಅಭ್ಯರ್ಥಿಗಳಿಗೆ ರೂ.300/-.
ಅಸಿಸ್ಟೆಂಟ್ ಹುದ್ದೆಗಳಿಗೆ: ಜನರಲ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 300/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇಡ್ಬ್ಯುಎಸ್/ಪಿಡ್ಬ್ಯುಬಿಡಿ ಅಭ್ಯರ್ಥಿಗಳಿಗೆ ರೂ.100/-.
ಹುದ್ದೆಗಳ ವಿವರ: ಜ್ಯೂನಿಯರ್ ಮ್ಯಾನೇಜರ್ ( ಹೆಚ್ ಆರ್ / ಪರ್ಸನಲ್)-3
ಜ್ಯೂನಿಯರ್ ಮ್ಯಾನೇಜರ್ (ಮಾರ್ಕೆಟಿಂಗ್)-1
ಅಸಿಸ್ಟೆಂಟ್ ( ಮಾರ್ಕೆಟಿಂಗ್/ಪ್ರೊಟೊಕಾಲ್/ ವೆಲ್ಫಾರ್) -3
ವಿದ್ಯಾರ್ಹತೆ : ಜ್ಯೂನಿಯರ್ ಮ್ಯಾನೇಜರ್ ( ಹೆಚ್ ಆರ್ / ಪರ್ಸನಲ್) ಹಾಗೂ
ಜ್ಯೂನಿಯರ್ ಮ್ಯಾನೇಜರ್ (ಮಾರ್ಕೆಟಿಂಗ್) ಹುದ್ದೆಗೆ ಅಭ್ಯರ್ಥಿಗಳು ಎಂಬಿಎ, ಪಿಜಿ ಡಿಪ್ಲೋಮಾ, ಗ್ರಾಜ್ಯುಯೇಟ್, ಪೋಸ್ಟ್ ಗ್ರಾಜ್ಯುಯೇಟ್ ಹೊಂದಿರಬೇಕು.
ಅಸಿಸ್ಟೆಂಟ್ ( ಮಾರ್ಕೆಟಿಂಗ್/ಪ್ರೊಟೊಕಾಲ್/ ವೆಲ್ಫಾರ್) ಹುದ್ದೆಗೆ ಗ್ರಾಜ್ಯುಯೇಟ್ ಆಗಿರಬೇಕು.
ವೇತನ : ಅಸಿಸ್ಟೆಂಟ್ ( ಮಾರ್ಕೆಟಿಂಗ್/ಪ್ರೊಟೊಕಾಲ್/ ವೆಲ್ಫಾರ್) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 13,600/- ತಿಂಗಳ ವೇತನ ನಿಗದಿಪಡಿಸಲಾಗಿದೆ.
ಜ್ಯೂನಿಯರ್ ಮ್ಯಾನೇಜರ್ ( ಹೆಚ್ ಆರ್ / ಪರ್ಸನಲ್) ಹಾಗೂ
ಜ್ಯೂನಿಯರ್ ಮ್ಯಾನೇಜರ್ (ಮಾರ್ಕೆಟಿಂಗ್) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 40,000/- ರಿಂದ 1,40,000/- ರವರೆಗೆ ತಿಂಗಳ ವೇತನ ವಿರುತ್ತದೆ.
ವಯೋಮಿತಿ: ಜ್ಯೂನಿಯರ್ ಮ್ಯಾನೇಜರ್ (ಹೆಚ್ ಆರ್/ಪರ್ಸನಲ್) ಹಾಗೂ ಜ್ಯೂನಿಯರ್ ಮ್ಯಾನೇಜರ್ (ಮಾರ್ಕೆಟಿಂಗ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 32 ವಯೋಮಿತಿ ಹೊಂದಿರಬೇಕು.
ಅಸಿಸ್ಟೆಂಟ್ (ಮಾರ್ಕೆಟಿಂಗ್/ಪ್ರೊಟೊಕಾಲ್/ವೆಲ್ಫಾರ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 40 ವಯೋಮಿತಿ ಹೊಂದಿರಬೇಕು.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.