ರಾಜೀವ್ ಗಾಂಧಿ ವಸತಿ ನಿಗಮವು ಗುತ್ತಿಗೆ ಆಧಾರದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆ : ಹಿರಿಯ ಪ್ರೋಗ್ರಾಮರ್ – 4 ಮತ್ತು ರೆಸಿಡೆನ್ಸಿಯಲ್ ಹಾರ್ಡ್ ವೇರ್ ಇಂಜಿನಿಯರ್-1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.
11 ತಿಂಗಳ ಅವಧಿಗೆ ತಾತ್ಕಾಲಿಕ ಮತ್ತು ಪೂರ್ಣ ಗುತ್ತಿಗೆ ಆಧಾರದಲ್ಲಿ ಈ ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಹತೆ : ಹಿರಿಯ ಪ್ರೋಗ್ರಾಮರ್ ಹುದ್ದೆಗೆ ಅಥವಾ ಬಿಟೆಕ್ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು.
ರೆಸಿಡೆನ್ಶಿಯಲ್ ಹಾರ್ಡ್ ವೇರ್ ಇಂಜಿನಿಯರ್ ಹುದ್ದೆಗೆ ಬಿ.ಟೆಕ್ ಅಥವಾ ಬ್ಯಾಚುಲರ್ ಇನ್ ಇಂಜಿನಿಯರಿಂಗ್ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.
ಅರ್ಹ ಅಭ್ಯರ್ಥಿಗಳು 19-06-2021 ರ ಸಂಜೆ 5.00 ಗಂಟೆಯೊಳಗೆ ಇ- ಮೇಲ್ [email protected] ಅಥವಾ naukari.com ಅಥವಾ Karnataka careers ಗೆ ಅರ್ಜಿಯನ್ನು ಕಳುಹಿಸಬಹುದು.
ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಹಾಜರಾಗಲು ಇ- ಮೇಲ್ ಮೂಲಕ ತಿಳಿಸಲಾಗುವುದು.