RERA : ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

Advertisements

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ಪ್ರವರ್ತಕರು/ ಅಭಿವೃದ್ಧಿದಾರರು ಯೋಜನೆಗಳನ್ನು ನೋಂದಣಿ ಮಾಡಿಸದೇ ನಿವೇಶನ/ ಫ್ಲ್ಯಾಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಪ್ರಾಧಿಕಾರದಲ್ಲಿ ನೋಂದಾಯಿಸದಿರುವ ಯೋಜನೆಗಳ ಸ್ಥಳ ಪರಿಶೀಲನೆಗಾಗಿ ಪರಿವೀಕ್ಷಣಾ ತಂಡಗಳ ರಚಿಸುವ ಸಲುವಾಗಿ, ಈ ಕೆಳಕಂಡ ನಿವೃತ್ತ ಅಧಿಕಾರಿಗಳನ್ನೊಂಡ ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.

ಸಮಿತಿಯ ಸದಸ್ಯರು : 1. ಸಹಾಯಕ ಕಾರ್ಯಪಾಲಕ ಅಭಿಯಂತರರು/ ಸಹಾಯಕ ಅಭಿಯಂತರರು ( ನಿವೃತ್ತ ), 2. ತಹಶಿಲ್ದಾರ್ ( ನಿವೃತ್ತ) 3. ಸಿವಿಲ್ ಪೊಲೀಸ್ ನಿರೀಕ್ಷಕರು ( ನಿವೃತ್ತ)

ಸಹಾಯಕ ಕಾರ್ಯಪಾಲಕ‌ ಅಭಿಯಂತರರು / ಸಹಾಯಕ ಅಭಿಯಂತರರು ( ನಿವೃತ್ತ) ವಿದ್ಯಾರ್ಹತೆ : ಬಿಇ( ಸಿವಿಲ್), ಅರ್ಹತೆ : ರಾಜ್ಯ ಸರಕಾರದ ಇಲಾಖೆಗಳಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು / ಸಹಾಯಕ ಇಂಜಿನಿಯರ್ ಆಗಿ ಕನಿಷ್ಠ 05 ವರ್ಷಗಳ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

ತಹಶಿಲ್ದಾರ್ : ಈ ಹುದ್ದೆಯಲ್ಲಿ ರಾಜ್ಯ ಸರಕಾರದಲ್ಲಿ ಕನಿಷ್ಠ 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

ಸಿವಿಲ್ ಪೊಲೀಸ್ ನಿರೀಕ್ಷಕರು : ರಾಜ್ಯ ಸರಕಾರಲ್ಲಿ ಕನಿಷ್ಠ 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

ಸದರಿ ಗುತ್ತಿಗೆ ನೇಮಕಾತಿಯು ತಾತ್ಕಾಲಿಕವಾಗಿದ್ದು, ಗುತ್ತಿಗೆ ಅವಧಿಯನ್ನು ಮುಂದುವರಿಸುವ ಅಥವಾ ರದ್ದುಪಡಿಸುವ ಅಧಿಕಾರವನ್ನು ಪ್ರಾಧಿಕಾರವು ಹೊಂದಿರುತ್ತದೆ.

ಗೌರವಧನ ಮತ್ತು ಇತರೆ ಸೌಲಭ್ಯಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗುವುದು. ಅರ್ಹ ನಿವೃತ್ತ ಅಧಿಕಾರಿಗಳು ಆನ್ಲೈನ್ ಮುಖಾಂತರ ಅಥವಾ ನೋಂದಾಯಿತ ಅಂಚೆ ಮೂಲಕ ದಿನಾಂಕ : 10.08.2021 ರ ಸಂಜೆ 5.00 ಗಂಟೆಯೊಳಗೆ ಮೇಲ್ಕಂಡ ಕಚೇರಿಗೆ ಅರ್ಜಿ ಸಲ್ಲಿಸತಕ್ಕದ್ದು.

ಇ- ಮೇಲ್ : [email protected]

ಅರ್ಜಿ ಸಲ್ಲಿಸುವ ನಿವೃತ್ತ ಅಧಿಕಾರಿಗಳು ಲಗತ್ತಿಸಲಾದ ಅರ್ಜಿ ನಮೂನೆಯಲ್ಲಿ ಸಲ್ಲಿಸತಕ್ಕದ್ದು. ದಾಖಲಾತಿಗಳನ್ನು ಸ್ವಯಂ ದೃಢೀಕರಿಸಬೇಕು ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಲಕೋಟೆಯ ಮೇಲೆ ” ಗುತ್ತಿಗೆ ಆಧಾರದ ಮೇಲೆ ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಅರ್ಜಿ ” ಎಂದು ನಮೂದಿಸುವುದು.

Leave a Comment