ಪ್ರಾದೇಶಿಕ ಶಿಕ್ಷಣ ಸಂಸ್ಥೆ ಮೈಸೂರಿನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

Advertisements

ದಿ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಮೈಸೂರು( ಪ್ರಾದೇಶಿಕ ಶಿಕ್ಷಣ ಸಂಸ್ಥೆ ) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು 29-03-2021 ಮತ್ತು 30-03-2021 ನಡೆಯುವ ಸಂದರ್ಶನದಲ್ಲಿ ಭಾಗಿಯಾಗಬಹುದು. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

ಹುದ್ದೆ: ಗಣಿತ ಸಹಾಯಕ ಪ್ರಾಧ್ಯಾಪಕ -02
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಪೆಡಾಗೊಜಿ ಆಫ್ ಸೋಷಿಯಲ್ ಸೈನ್ಸ್-01
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಗೈಡೆನ್ಸ್ ಸೈಕಾಲಜಿ/ಕೌನ್ಸಿಲಿಂಗ್-01
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸ್ಪೆಷಲ್ ಎಜುಕೇಶನ್-01
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಕೆಮಿಸ್ಟ್ರಿ-01

ಲ್ಯಾಬ್ ಅಸಿಸ್ಟೆಂಟ್– ಬಾಟನಿ (ಸಸ್ಯ ಶಾಸ್ತ್ರ)-01 ಹುದ್ದೆ
ಫಿಸಿಕ್ಸ್ (ಭೌತಶಾಸ್ತ್ರ)-01
ಸೈಕಾಲಜಿ (ಸೈಕಾಲಜಿ)-01
ಕೆಮಿಸ್ಟ್ರಿ(ರಸಾಯನಶಾಸ್ತ್ರ)-01

ವಿದ್ಯಾರ್ಹತೆ: ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಎಂ.ಇಡಿ, ಮಾಸ್ಟರ್ಸ್ ಡಿಗ್ರಿ, ಬಿಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.


ವಯೋಮಿತಿ : ಅಸಿಸ್ಟೆಂಟ್ ಪ್ರೊಫೆಸರ್ ಇನ್ ಮ್ಯಾತ್ಸ್ ,
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಪೆಡಾಗೊಜಿ ಆಫ್ಸೋಷಿಯಲ್ ಸೈನ್ಸ್,
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಾಲಜಿ/ಕೌನ್ಸಲಿಂಗ್, ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸ್ಪೆಷಲ್ ಎಜುಕೇಶನ್ ಮತ್ತು
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಕೆಮಿಸ್ಟ್ರಿ ಹುದ್ದೆಗೆ ಯುಜಿಸಿ ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರಬೇಕು.
ಲ್ಯಾಬ್ ಅಸಿಸ್ಟೆಂಟ್- ಬಾಟನಿ, ಫಿಸಿಕ್ಸ್ , ಸೈಕಾಲಜಿ , ಕೆಮಿಸ್ಟ್ರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 30 ವರ್ಷ ಮೀರಿರಬಾರದು.

ಪರಿಶಿಷ್ಟ ಜಾತಿ/ಪಂಗಡ,ಒಬಿಸಿ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವೇತನ : ಗಣಿತ ಸಹಾಯಕ ಪ್ರಾಧ್ಯಾಪಕ, ಅಸಿಸ್ಟೆಂಟ್ ಪ್ರೊಫೆಸರ್ ಇನ್ ಪೆಡಾಗೊಜಿ ಆಫ್ ಸೋಷಿಯಲ್ ಸೈನ್ಸ್,
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಾಲಜಿ/ಕೌನ್ಸಲಿಂಗ್, ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸ್ಪೆಷಲ್ ಎಜುಕೇಶನ್ ಮತ್ತು
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಕೆಮಿಸ್ಟ್ರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.45,000/- ವೇತನ ನಿಗದಿಪಡಿಸಲಾಗಿದೆ.
ಲ್ಯಾಬ್ ಅಸಿಸ್ಟೆಂಟ್- ಬಾಟನಿ, ಫಿಸಿಕ್ಸ್ , ಸೈಕಾಲಜಿ , ಕೆಮಿಸ್ಟ್ರಿ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ರೂ.17,000/- ವೇತನವಿರುತ್ತದೆ.

ಸಂದರ್ಶನ ದಿನಾಂಕ : ಗಣಿತ ಸಹಾಯಕ ಪ್ರಾಧ್ಯಾಪಕ-ದಿನಾಂಕ 29-03-2021 ಸಮಯ 10.00am
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಪೆಡಾಗೊಜಿ ಆಫ್ ಸೋಷಿಯಲ್ ಸೈನ್ಸ್,-ದಿನಾಂಕ 29-03-2021 ಸಮಯ 11.30 am
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸೈಕಾಲಜಿ ದಿನಾಂಕ 29-03-2021 ಸಮಯ 02.30pm
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಸ್ಪೆಷಲ್ ಎಜುಕೇಶನ್ ದಿನಾಂಕ 29-03-2021 ಸಮಯ 04.00pm
ಅಸಿಸ್ಟೆಂಟ್ ಪ್ರೊಫೆಸರ್ ಇನ್ ಕೆಮಿಸ್ಟ್ರಿ ಹುದ್ದೆಗೆ ದಿನಾಂಕ 30-03-2021 ಸಮಯ 10.00am
ಲ್ಯಾಬ್ ಅಸಿಸ್ಟೆಂಟ್-ಬಾಟನಿದಿನಾಂಕ 30-03-2021 ಸಮಯ 12.00 ಮಧ್ಯಾಹ್ನ,
ಫಿಸಿಕ್ಸ್ ದಿನಾಂಕ 30-03-2021 ಸಮಯ 02.30pm
ಸೈಕಾಲಜಿ ದಿನಾಂಕ 30-03-2021 ಸಮಯ 03.30pm
ಕೆಮಿಸ್ಟ್ರಿ ದಿನಾಂಕ 30-03-2021 ಸಮಯ 04.30pm

ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.riemysore.ac.in ಗೆ ಭೇಟಿ ನೀಡಬಹುದು

Leave a Comment