BMS ಎಜುಕೇಶನಲ್ ಟ್ರಸ್ಟ್ : ಹುದ್ದೆಗಳ ನೇಮಕಾತಿ

Advertisements

ಬಿಎಂಎಸ್ ಎಜುಕೇಶನಲ್ ಟ್ರಸ್ಟ್ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಶುಲ್ಕ, ವಿದ್ಯಾರ್ಹತೆ, ಹುದ್ದೆ ವಿವರಗಳು ಈ ಕೆಳಗೆ ನೀಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, 28 ಎಪ್ರಿಲ್ 2021 ಕೊನೆಯ ದಿನಾಂಕವಾಗಿದೆ.

ಹುದ್ದೆ : ಆಫೀಸ್ ಅಸಿಸ್ಟೆಂಟ್ ಟೈಪಿಸ್ಟ್‌, ಅಸಿಸ್ಟೆಂಟ್ ಇನ್ಸ್ಟ್ರಕ್ಟರ್, ಫಾರ್‌ಮ್ಯಾನ್, ವಿಡಿಯೋ ಎಡಿಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-04-2021

ಆಫೀಸ್ ಅಸಿಸ್ಟೆಂಟ್ ಟೈಪಿಸ್ಟ್ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ ಡಿಗ್ರಿಯನ್ನು ಪಡೆದಿರಬೇಕು. ಸೀನಿಯರ್ ಗ್ರೇಡ್ ಟೈಪಿಸ್ಟ್ ನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪಾಸಾಗಿರಬೇಕು. ಎಂಎಸ್ ಆಫೀಸ್ ತಿಳಿದಿರಬೇಕು.

ಅಸಿಸ್ಟೆಂಟ್ ಇನ್ಸ್ಟ್ರಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ ಅಥವಾ ಡಿಪ್ಲೋಮಾ ವನ್ನು ಸಿಎಸ್ಇ/ಐಎಸ್‌ಇ ನ್ನು ತೇರ್ಗಡೆ ಹೊಂದಿರಬೇಕು. ಹಾಗೂ ಸದರಿ ಹುದ್ದೆಯಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.
ಫಾರ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಬಿಇ/ಡಿಪ್ಲೋಮಾ ಇನ್‌ ಸಿವಿಲ್ ಇಂಜಿನಿಯರಿಂಗ್ ಮತ್ತು ಮೂರು ವರ್ಷಗಳ ಫಾರ್ಮ್ಯಾನ್‌/ಇನ್ಸ್ಟ್ರಕ್ಟರ್ ಹುದ್ದೆಯಲ್ಲಿ ಪರಿಣಿತಿ ಹೊಂದಿರಬೇಕು.
ವಿಡಿಯೋ ಎಡಿಟರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಎಸ್ಸಿ ಕಂಪ್ಯೂಟರ್/ಬಿಸಿಎ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು ವಿಡಿಯೋ ಎಡಿಟಿಂಗ್ ಮತ್ತು ಕ್ಯಾಮೆರ ಮ್ಯಾನ್ ಹುದ್ದೆಯಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.

ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಅಪ್ಲಿಕೇಶನ್‌ ನ್ನು ಈ ಲಿಂಕ್ ಕ್ಲಿಕ್ ಮಾಡಿ ಓದಿ ಅರ್ಜಿ ಸಲ್ಲಿಸಬಹುದು.

Leave a Comment