RDPR ಕರ್ನಾಟಕ : ಹುದ್ದೆಗಳ ನೇಮಕ

Advertisements

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಸನ‌ ವಿಭಾಗ, ಹಾಸನ ವ್ಯಾಪ್ತಿಯ ಜಿಲ್ಲಾ ಪ್ರಯೋಗಾಲಯಕ್ಕೆ ಕೆಳಕಂಡ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಯ ವಿವರ : ಹಾಸನ ಜಿಲ್ಲಾ ಪ್ರಯೋಗಾಲಯಕ್ಕೆ ನೀರಿನ ಮಾದರಿಗಳ ಸಂಗ್ರಹಣಾಕೋಶದ ಉಸ್ತುವಾರಿ ಸಿಬ್ಬಂದಿ ( sample cell incharge)

ಹುದ್ದೆ ಸಂಖ್ಯೆ : 01

ವಿದ್ಯಾರ್ಹತೆ : ಅಭ್ಯರ್ಥಿಗಳು ಶೇ.60 ಅಂಕಗಳೊಂದಿಗೆ ವಿಜ್ಞಾನದ ವಿಷಯದಲ್ಲಿ ಬಿ.ಎಸ್ಸಿ ( ಕೆಮಿಸ್ಟ್ರಿ ಕಂಪಲ್ಸರಿ ಸಬ್ಜೆಕ್ಟ್ ಆಗಿರಬೇಕು) ಪದವಿಯನ್ನು ಪಡೆದಿರಬೇಕು.

ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು 45 ವರ್ಷ ಮೀರಿರಬಾರದು.

ಅನುಭವ : ನೀರಿನ ಗುಣಮಟ್ಟ ವಿಶ್ಲೇಷಣೆಯ ಅನುಭವದೊಂದಿಗೆ ಕಂಪ್ಯೂಟರ್ ನಿರ್ವಹಣೆ ಅನುಭವ ಹೊಂದಿರಬೇಕು.

ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.17,000/- ಮಾಸಿಕ ವೇತನವಿರುತ್ತದೆ.

ಅರ್ಹ ಅಭ್ಯರ್ಥಿಗಳು ಎಲ್ಲಾ ಅಂಕಪಟ್ಟಿ, ಅನುಭವ ಪತ್ರಗಳ ನಕಲುಗಳೊಂದಿಗೆ ದಿನಾಂಕ 14-06-2021 ರ ಸಂಜೆ 5.30 ರ ಒಳಗೆ ಕಾರ್ಯಪಾಲಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಸನ‌ ವಿಭಾಗ ಜಿಲ್ಲಾ ಪ್ರಯೋಗಾಲಯ ಜಿಲ್ಲಾ ಪಂಚಾಯತ್ ಕಟ್ಟಡ ಹಾಸನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Leave a Comment