ಕರ್ನಾಟಕ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಅಗತ್ಯ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 05-03-2021
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-03-2021 (5.30pm)
ಹುದ್ದೆಗಳ ವಿವರ: ಆರ್ ಡಿಪಿಆರ್ ಇಲಾಖೆಯಲ್ಲಿ ಅನಾಲಿಸ್ಟ್, ಕಲೆಕ್ಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ ಸಂಖ್ಯೆ : 03
ವೇತನ : ಅನಾಲಿಸ್ಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.25,000/-,ಜ್ಯೂನಿಯರ್ ಅನಾಲಿಸ್ಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.15,000/-, ವಾಟರ್ ಸ್ಯಾಂಪಲ್ ಕಲೆಕ್ಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.13,000/- ವೇತನ ನಿಗದಿಯಾಗಿರುತ್ತದೆ.
ವಿದ್ಯಾರ್ಹತೆ : ಅನಾಲಿಸ್ಟ್ -1- ಬಿ.ಎಸ್ಸಿ, ಎಂ.ಎಸ್ಸಿ ಪಾಸಾಗಿರಬೇಕು.
ಜ್ಯೂನಿಯರ್ ಅನಾಲಿಸ್ಟ್ ಹುದ್ದೆಗೆ ಬಿ.ಎಸ್ಸಿ ಪಾಸಾಗಿರಬೇಕು.
ವಾಟರ್ ಸ್ಯಾಂಪಲ್ ಕಲೆಕ್ಟರ್ ಹುದ್ದೆಗೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು.
ವಯೋಮಿತಿ : ಅನಾಲಿಸ್ಟ್ , ಜ್ಯೂನಿಯರ್ ಅನಾಲಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 45, ಹಾಗೆಯೇ ವಾಟರ್ ಸ್ಯಾಂಪಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 35 ಆಗಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅಪ್ ಡೇ
ಟೆಡ್ ರೆಸ್ಯೂಮ್ ಜೊತೆಗೆ, ನಿಗದಿತ ನಮೂನೆಯನ್ನು ವೆಬ್‌ಸೈಟ್ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ದಿನಾಂಕ 22-03-2021(5.30pm) ರೊಳಗೆ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬಹುದು.
Executive Engineer, Rural Drinking Water and Sanitation Department, Zilla Panchayat Building, N.R Circle, Hassan, Karnataka
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.