RDPR Jobs 2024: ಆರ್‌ಡಿಪಿಆರ್‌ ಇಲಾಖೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಓಂಬುಡ್ಸ್‌ಪರ್ಸನ್‌ಗಳ ನೇಮಕಾತಿ, ಇಂದೇ ಅರ್ಜಿ ಹಾಕಿ

Advertisements

RDPR Ombuds Persons Recruitment 2024: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಓಂಬುಡ್ಸ್‌ ಪರ್ಸನ್ಸ್‌ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; ಮಾರ್ಚ್‌ 06,2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಎಪ್ರಿಲ್‌ 06,2024

ಹುದ್ದೆಯ ಕುರಿತ ಮಾಹಿತಿ ಇಲ್ಲಿದೆ.

ಹುದ್ದೆ; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಸಂಬಂಧದಲ್ಲಿ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಓಬುಡ್ಸ್‌ಪರ್ಸನ್ಸ್‌ರವರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಓಬುಡ್ಸ್‌ಪರ್ಸನ್‌ ಹುದ್ದೆ ಖಾಲಿಯಿರುವ/ಖಾಲಿಯಾಗಲಿರುವ ಜಿಲ್ಲೆಗಳು: ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ, ಧಾರವಾಡ, ಹಾವೇರಿ, ರಾಮನಗರ, ರಾಯಚೂರು ಮತ್ತು ವಿಜಯಪುರ

ಅರ್ಹತೆ: ಸಾರ್ವಜನಿಕ ಆಡಳಿತ/ಕಾನೂನು/ಶೈಕ್ಷಣಿಕ ಕ್ಷೇತ್ರ, ಸಮಾಜ ಸೇವೆ,ಮ್ಯಾನೇಜ್‌ಮೆಂಟ್‌ ಇವುಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ 10 ವರ್ಷಗಳ ಸೇವಾನುಭವ, ಸಾರ್ವಜನಿಕರೊಂದಿಗೆ ಅಥವಾ ಸಮುದಾಯದ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವವು ಕಡ್ಡಾಯವಾಗಿ ಹೊಂದಿರಬೇಕು.

ವಯೋಮಿತಿ: ಓಂಬುಡ್ಸ್‌ಪರ್ಸನ್‌ ಹುದ್ದೆಗೆ ಅರ್ಜಿ ಸಲ್ಲಿಸುವವರ ಗರಿಷ್ಠ ವಯೋಮಿತಿಯು 66 ವರ್ಷ ಮೀರಿರಬಾರದು.

ವೇತನ: ಮಾಸಿಕ ರೂ.10000 ಗೌರವಧನ ಹಾಗೂ ಪ್ರತಿ ಸಿಟ್ಟಿಗ್‌ಗೆ ರೂ.2250 ರಂತೆ ಗರಿಷ್ಠ ರೂ.45000 ಮಿರಿಗೊಳಪಟ್ಟ ಸಿಟ್ಟಿಂಗ್‌ ಫೀಜು ನಿಗದಿಪಡಿಸಲಾಗಿದೆ.

ಜಿಲ್ಲಾ ಮಟ್ಟದಲ್ಲಿ ಓಂಬುಡ್ಸ್‌ಪರ್ಸನ್‌ಗಳಾಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್‌ www.rdpr.karnataka.gov.in ನಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಡೌನ್‌ಲೋಡ್‌ ಮಾಡಿ, ತಮ್ಮ ಕಾರ್ಯನಿರ್ವಹಣೆ ಸೇವಾನುಭವದ ವಿವರಗಳನ್ನೊಳಗೊಂಡ ದಾಖಲೆ ಹಾಗೂ ಇತರೆ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 06.04.2024 ರೊಳಗೆ ತಲುಪುವಂತೆ ಖುದ್ದಾಗಿ/ಅಂಚೆ ಮೂಲಕ ಈ ಕೆಳಗೆ ನೀಡಲಾದ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ವಿಳಾಸ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, 5ನೇ ಮಹಡಿ, ಪ್ಲಾಟ್‌ ನಂ.1243, ಕೆ.ಎಸ್‌.ಐ.ಐ.ಡಿ.ಸಿ ಕಟ್ಟಡ, ಐ.ಟಿ.ಪಾರ್ಕ್‌, ಸೌತ್‌ ಬ್ಲಾಕ್‌, ರಾಜಾಜಿ ನಗರ ಇಂಡಸ್ಟ್ರಿಯಲ್‌ ಎಸ್ಟೇಟ್‌, ಬೆಂಗಳೂರು-560010 ಇವರಿಗೆ ಸಲ್ಲಿಸುವುದು.
ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22342163 ಅನ್ನು ಸಂಪರ್ಕಿಸುವುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ