RDPR : ವಿವಿಧ ಹುದ್ದೆ: ಮೇ 01 ಕಡೇ ದಿನಾಂಕ

Advertisements

ಕರ್ನಾಟಕ ರಾಜ್ಯಪಾಲರ ಪರವಾಗಿ 2021-22 ನೇ ಸಾಲಿನಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಬಾಗಲಕೋಟೆ ಹಾಗೂ ಇದರ ಅಡಿಯಲ್ಲಿ ಬರುವ ಉಪ-ವಿಭಾಗ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ : ಹಿರಿಯ/ಕಿರಿಯ ಮಾದರಿ ವಿಶ್ಲೇಷಗಾರರು ಮತ್ತು ಮಾದರಿ ಸಂಗ್ರಹಗಾರರ ಹುದ್ದೆಗಳಿಗೆ ಷರತ್ತುನ್ವಯ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-04-2021ರಿಂದ 01-05-2021 ಸಾಯಂಕಾಲ 04.00 ಗಂಟೆಯವರೆಗೆ ( ಪ್ರಕಟಣೆಯನ್ನು ಬದಲಾವಣೆ/ಮುಂದೂಡುವ/ರದ್ದುಪಡಿಸುವ ಹಕ್ಕನ್ನು ಕಾಯ್ದಿರಿಸಲಾಗಿದೆ)

ನೈರ್ಮಲ್ಯ ಯೋಜನೆಯಲ್ಲಿ ಕೆಲಸ ನಿರ್ವಹಿಸಿದ ಅನುಭವವುಳ್ಳವರಿಗೆ ಮಾತ್ರ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಬಾಗಲಕೋಟೆಯವರಿಂದ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹಿರಿಯ ವಿಶ್ಲೇಷಣಾಗಾರರು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 30,000/-, ಕಿರಿಯ ವಿಶ್ಲೇಷಣೆಗಾರರು ಹುದ್ದೆಗೆ ಮಾಸಿಕ ರೂ.15,000/-, ನೀರಿನ ಮಾದರಿ ಸಂಗ್ರಹಗಾರರು ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.13,000+2000/- ವೇತನ ವಿರುತ್ತದೆ.

ವಯೋಮಿತಿ : ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ಮೀರಿರಬಾರದು.
ವಯೋಮಿತಿ ದೃಢೀಕರಿಸಲು ಎಸ್ಎಸ್‌ಎಲ್‌ಸಿ ಅಂಕಪಟ್ಟಿ ಹಾಜರುಪಡಿಸುವುದು.

ಆಯ್ಕೆಯಾದ ಅಭ್ಯರ್ಥಿಗಳು ಈ ಜಿಲ್ಲೆಯಲ್ಲಿ ಪ್ರಯೋಗಾಲಯದ ಯಾವುದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ಮೇಲಾಧಿಕಾರಿಗಳೂ ಸೂಚಿಸಿದ್ದಲ್ಲಿ ನಿರ್ವಹಿಸಲು ಬದ್ಧನಾಗಿರಬೇಕು.

ಹುದ್ದೆಗಳು ಗುತ್ತಿಗೆಯ ತಾತ್ಕಾಲಿಕ ಖಾಲಿ ಇರುವ ಅವಧಿಗಾಗಿ ಮಾತ್ರ ಇರುತ್ತದೆ.

ಸ್ವ ವಿವರಗಳೊಂದಿಗೆ ಅರ್ಜಿ ಸಲ್ಲಿಸುವ ವಿಳಾಸ : ಕಾರ್ಯನಿರ್ವಾಹಕ ಇಂಜಿನಿಯರವರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ , ಹಳೇ ತಹಶೀಲ್ದಾರ ಕಚೇರಿ ಕಟ್ಟಡ, ಬಾಗಲಕೋಟೆ

Leave a Comment