ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉದ್ಯೋಗವಕಾಶ

Advertisements

ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯದ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಫಿಸಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಡಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ವೇತನ ರೂ. 1,10,000/- ವೇತನವಿರುತ್ತದೆ. ಈ ಹುದ್ದೆಗೆ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿರಬೇಕು. ಕೆಎಂಸಿಯ ನೋಂದಣಿಯನ್ನು ಹೊಂದಿರತಕ್ಕದ್ದು. ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ ಡಿಗ್ರಿ ಸರ್ಟಿಫಿಕೇಟ್ ನ್ನು ಪಡೆದಿರಬೇಕು.

ತಜ್ಞ ವೈದ್ಯರು ಹುದ್ದೆಗೆ ಎಂಡಿ/ಡಿ.ಎನ್.ಬಿ ವಿದ್ಯಾರ್ಹತೆ ಹಾಗೂ ಈ ಹುದ್ದೆಗೆ ರೂ. 1,10,000/- ವೇತನವಿರುತ್ತದೆ.

ವೈದ್ಯಾಧಿಕಾರಿಗಳು ಈ ಹುದ್ದೆಗೆ ‌ಎಂಬಿಬಿಎಸ್ ಮಾಡಿರಬೇಕು. ಈ‌ ಹುದ್ದೆಗೆ ರೂ.35,000/- ಮಾಸಿಕ ವೇತನ ಇರುತ್ತದೆ.

ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು ಹುದ್ದೆಗೆ ಎಂಬಿಬಿಎಸ್/ಬಿಎಎಂಎಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಶ್ರುಶ್ರೂಷ ಅಧಿಕಾರಿಗಳು(ಎನ್ ಸಿಡಿ) ಈ ಹುದ್ದೆಗೆ ಡಿಪ್ಲೋಮಾ ಇನ್ ನರ್ಸಿಂಗ್/ಬಿಎಸ್ಸಿ ‌ನರ್ಸಿಂಗ್ ಮಾಡಿರಬೇಕು. ಈ‌ ಹುದ್ದೆಗೆ ರೂ. 14,000/-ಮಾಸಿಕ ಸಂಭಾವನೆ ಇರುತ್ತದೆ‌.

ಶ್ರುಶ್ರೂಷ ಅಧಿಕಾರಿಗಳು(ತಾಯಿ ಆರೋಗ್ಯ ಮತ್ತು ಮಕ್ಕಳ ಆರೋಗ್ಯ) ಈ ಹುದ್ದೆಗೆ ಡಿಪ್ಲೋಮಾ ಇನ್ ನರ್ಸಿಂಗ್/ಬಿಎಸ್ಸಿ ‌ನರ್ಸಿಂಗ್ ಮಾಡಿರಬೇಕು. ಈ‌ ಹುದ್ದೆಗೆ ರೂ. 11,500/-ಮಾಸಿಕ ಸಂಭಾವನೆ ಇರುತ್ತದೆ‌.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗೆ ರೂ.10,000/- ವೇತನವಿರುತ್ತದೆ.

ಕಿರಿಯ‌ ಪುರುಷ ಆರೋಗ್ಯ ‌ಸಹಾಯಕರು ಹುದ್ದೆಗೆ ಮಾಸಿಕ ರೂ.10,000/- ವೇತನವಿರುತ್ತದೆ.

ನೇತ್ರ ಸಹಾಯಕರು ಈ ಹುದ್ದೆಗೆ ಎರಡು ವರ್ಷದ ಡಿಪ್ಲೋಮಾ ಇನ್ ಒಪ್ಟೋಮೆಟ್ರಿ ಅಥವಾ ನೇತ್ರ‌ಸಹಾಯಕರು/ಬಿ ಫಾರ್ಮ/ ಡಿ ಫಾರ್ಮ ವಿದ್ಯಾರ್ಹತೆ ಹೊಂದಿದ್ದು, ರೂ. 12,000/- ಮಾಸಿಕ ವೇತನವಿರುತ್ತದೆ.

ಸೈಕಿಯಾಟ್ರಿಕ್ ಸ್ಟಾಫ್ ನರ್ಸ್ ಡಿಪ್ಲೋಮಾ ಇನ್ ನರ್ಸಿಂಗ್ / ಬಿಎಸ್ಸಿ ನರ್ಸಿಂಗ್ ಅರ್ಹತೆಯನ್ನು ಹೊಂದಿರಬೇಕು. ರೂ.14,000 ವೇತನವಿರುತ್ತದೆ.

ಕಮ್ಯುನಿಟಿ ನರ್ಸ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಹೊಂದಿದ್ದು, ರೂ. 14,000 ವೇತನವಿರುತ್ತದೆ.

ಡಿಸ್ಟ್ರಿಕ್ಟ್‌ ಕನ್ಸಲ್ಟೆಂಟ್ ಅಶ್ಯುರೆನ್ಸ್ ಹುದ್ದೆಗೆ ಎಂಬಿಬಿಎಸ್/ಬಿಡಿಎಸ್/ನರ್ಸಿಂಗ್ ಗ್ರಾಜ್ಯುಯೇಟ್/ಪಿಜಿ ಮಾಸ್ಟರ್ಸ್ ಇನ್ ಹೆಲ್ತ್ ಅಡ್ಮಿನಿಸ್ಟ್ರೇಶನ್/ಹೆಲ್ತ್ ಮ್ಯಾನೇಜ್ಮೆಂಟ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ರೂ.45,000/- ಮಾಸಿಕ ವೇತನವಿರುತ್ತದೆ.

ಇನ್ಸ್ಟಕ್ಟರ್ ಫಾರ್ ಇಂಪಾರ್ಡ್ ಚಿಲ್ಡ್ರನ್ ಹುದ್ದೆಗೆ ಡಿಪ್ಲೋಮಾ ಇನ್ ಟ್ರೈನಿಂಗ್ ಯಂಗ್ ಡೆಫ್ ಮತ್ತು ಹಿಯರಿಂಗ್ ಹ್ಯಾಂಡಿಕ್ಯಾಪ್ಡ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗೆ ರೂ. 15,000/- ವೇತನವಿರುತ್ತದೆ.

ಸದರಿ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಎಲ್ಲಾ ಮೂಲ ದಾಖಲಾತಿಗಳೊಂದಿಗೆ ದಿನಾಂಕ 15/05/2021 ರ ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಸಂದರ್ಶನದ ಸ್ಥಳದಲ್ಲಿ ತಮ್ಮ‌ ಹೆಸರುಗಳನ್ನು ನೊಂದಾಯಿಸಿಕೊಂಡ‌ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉದ್ಯೋಗವಕಾಶ 2
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉದ್ಯೋಗವಕಾಶ 3

Leave a Comment