ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ( ಆರ್ ಆರ್ ಐ) (ರಾಮನ್ ಸಂಶೋಧನಾ ಸಂಸ್ಥೆ) ನಲ್ಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 31 ಮಾರ್ಚ್ 2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 16 ಫೆಬ್ರವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮಾರ್ಚ್ 2021
ಪ್ರಾಜೆಕ್ಟ್ ಇಂಜಿನಿಯರ್ -02 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ : ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ ಅಥವಾ ಬಿ.ಟೆಕ್, ಎಂ.ಇ, ಎಂ.ಟೆಕ್ ವಿದ್ಯಾರ್ಹತೆಯನ್ನು ಅಂಗೀಕೃತ ಸಂಸ್ಥೆ /ಬೋರ್ಡ್ ನಿಂದ ಪಡೆದುಕೊಂಡಿರಬೇಕು.
ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 30 ವಯಸ್ಸು ಆಗಿರಬೇಕು.(31.03.2021)
ಅರ್ಜಿ ಸಲ್ಲಿಕೆ
ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.
ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳನ್ನು [email protected] ಹಾಗೂ ಇನ್ನೊಂದು ಕಾಪಿ ಯನ್ನು [email protected] ಈಮೈಲ್ ಐಡಿಗೆ 31 ಮಾರ್ಚ್ 2021 ರೊಳಗೆ ಲಗತ್ತಿಸಬೇಕು.
ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ