RRB Recruitment 2024: ಐಟಿಐ ಪಾಸಾದವರಿಗೆ ಸುವರ್ಣಾವಕಾಶ, ರೈಲ್ವೆ ಇಲಾಖೆಯಲ್ಲಿ 1010 ವಿವಿಧ ಹುದ್ದೆಗಳು; ಈ ಕೂಡಲೇ ಅರ್ಜಿ ಸಲ್ಲಿಸಿ

Advertisements

RRB Recruitment 2024: ರೈಲ್ವೆ ಇಲಾಖೆಯ ಚೆನ್ನೈ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 1010 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಕ್ಟ್‌ ಅಪ್ರೆಂಟಿಸ್‌ ಹುದ್ದೆಗೆ ಭರ್ತಿ ಮಾಡಲಾಗುತ್ತಿದೆ. ತರಬೇತುದಾರರ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಚ್ಛೆ ಪಡುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಿ. ಈ ಹುದ್ದೆಗೆ ಅರ್ಜಿ ಹಾಕಿ ಒಂದು ವರ್ಷಗಳ ಕಾಲ ವೇತನದೊಂದಿಗೆ ತರಬೇತಿ ಕೂಡಾ ನೀವು ಪಡೆಯಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 22-05-2024 (9.30 ಪ್ರಾರಂಭವಾಗಿದೆ)
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-06-2024 (5.30 ಗಂಟೆಯವರೆಗೆ)

ಹುದ್ದೆಯ ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ;
ಸಂಸ್ಥೆಯ ಹೆಸರು: ರೈಲ್ವೆ ಇಲಾಖೆಯ ಚೆನ್ನೈ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ 1010 ಹುದ್ದೆಗಳು ಖಾಲಿ ಇದ್ದು, ತರಬೇತುದಾರರ (ಆಕ್ಟ್‌ ಅಪ್ರೆಂಟಿಸ್‌) ನೇಮಕಾತಿ ನಡೆಯಲಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ಸ್ಟೈಫಂಡ್‌ ರೂ.7000-9000 ವರೆಗೆ ನೀಡಲಾಗುವುದು.

ಹುದ್ದೆಗಳ ಹೆಸರು ಮತ್ತು ಸಂಖ್ಯೆ ವಿವರ ಇಲ್ಲಿದೆ;
ಕಾರ್ಪೆಂಟರ್ : 90 ಹುದ್ದೆಗಳು
ಇಲೆಕ್ಟ್ರೀಷಿಯನ್ : 200 ಹುದ್ದೆಗಳು
ಫಿಟ್ಟರ್ : 260 ಹುದ್ದೆಗಳು
ಮಷಿನಿಸ್ಟ್‌ : 90 ಹುದ್ದೆಗಳು
ಪೇಂಟರ್ : 90 ಹುದ್ದೆಗಳು
ವೆಲ್ಡರ್ : 260 ಹುದ್ದೆಗಳು
MLT-Radiology : 5 ಹುದ್ದೆಗಳು
MLT-Pathology : 5 ಹುದ್ದೆಗಳು
PASAA : 10 ಹುದ್ದೆಗಳು
ಒಟ್ಟು 1010 ಹುದ್ದೆಗಳು ಖಾಲಿ ಇದೆ.

ಶೈಕ್ಷಣಿಕ ಅರ್ಹತೆ: ಕಾರ್ಪೆಂಟರ್‌, ಇಲೆಕ್ಟ್ರೀಷಿಯನ್‌, ಫಿಟ್ಟರ್‌, ಮಷನಿಸ್ಟ್‌, ಪೇಂಟರ್‌, ವೆಲ್ಡರ್‌, ರೇಡಿಯೋಲಜಿ, ಪೆಥಾಲಜಿ, PASAA ಟ್ರೇಡ್‌ಗಳಲ್ಲಿ ಐಟಿಐ ಪಾಸ್‌ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹಾಗೆನೇ ಇಂಜಿನಿಯರಿಂಗ್‌ ಪದವಿ, ಡಿಪ್ಲೋಮಾ ಪಾಸ್‌ ಮಾಡಿದವರು ಅರ್ಜಿ ಸಲ್ಲಿಸುವಂತಿಲ್ಲ.

ಅರ್ಜಿ ಶುಲ್ಕ: ಆಕ್ಟ್‌ ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.100 ನ್ನು ಪಾವತಿ ಮಾಡಬೇಕು.

ವಯೋಮಿತಿ: ಅಭ್ಯರ್ಥಿಗಳು ವಯೋಮಿತಿಯು ದಿ.21-06-2024 ಕ್ಕೆ 15 ವರ್ಷ ಆಗಿರಬೇಕು. ಹಾಗೂ 24 ಗರಿಷ್ಠ ವಯೋಮಿತಿಯನ್ನು ಮೀರಬಾರದು.

ಆಯ್ಕೆ ಪ್ರಕ್ರಿಯೆ: ಐಟಿಐ ಅಂಕಗಳನ್ನು ಪರಿಗಣಿಸಿ, ಮೆರಿಟ್‌ ಮೂಲಕ ಶಾರ್ಟ್‌ ಲಿಸ್ಟ್‌ ಮಾಡಿ, ಮೆಡಿಕಲ್‌ ಟೆಸ್ಟ್‌, ದಾಖಲೆ ಪರಿಶೀಲನೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ