Advertisements
ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಯ ಸಹಾಯಕ ಸರಕಾರಿ ಅಭಿಯೋಜಕರು ಕಮ್ ಸಹಾಯಕ ಸರಕಾರಿ ವಕೀಲರ ಹುದ್ದೆಗಳಿಗೆ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ಪ್ರಕಟಿಸಿದೆ.
ಪ್ರಾಥಮಿಕ ಪರೀಕ್ಷೆಯನ್ನು ನಡೆಸಲು ಈ ಹಿಂದೆ ಎರಡು ಬಾರಿ ದಿನಾಂಕಗಳನ್ನು ನಿಗದಿಪಡಿಸಲಾಗಿತ್ತು. (28-03-2020, 21-06-2020)
ಕೊರೊನಾ ಕಾರಣದಿಂದ ಪರೀಕ್ಷೆಯ ದಿನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.
ಇಲಾಖೆಯ ಆದೇಶದಂತೆ ಪ್ರಾಥಮಿಕ ಪರೀಕ್ಷೆ ಯನ್ನು 28-03-2021 ಬೆಂಗಳೂರು, ಕಲಬುರ್ಗಿ,ಮೈಸೂರು ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಪೇಪರ್-1 ಪರೀಕ್ಷೆ 100 ಅಂಕಗಳಿಗೆ- ಸಮಯ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ.
ಪೇಪರ್-2 ಪರೀಕ್ಷೆ 100 ಅಂಕಗಳಿಗೆ- ಸಮಯ ಮಧ್ಯಾಹ್ನ 2ಗಂಟೆಯಿಂದ ಮಧ್ಯಾಹ್ನ 5 ಗಂಟೆಯವರೆಗೆ.