PSCB : ಭರ್ಜರಿ ಉದ್ಯೋಗವಕಾಶ

Advertisements

ಪಂಜಾಬ್ ಸ್ಟೇಟ್ ಕೋಅಪರೇಟಿವ್ ಬ್ಯಾಂಕ್ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಮೇ, 20, 2021 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ, ಅರ್ಜಿ ವಿವರ, ಹುದ್ದೆ ಇತ್ಯಾದಿಗಳನ್ನು ಕೆಳಗೆ ನೀಡಲಾಗಿದೆ.ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-04-2021
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-05-2021

ಹುದ್ದೆ: ಸೀನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು ಡಿಗ್ರಿ/ಪಿಜಿಎಂಎಫ್ ಸಿ/ಎಂಬಿಎ/ಸಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು. ಒಟ್ಟು 40 ಹುದ್ದೆಗಳಿವೆ.
ಮ್ಯಾನೇಜರ್ ಹುದ್ದೆಗೆ ಯಾವುದೇ ಪದವಿ/ ಎಂಎಫ್ ಸಿ/ ಎಂಬಿಎ/ಸಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು. ಒಟ್ಟು ಹುದ್ದೆಗಳ ಸಂಖ್ಯೆ 60.
ಮಾಹಿತಿ ತಂತ್ರಜ್ಞಾನ ಅಧಿಕಾರಿ ಹುದ್ದೆಗೆ ಬಿಇ/ಬಿಟೆಕ್/ಬಿಎಸ್ಸಿ(ಇಂಜಿನಿಯರಿಂಗ್) ಎಂಸಿಎ/ಎಂ.ಎಸ್ಸಿ (ಐಟಿ) ವಿದ್ಯಾರ್ಹತೆ ಹೊಂದಿರಬೇಕು. ಒಟ್ಟು ಹುದ್ದೆ 07.
ಕ್ಲರ್ಕ್ ಕಮ್ ಡಿಇಒ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೋಮಾ (ಕಂಪ್ಯೂಟರ್)/ಯಾವುದೇ ಡಿಗ್ರಿ/ ಪಿಜಿ ವಿದ್ಯಾರ್ಹತೆ ಯನ್ನು ಹೊಂದಿರಬೇಕು. ಒಟ್ಟು ಹುದ್ದೆ 739.
ಸ್ಟೆನೋ ಟೈಪಿಸ್ಟ್ ಈ ಹುದ್ದೆಗೆ ಡಿಪ್ಲೋಮಾ (ಕಂಪ್ಯೂಟರ್) ಯಾವುದೇ ಪದವಿ/ಪಿಜಿ/ಟೈಪಿಂಗ್ ಜ್ಞಾನ ಹೊಂದಿರಬೇಕು. ಒಟ್ಟು ಹುದ್ದೆ 10.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 37 ವರ್ಷ ಮೀರಿರಬಾರದು.

ಅರ್ಜಿಯನ್ನು ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರವೇ ಸಲ್ಲಿಸಬೇಕು.

ಅರ್ಜಿ ಶುಲ್ಕ : ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ ರೂ. 700/- ಹಾಗೂ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳು ರೂ. 1400/- ನ್ನು ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment