ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 03-04-2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20-03-2021
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-04-2021
ಹುದ್ದೆಗಳ ವಿವರ : ಎಜಿಎಂ(ಕಾನೂನು ), ಚೀಫ್ ಇನ್‌ಫೋರ್ಮೇಶನ್ ಸೆಕ್ಯುರಿಟಿ ಆಫೀಸರ್(ಸಿಐಎಸ್‌ಒ), ರಿಸ್ಕ್ ಮ್ಯಾನೇಜರ್(ಎಸ್‌ಎಂಜಿಎಸ್ 4), ರಿಸ್ಕ್ ಮ್ಯಾನೇಜರ್ ( ಎಂಎಂಜಿಎಸ್ ೩), ಐಟಿ ಮ್ಯಾನೇಜರ್( ಎಂಎಂಜಿಎಸ್ 3),ಐಟಿ ಮ್ಯಾನೇಜರ್ ( ಎಂಎಂಜಿಎಸ್ 2) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ : ಚೀಫ್ ಇನ್‌ಫೊರ್ಮೇಶನ್ ಸೆಕ್ಯುರಿಟಿ ಆಫೀಸರ್ (ಸಿಐಎಸ್‌ಓ) ಹುದ್ದೆಗೆ ಇಂಜಿನಿಯರಿಂಗ್ ಗ್ರಾಜ್ಯುಯೇಟ್ (ಕಂಪ್ಯೂಟರ್ ಸೈನ್ಸ್/ಐಟಿ) ಅಥವಾ ಇಂಜಿನಿಯರಿಂಗ್ ಗ್ರಾಜ್ಯುಯೇಷನ್ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಮಾಡಿರಬೇಕು.
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಕಾನೂನು) ಹುದ್ದೆಗೆ ಕಾನೂನು ಪದವಿ ಹೊಂದಿರಬೇಕು.
ರಿಸ್ಕ್ ಮ್ಯಾನೇಜರ್ (ಎಸ್‌ಎಂಜಿಎಸ್-iv) ಮತ್ತು ರಿಸ್ಕ್ ಮ್ಯಾನೇಜರ್ ( ಎಂಎಂಜಿಎಸ್ III) ಹುದ್ದೆಗೆ ಸಿಜಿಪಿಎ ನಲ್ಲಿ 60% ಅಂಕಗಳನ್ನು ಪಡೆದಿರಬೇಕು. ಹಾಗೂ ಪೋಸ್ಟ್ ಗ್ರಾಜ್ಯುಯೇಟ್ ಮ್ಯಾಥಮ್ಯಾಟಿಕ್ಸ್/ಸ್ಟೆಟಿಸ್ಟಿಕ್ಸ್/ರಿಸ್ಕ್ ಮ್ಯಾನೇಜ್‌ಮೆಂಟ್ ಅಥವಾ ಎಂಬಿಎ ಯನ್ನು ಫೈನಾನ್ಸ್/ಬ್ಯಾಂಕಿಂಗ್/ರಿಸ್ಕ್ ಮ್ಯಾನೇಜ್ ಮೆಂಟ್ ಮಾಡಿರಬೇಕು.
ಐಟಿ ಆಫೀಸರ್ ಹುದ್ದೆಗೆ ಬಿಇ/ಬಿ.ಟೆಕ್/ಎಂ.ಇ/ಎಂ.ಟೆಕ್ ಇನ್ ಕಂಪ್ಯೂಟರ್ ಸೈನ್ಸ/ ಕಂಪ್ಯೂಟರ್ ಟೆಕ್ನಾಲಜಿ/ ಕಂಪ್ಯೂಟರ್ ಇಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್ ಮತ್ತು ಟೆಕ್ನಾಲಜಿ/ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್/ಇನ್ಪೋರ್‌ಮೇಶನ್ ಟೆಕ್ನಾಲಜಿ ಮಾಡಿರಬೇಕು.
ವಯೋಮಿತಿ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳಿಗೆ ೨೫ ರಿಂದ ೫೫ ವರ್ಷ ಮೀರಿರಬಾರದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ