ದೂರದರ್ಶನ ನ್ಯೂಸ್ ವಾಹಿನಿ (ಸರಕಾರಿ ಸ್ವಾಮ್ಯದ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪ್ರಸಾರ ಭಾರತಿ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು ಹುದ್ದೆ : ಸರಕಾರಿ ಸ್ವಾಮ್ಯದ ಡಿಡಿ ಇಂಡಿಯಾ(ಇಂಗ್ಲೀಷ್ ನ್ಯೂಸ್ ಚಾನೆಲ್) ದಲ್ಲಿ ಇರುವ 15 ಹುದ್ದೆಗಳಿಗೆ ಪ್ರಸಾರ ಭಾರತಿ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-04-2021 ಸಂಜೆ 05.೦೦ ಗಂಟೆ
ಹುದ್ದೆಗಳ ವಿವರ : ಅಸೈನ್ಮೆಂಟ್ ಕೋಆರ್ಡಿನೇಟರ್ – 04, ಬ್ರಾಡ್ಕಾಸ್ಟ್ ಎಕ್ಸಿಕ್ಯೂಟಿವ್ ಗ್ರೇಡ್ 1 – 05, ಕಾಪಿ ರೈಟರ್ ಗ್ರಾಡ್ 2- 04 , ಗೆಸ್ಟ್ ಕೋ ಆರ್ಡಿನೇಟರ್ ಗ್ರೇಡ್ 1 – 1, ಗೆಸ್ಟ್ ಕೋ ಆರ್ಡಿನೇಟರ್ ಗ್ರೇಡ್ 2-1, ಹುದ್ದೆಗಳಿಗೆ ಸರಕಾರಿ ಸ್ವಾಮ್ಯದ ದೂರದರ್ಶನವು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.
ಅಸೈನ್ಮೆಂಟ್ ಕೋಆರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಸಾಮೂಹಿಕ ಸಂವಹನ ಅಥವಾ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಕನಿಷ್ಠ 5 ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಗರಿಷ್ಠ 40 ವರ್ಷ ವಯೋಮಿತಿಯನ್ನು ಅಭ್ಯರ್ಥಿಯು ಮೀರಿರಬಾರದು.
ಕಾಪಿ ರೈಟರ್ ಗ್ರೇಡ್ 2 ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಸಾಮೂಹಿಕ ಸಂವಹನ/ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಅಥವಾ ಸಂಬಂಧಿತ ವಿಷಯದಲ್ಲಿ ಪದವಿಯನ್ನು ಅಭ್ಯರ್ಥಿಯು ಪಡೆದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವವಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಅಭ್ಯರ್ಥಿಯ ವಯೋಮಿತಿಯು 4೦ ವರ್ಷಕ್ಕಿಂತ ಹೆಚ್ಚಿರಬಾರದು.
ಬ್ರಾಡ್ಕಾಸ್ಟ್ ಎಕ್ಸಿಕ್ಯೂಟಿವ್ ಗ್ರೇಡ್ 1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ರೇಡಿಯೋ/ ಟೆಲಿವಿಷನ್ ಪ್ರೊಡಕ್ಷನ್‌ನಲ್ಲಿ ಪದವಿ ಅಥವಾ ವೃತ್ತಿಪರ ಡಿಪ್ಲೋಮಾ ಮಾಡಿರಬೇಕು. ಇಂಗ್ಲೀಷ್‌ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕನಿಷ್ಠ 3 ವರ್ಷ ಅನುಭವವಿರಬೇಕು. ವಯೋಮಿತಿ 4೦ ಮೀರಿರಬಾರದು.
ಗೆಸ್ಟ್ ಕೋಆರ್ಡಿನೇಟರ್ ಗ್ರೇಡ್ 1 ಹುದ್ದೆಗೆ ಬಿಎ ಪದವೀಧರರು ಅರ್ಜಿ ಸಲ್ಲಿಸಬಹುದು. ಪ್ರತಿಷ್ಠಿತ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಾರ್ವಜನಿಕ ಸಂಪರ್ಕ/ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಆಗಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಪಡೆದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಠ 7 ವರ್ಷ ಅನುಭವ ಹೊಂದಿರಬೇಕು. ವಯೋಮಿತಿಯು 45 ವರ್ಷ ಮೀರಿರಬಾರದು.
ಗೆಸ್ಟ್ ಕೋಆರ್ಡಿನೇಟರ್ ಗ್ರೇಡ್ 2 ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದ ಬಿಎ ಪದವೀಧರರಾಗಿರಬೇಕು. ಪ್ರತಿಷ್ಠಿತ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಾರ್ವಜನಿಕ ಸಂಪರ್ಕ/ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದಿರಬೇಕು. ಕನಿಷ್ಠ 3 ವರ್ಷ ಅನುಭವವರಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು. ವಯೋಮಿತಿ 45 ವರ್ಷ ಮೀರಿರಬಾರದು.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಉಪನಿರ್ದೇಶಕರು (ಎಚ್‌ಆರ್), ಕೊಠಡಿ ಸಂಖ್ಯೆ 413, 4 ನೇ ಮಹಡಿ, ದೂರದರ್ಶನ ಭವನ, ಟವರ್ ಬಿ ಕೋಪರ್ನಿಕಸ್ ಮಾರ್ಗ, ನವದೆಹಲಿ -110001 ಇಲ್ಲಿಗೆ ಪೋಸ್ಟ್/ಕೊರಿಯರ್/ಡ್ರಾಪ್ ಬಾಕ್ಸ್ ಮೂಲಕ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ