ಕೇಂದ್ರ ಸಚಿವಾಲಯದ ಇಂಧನ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಉದ್ಯಮವಾದ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ
ಭಾರತ ಸರಕಾರದ ವಿದ್ಯುತ್ ಸಚಿವಾಲಯದ ಅಧೀನದಲ್ಲಿರುವ ಪವರ್ ಗ್ರಿಡ್, ಪಿಎಸ್ ಯು ಅಡಿ ದಕ್ಷಿಣ ಪ್ರದೇಶದ ಪ್ರಸರಣ ವ್ಯವಸ್ಥೆ -11 ಯಲ್ಲಿ ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿಯ ಯುಟಿ ರಾಜ್ಯಗಳನ್ನು ಒಳಗೊಂಡಂತೆ ಕೆಳಗೆ ಸೂಚಿಸಿರುವ ವಿವರಗಳ ಪ್ರಕಾರ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿಷ್ಠಾವಂತ ಮತ್ತು ಪ್ರತಿಭಾವಂತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ : ಡಿಪ್ಲೋಮಾ ಟ್ರೈನಿ ( ಎಲೆಕ್ಟ್ರಿಕಲ್)
ಒಟ್ಟು ಹುದ್ದೆಗಳ ಸಂಖ್ಯೆ : 35
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 09-06-2021(ಬುಧವಾರ)
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-06-2021 ( ಮಂಗಳವಾರ)
ದಕ್ಷಿಣ ಪ್ರದೇಶದ ಪ್ರಸರಣ ಸಂಖ್ಯೆ 11 ಗಳ ಅಗತ್ಯಕ್ಕೆ ಅನುಗುಣವಾಗಿ ಡಿಪ್ಲೋಮಾ ಟ್ರೈನಿಗಳ ನೇಮಕಾತಿಯನ್ನು ಸ್ಥಳೀಯ ಆಧಾರದ ಮೇಲೆ ನಡೆಸಲಾಗುತ್ತದೆ. ಒಂದು ವೇಳೆ ಎಸ್ ಆರ್ ಟಿಎಸ್ -11 ಗೆ ಸೇರುವ ಅಭ್ಯರ್ಥಿಗಳಿಗೆ ಅಂತರ- ಪ್ರದೇಶ ವರ್ಗಾವಣೆ ವಿನಂತಿಗೆ ಅರ್ಹರಾಗಿರುವುದಿಲ್ಲ.
ಆಸಕ್ತ ಅಭ್ಯರ್ಥಿಗಳು ನೋಂದಣಿ ಸಂಖ್ಯೆಯ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.powergrid.in/S RBI I recruitment ಭೇಟಿ ನೀಡಿ ಅಥವಾ career section of POWERGRID website ( www.powergrid.in) ಗೆ ಭೇಟಿ ನೀಡಬಹುದು.