Post Office Jobs: ಅಂಚೆ ಇಲಾಖೆಯಲ್ಲಿ ಡ್ರೈವರ್‌ ಹುದ್ದೆಗಳ ನೇಮಕಾತಿ, ಮಾಸಿಕ ರೂ.63,200 ವೇತನ

Advertisements

Post Office Driver Recruitment 2024: ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 27 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ಟಾಫ್‌ ಕಾರ್‌ ಡ್ರೈವರ್‌ ಹುದ್ದೆಗೆ ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕದೆಲ್ಲೆಡೆ ಈ ಹುದ್ದೆಯ ಪೋಸ್ಟಿಂಗ್‌ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಎಪ್ರಿಲ್‌ 08,2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ, 14, 2024

ಹುದ್ದೆಯ ವಿವರ ಇಲ್ಲಿದೆ;
ಹುದ್ದೆಯ ಹೆಸರು: ಸ್ಟಾಫ್‌ ಕಾರ್‌ ಡ್ರೈವರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 27 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಚಿಕ್ಕೋಡಿ, ಕಲಬುರಗಿ, ಹಾವೇರಿ, ಕಾರವಾರ, ಎಂಎಂಎಸ್‌ ಬೆಂಗಳೂರು, ಮಂಡ್ಯ, ಎಂಎಂಎಸ್‌ ಮೈಸೂರು, ಪುತ್ತೂರು, ಶಿವಮೊಗ್ಗ, ಉಡುಪಿ ಹಾಗೂ ಕೋಲಾರ ಡಿವಿಷನ್‌ಗಳಲ್ಲಿ ಪೋಸ್ಟಿಂಗ್‌ ಆಗಲಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆ ಖಾಲಿ ಇದೆ?
ಚಿಕ್ಕೋಡಿ – 1
ಕಲಬುರಗಿ – 1
ಹಾವೇರಿ – 1
ಕಾರವಾರ – 1
ಎಂಎಂಎಸ್‌ ಬೆಂಗಳೂರು – 15
ಮಂಡ್ಯ – 1
ಎಂಎಂಎಸ್‌ ಮೈಸೂರು – 3
ಪುತ್ತೂರು – 1
ಶಿವಮೊಗ್ಗ – 1
ಉಡುಪಿ – 1
ಕೋಲಾರ – 1

ವಿದ್ಯಾರ್ಹತೆ: 10 ನೇ ತರಗತಿಯಲ್ಲಿ ಪಾಸಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಲಘು ಹಾಗೂ ಭಾರೀ ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಮೂರು ವರ್ಷಗಳ ಕಾರ್ಯಾನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಮೋಟಾರ್‌ ಮೆಕ್ಯಾನಿಸಮ್‌ ಜ್ಞಾನ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: 18 ಕನಿಷ್ಠ ವರ್ಷ ಪೂರೈಸಿರಬೇಕು. ಹಾಗೆನೇ ಅಭ್ಯರ್ಥಿಗಳು 27 ವರ್ಷ ಮೀರಿರಬಾರದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವೇತನ: ಮಾಸಿಕ ರೂ.19,900-ರೂ.63,200 ಶ್ರೇಣಿಯಲ್ಲಿ ಮೇಲ್ಕಂಡ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುವುದು.

ಆಯ್ಕೆ ವಿಧಾನ: ಚಾಲನಾ ಪರೀಕ್ಷೆ ಹಾಗೂ ಮೋಟಾರ್‌ ಮೆಕ್ಯಾನಿಸಮ್‌ ಜ್ಞಾನಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಮೇಲ್ಕಂಡ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?
ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗೆ ನೀಡಲಾದ ಕಚೇರಿಯ ವಿಳಾಸಕ್ಕೆ ಅಭ್ಯರ್ಥಿಗಳು ಕಳುಹಿಸಬೇಕು.
ಮ್ಯಾನೇಜರ್‌, ಮೇಲ್‌ ಮೋಟಾರ್‌ ಸರ್ವಿಸ್‌, ಬೆಂಗಳೂರು- 560001

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ