Blog

  • 43 ಮಹಿಳಾ ಶುಶ್ರೂಷಕಿಯರ ಹುದ್ದೆ

    43 ಮಹಿಳಾ ಶುಶ್ರೂಷಕಿಯರ ಹುದ್ದೆ

    ಹಾವೇರಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಮಹಿಳಾ ಶುಶ್ರೂಷಕಿಯರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಹಾವೇರಿ ಹಾಗೂ ಮಾನ್ಯ ಅಧ್ಯಕ್ಷರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಹಾವೇರಿ ಇವರ ಅನುಮೋದನೆ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಶ್ರುಶೂಷಕಿಯರು.

    ಒಟ್ಟು ಹುದ್ದೆ : 43

    ವಿದ್ಯಾರ್ಹತೆ : ಮಾನ್ಯತೆ ಪಡೆದ ಸಂಸ್ಥೆಯಿಂದ ನರ್ಸಿಂಗ್ ಪದವಿ ಪಡೆದಿರಬೇಕು. ಡಿಪ್ಲೋಮಾ ನರ್ಸಿಂಗ್ ಕೋರ್ಸ್ ಹೊಂದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲು ನೊಂದಣಿ ಕಡ್ಡಾಯವಾಗಿದೆ.

    ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು.

    ದಿನಾಂಕ 25-05-2021 ರ ಸಂಜೆ 5-00 ಘಂಟೆಯ ಒಳಗಾಗಿ ಈ ಕಚೇರಿಯ ಇ-ಮೇಲ್ ಐಡಿ [email protected] ಗೆ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳು ( SSLC & diploma in nursing) ಹಾ ಇತರೆ ದಾಖಲೆಗಳನ್ನು ಪಿಡಿಎಫ್ ಮೂಲಕ ಸಲ್ಲಿಸುವುದು.

  • ಮೈಸೂರು ವೈದ್ಯಕೀಯ ಕಾಲೇಜು : ನೇರ ಸಂದರ್ಶನಕ್ಕೆ ಆಹ್ವಾನ

    ಮೈಸೂರು ವೈದ್ಯಕೀಯ ಕಾಲೇಜು : ನೇರ ಸಂದರ್ಶನಕ್ಕೆ ಆಹ್ವಾನ

    ಮಾನ್ಯ ಜಿಲ್ಲಾಧಿಕಾರಿಗಳ ಅನುಮೋದನೆ ಮೇರೆಗೆ ಮೈಸೂರು ಜಿಲ್ಲೆಯಲ್ಲಿ ಕೋವಿಡ್ -19 ಸಾಂಕ್ರಾಮಿಕ ‌ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಸೋಂಕಿತ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್ ಆಸ್ಪತ್ರೆ ಮತ್ತು ಪಿ‌ಕೆಟಿಬಿ ಹಾಗೂ ಸಿಡಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಸದರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ವೈದ್ಯರ ಅಗತ್ಯತೆ ಇರುವುದರಿಂದ ತಾತ್ಕಾಲಿಕವಾಗಿ 03 ರಿಂದ 06 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ (ಯಾವುದು ಮೊದಲೋ ಅಲ್ಲಿಯವರೆಗೆ) ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಕೆಳಕಂಡಂತೆ ನಿರ್ದೇಶಕರು ಮತ್ತು ಡೀನ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಈ ಕಚೇರಿಯಲ್ಲಿ ಹಮ್ಮಿಕೊಂಡಿದ್ದು, ಆಸಕ್ತರು ನೇರ ಸಂದರ್ಶನಕ್ಕೆ ಹಾಜರಾಗಬಹುದು.

    ಹುದ್ದೆ : ಸೀನಿಯರ್ ರೆಸಿಡೆಂಟ್ಸ್ ( ಮೆಡಿಸಿನ್ )
    ಸೀನಿಯರ್ ರೆಸಿಡೆಂಟ್ಸ್ ( ಪ್ಲುಮೋ)
    ಸೀನಿಯರ್ ರೆಸಿಡೆಂಟ್ಸ್ ( ಅನಸ್ತೇಶಿಯ)
    ಜ್ಯೂನಿಯರ್ ರೆಸಿಡೆಂಟ್ಸ್
    ನರ್ಸಿಂಗ್ ಆಫೀಸರ್ಸ್

    ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಂದರ್ಶನದ ಮೇಲೆ ಮೂಲ ದಾಖಲೆಗಳನ್ನು ಮತ್ತು ಛಾಯಾ ಪ್ರತಿಗಳನ್ನು ಸಲ್ಲಿಸುವುದು.

    ಈ ನೇಮಕಾತಿಯು ತಾತ್ಕಾಲಿಕವಾಗಿದ್ದು ಗುತ್ತಿಗೆ ಆಧಾರದ ಮೇಲೆ ನಡೆಯಲಿದ್ದು, ಖಾಯಂ ನೌಕರಿಯಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ದೂರವಾಣಿ 0821-2520512 ಗೆ ಸಂಪರ್ಕಿಸಿ.

  • BECIL : 567 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

    BECIL : 567 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

    ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ದಿನಾಂಕ 24-05-2021 ಕೊನೆಯ ದಿನಾಂಕ ವಾಗಿದ್ದು ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ:

    ಹುದ್ದೆ : ತನಿಖಾಧಿಕಾರಿ – 350 ಹುದ್ದೆಗಳು
    ಮೇಲ್ವಿಚಾರಕರು – 145 ಹುದ್ದೆಗಳು
    ಕಿರಿಯ ಡೊಮೇನ್ ತಜ್ಞರು -25 ಹುದ್ದೆಗಳು
    ಹಿರಿಯ ಡೊಮೇನ್ ತಜ್ಞರು -19 ಹುದ್ದೆಗಳು
    ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ( ಎಂಟಿಎಸ್)-16 ಹುದ್ದೆಗಳು ಸಬ್ಜೆಕ್ಟ್
    ಮ್ಯಾಟರ್ ಎಕ್ಸ್ ಪರ್ಟ್ (ಎಸ್ ಎಂಇ) -05 ಹುದ್ದೆಗಳು
    ಯುವ ವೃತ್ತಿಪರರು – 05 ಹುದ್ದೆಗಳು
    ಸಿಸ್ಟಮ್ ಅನಾಲಿಸಿಸ್ -02 ಹುದ್ದೆಗಳು

    ವಿದ್ಯಾರ್ಹತೆ : ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಮೆಟ್ರಿಕ್ಯುಲೇಷನ್,ಎಂಸಿಎ/ಎಂಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

    ವಯೋಮಿತಿ : ಕನಿಷ್ಠ 40 ರಿಂದ 64 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15,000/- ರಿಂದ ರೂ. 80,000/- ರವರೆಗೆ ವೇತನವಿರುತ್ತದೆ.

    ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

    ಅರ್ಜಿದಾರರು ರೂ.955/- ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಅಂಗವಿಕಲ/ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು ರೂ.670/- ನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • NABARD : ವಿವಿಧ ಹುದ್ದೆ

    NABARD : ವಿವಿಧ ಹುದ್ದೆ

    ನಬಾರ್ಡ್ ಕನ್ಸಲ್ಟೆನ್ಸಿ ಸರ್ವೀಸಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಹಿರಿಯ ಕನ್ಸಲ್ಟೆಂಟ್, ಕಿರಿಯ ಕನ್ಸಲ್ಟೆಂಟ್

    ಹುದ್ದೆ ಸಂಖ್ಯೆ : 20

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-05-2021

    ಹುದ್ದೆ ಸ್ಥಳ : ಆಯ್ಕೆಯಾದ ಅಭ್ಯರ್ಥಿಗಳು ಮುಂಬೈ, ಬೆಂಗಳೂರು ಮತ್ತು ಚೆನ್ನೈ ನಲ್ಲಿ ಕೆಲಸವಿರುತ್ತದೆ.

    ವಿದ್ಯಾರ್ಹತೆ : ಹಿರಿಯ ಕನ್ಸಲ್ಟೆಂಟ್ ಹುದ್ದೆಗೆ ಎಂಬಿಎ/ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ಈ ಹುದ್ದೆಗೆ 40 ರಿಂದ 50 ವರ್ಷಗಳು ನಿಗದಿಪಡಿಸಲಾಗಿದೆ. ಕಿರಿಯ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಎ/ ಪದವಿ ವಿದ್ಯಾರ್ಹತೆ ಮಾಡಿರಬೇಕು. ವಯೋಮಿತಿ 25-35 ವರ್ಷಗಳು.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ವೇತನ : ಹಿರಿಯ ಕನ್ಸಲ್ಟೆಂಟ್ ಹುದ್ದೆಗೆ ರೂ.1,50,000/- ಮತ್ತು ಕಿರಿಯ ಕನ್ಸಲ್ಟೆಂಟ್ ಹುದ್ದೆಗೆ ರೂ.40,000/- ವೇತನವನ್ನು ನಿಗದ ಪಡಿಸಲಾಗಿದೆ.

    ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪ್ರತಿಯನ್ನು ಅಪ್ ಲೋಡ್ ಮಾಡಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಪಶ್ಚಿಮ ರೈಲ್ವೆಯಲ್ಲಿ ಭರ್ಜರಿ ಉದ್ಯೋಗವಕಾಶ :    3591 ಹುದ್ದೆ : ಆಸಕ್ತರು ಅರ್ಜಿ ಸಲ್ಲಿಸಿ

    ಪಶ್ಚಿಮ ರೈಲ್ವೆಯಲ್ಲಿ ಭರ್ಜರಿ ಉದ್ಯೋಗವಕಾಶ : 3591 ಹುದ್ದೆ : ಆಸಕ್ತರು ಅರ್ಜಿ ಸಲ್ಲಿಸಿ

    ಮುಂಬೈ ಪಶ್ಚಿಮ ರೈಲ್ವೆಯ ನೇಮಕಾತಿ ಮಂಡಳಿಯ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತರು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

    ಹುದ್ದೆ : ಅಪ್ರೆಂಟಿಸ್ ಟ್ರೈನಿ

    ಒಟ್ಟು ಹುದ್ದೆ ಸಂಖ್ಯೆ :3591

    ವಿದ್ಯಾರ್ಹತೆ : ಮೆಟ್ರಿಕ್ಯುಲೇಷನ್ ಜೊತೆಗೆ ಎನ್ ಸಿವಿಟಿ / ಎಸ್ ಸಿವಿಟಿ ಐಟಿಐ ಸಂಬಂಧಿಸಿದ ಟ್ರೇಡ್ ನಲ್ಲಿ ಅರ್ಹತೆ ಹೊಂದಿರಬೇಕು.

    ವಯೋಮಿತಿ : ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷ ವಯೋಮಿತಿಯನ್ನು ಅಭ್ಯರ್ಥಿಗಳು ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 25-05-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-06-2021

    ಅರ್ಜಿ ಶುಲ್ಕ : ಸಾಮಾನ್ಯ ಒಬಿಸಿ ಅಭ್ಯರ್ಥಿಗಳಿಗೆ ರೂ.100/-, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಮಹಿಳಾ ಅಭ್ಯರ್ಥಿಗಳು / ಪಿಡಬ್ಲ್ಯುಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.8000 ರಿಂದ ರೂ. 16,000/- ವೇತನ ನಿಗದಿಪಡಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • TRAI : ಹುದ್ದೆಗಳ ನೇಮಕ

    TRAI : ಹುದ್ದೆಗಳ ನೇಮಕ

    ಭಾರತೀಯ ದೂರಸಂವೇದಿ ನಿಯಂತ್ರಣಾ ಪ್ರಾಧಿಕಾರ ( TRAI) ( ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ) ಬೆಂಗಳೂರಿನ ಇದರ ಪ್ರಾದೇಶಿಕ ಕಚೇರಿಯಲ್ಲಿ ‌ನಿಯೋಜನೆಯ ಮೇರೆಗೆ ವಿದೇಶಿ ಸೇವಾ ಕರಾರುಗಳನ್ವಯ ದಿನಾಂಕ 29 ನೇ ಎಪ್ರಿಲ್, 2021 ರಂದು ಈವನ್ ಸಂಖ್ಯೆ ಖಾಲಿ ಹುದ್ದೆ ಆದೇಶದಡಿ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಟಿಆರ್ ಎಐ, ನವದೆಹಲಿ ಇವರು ಉಲ್ಲೇಖವನ್ನು ಕರೆದಿದ್ದಾರೆ.

    ಹುದ್ದೆ : ಜಂಟಿ ಸಲಹೆಗಾರ/ ಉಪ ಸಲಹೆಗಾರ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-06-2021

    ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರ ಮತ್ತು ಅರ್ಜಿ ನಮೂನೆಯನ್ನು ಟಿಆರ್ ಎಐ ವೆಬ್ಸೈಟ್ www.trai.gov.in ನಿಂದ ಪಡೆಯಬಹುದು.