Blog

  • ರೈಲು ಗಾಲಿ ಕಾರ್ಖಾನೆ ಬೆಂಗಳೂರು : ಉದ್ಯೋಗವಕಾಶ

    ರೈಲು ಗಾಲಿ ಕಾರ್ಖಾನೆ ಬೆಂಗಳೂರು : ಉದ್ಯೋಗವಕಾಶ

    ರೈಲು ಗಾಲಿ ಕಾರ್ಖಾನೆ, ಬೆಂಗಳೂರು ಇಲ್ಲಿನ ರೈಲ್ವೆ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ಕೋವಿಡ್ -19 ರೋಗವನ್ನು ತಡೆಗಟ್ಟಲು ಹಾಗೂ ಕೋವಿಡ್ ತುರ್ತು ತಪಾಸಣೆ ಕೇಂದ್ರಕ್ಕಾಗಿ (ಐಸಿಯು) ಗುತ್ತಿಗೆ ಆಧಾರದ ಮೇಲೆ ಕೆಳಗೆ ತಿಳಿಸಲಾದ ಆಲೋಪಥಿಕ್ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಇಚ್ಛಿಸಿದೆ.

    ಹುದ್ದೆ : ಐಸಿಯುಗಾಗಿ ವಿಶಿಷ್ಟ ತಜ್ಞರು / ಇಂಟೆನ್ಸಿವಿಸ್ಟ್ಸ್ – 04
    ಗುತ್ತಿಗೆ ಆಧಾರದ ವೈದ್ಯಕೀಯ ವೃತ್ತಿಪರರು -01

    ಸಂದರ್ಶನದ ಸ್ಥಳ ; ತಾಂತ್ರಿಕ ತರಬೇತಿ ಕೇಂದ್ರ, ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು – 560064

    ಸಂದರ್ಶನದ ದಿನಾಂಕ ಹಾಗೂ ಸಮಯ : 28-05-2021 ರಂದು 10 ಗಂಟೆಗೆ

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.rwf.indianrailways.gov.in ಗೆ ಭೇಟಿ ನೀಡುವುದು.

  • DKMUL : 80 ಹುದ್ದೆಗಳ ಅರ್ಜಿ ಅವಧಿ ವಿಸ್ತರಣೆ

    DKMUL : 80 ಹುದ್ದೆಗಳ ಅರ್ಜಿ ಅವಧಿ ವಿಸ್ತರಣೆ

    ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 80 ಹುದ್ದೆಗಳನ್ನು ನೇರನೇಮಕಾತಿ ಮಾಡುವ ಸಂಬಂಧ ದಿನಾಂಕ 26-04-2021 ರ ದಿನಪತ್ರಿಕೆಗಳಲ್ಲಿ ಸಂಕ್ಷಿಪ್ತ ನೇಮಕಾತಿ ಪತ್ರಿಕಾ ಪ್ರಕಟಣೆಯನ್ನು ಪ್ರಕಟಿಸಿತ್ತು. ಕೋವಿಡ್-19, ಎರಡನೇ ಅಲೆಯನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರವು ವಿಧಿಸಿರುವ ಕಠಿಣ ನಿರ್ಬಂಧಗಳು ಮತ್ತು ಲಾಕ್ ಡೌನ್ ಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅನಾನುಕೂಲವಾಗಿರುವುದರಿಂದ 80 ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು 29-06-2021 ರವರೆಗೆ ವಿಸ್ತರಿಸಲಾಗಿದೆ.

    ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-06-2021
    ಆನ್ಲೈನ್ ಅರ್ಜಿಯ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 30-06-2021 ಸಂಜೆ 5-30 ರವರೆಗೆ.

    ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಅರೆವೈದ್ಯಕೀಯ ಹುದ್ದೆಗಳ ನೇಮಕ

    ಅರೆವೈದ್ಯಕೀಯ ಹುದ್ದೆಗಳ ನೇಮಕ

    ಜಿಲ್ಲಾ ಕೌಶಲ್ಯಾಭಿವೃದ್ಧಿ ಮಿಷನ್ ಹಾಗೂ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಕೊರೊನಾ ನಿಯಂತ್ರಿಸಲು ಹೆಚ್ಚುವರಿ ಅರೆ ವೈದ್ಯಕೀಯ ಸಿಬ್ಬಂದಿ ಅಗತ್ಯವಿರುವ ಹಿನ್ನೆಲೆಯಲ್ಲಿ ಆಸಕ್ತರಿಗೆ ತರಬೇತಿಯನ್ನು ನೀಡಲಾಗುತ್ತದೆ. ಒಂದು ತಿಂಗಳ ತರಬೇತಿ ನೀಡಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಅನ್ ಜಾಬ್ ತಾತ್ಕಾಲಿಕ ಸೇವೆಗೆ ನೇಮಿಸಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ.

    ತುರ್ತು ವೈದ್ಯಕೀಯ ಸೇವೆಗಳ ಬೇಸಿಕ್, ಸಾಮಾನ್ಯ ಸೇವೆಗಳ ಸಹಾಯಕರು, ತುರ್ತು ವಿಭಾಗದಲ್ಲಿ ಕೇರ್, ವೈದ್ಯಕೀಯ ಉಪಕರಣಗಳ ತಾಂತ್ರಿಕ ಸಹಾಯಕರು, ಫ್ಲೆಬೋಟೋಮಿಸ್ಟ್, ವೈದ್ಯಕೀಯ ದಾಖಲೆಗಳ ನಿರ್ವಹಣೆ ಕುರಿತಂತೆ ತರಬೇತಿಯನ್ನು ನೀಡಲಾಗುತ್ತದೆ.
    ತರಬೇತಿ ಬಳಿಕ ಅಭ್ಯರ್ಥಿಗಳಿಗೆ ತಾತ್ಕಾಲಿಕ ಉದ್ಯೋಗ ನೀಡಲಾಗುವುದು.

    ಆಸಕ್ತರು ರಾಯಾಪುರದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಅಥವಾ [email protected] ವಿಳಾಸಕ್ಕೆ ವಿವರ ಕಳುಹಿಸಬಹುದು.
    ಆಸಕ್ತರು ಹೆಚ್ಚಿನ ಮಾಹಿತಿಗಾಗಿ ರಾಯಾಪುರದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಮೊಬೈಲ್ ಸಂಖ್ಯೆ 9845437056 ಗೆ ಸಂಪರ್ಕಿಸಬಹುದು.

    ಅಭ್ಯರ್ಥಿಗಳು ಈ ಲಿಂಕ್ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

  • VIMS ಬಳ್ಳಾರಿ : 118 ಹುದ್ದೆಗಳಿಗೆ ನೇರ ಸಂದರ್ಶನ

    VIMS ಬಳ್ಳಾರಿ : 118 ಹುದ್ದೆಗಳಿಗೆ ನೇರ ಸಂದರ್ಶನ

    ಜಿಲ್ಲಾಡಳಿತ ಬಳ್ಳಾರಿ ಇವರ ವತಿಯಿಂದ ಸರಕಾರದಿಂದ ಹುದ್ದೆಗಳು ಸೃಜನೆಯಾಗುವವರೆಗೆ ಡಿ.ಎಂ.ಎಫ್‌ ಯೋಜನೆಯ ನಿಧಿಯಿಂದ ಬಳ್ಳಾರಿಯ ವಿಮ್ಸ್‌ ಸಂಸ್ಥೆ ಅಧೀನದಲ್ಲಿರುವ ಕೋವಿಡ್-19 ಕೇಂದ್ರಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ಶುಶ್ರೂಷಕ ಸಿಬ್ಬಂದಿಗಳನ್ನು ಸಂಚಿತ ವೇತನ ರೂ. 2೦,೦೦೦/- ರಿಸ್ಕ್ ಅಲವೆನ್ಸ್‌ ರೂ.5೦೦೦/- ಗಳ ಆಧಾರದ ಮೇಲೆ 11 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಶೈಕ್ಷಣಿಕ ದಾಖಲಾತಿಗಳ ಮೂಲ ಪ್ರತಿ ಹಾಗೂ ಜೆರಾಕ್ಸ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗುವುದು.

    ನೇರ ಸಂದರ್ಶನ ದಿನಾಂಕ : 28-05-2021 ರಂದು 11:00 ಗಂಟೆಗೆ
    ಸಂದರ್ಶನ ನಡೆಯುವ ಸ್ಥಳ : ಜಿಲ್ಲಾಧಿಕಾರಿಗಳ ಆವರಣ, ಬಳ್ಳಾರಿ

    ಹುದ್ದೆ : ಶುಶ್ರೂಷಾಧಿಕಾರಿಗಳು – 118 ಹುದ್ದೆಗಳು

    ವಯೋಮಿತಿ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು. ಸಾಮಾನ್ಯ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.

    ನೇರ ಸಂದರ್ಶನಕ್ಕೆ ಹಾಜರಾಗಲು ಅರ್ಜಿಯನ್ನು ವಿಮ್ಸ್ ಅಂತರ್ಜಾಲದಲ್ಲಿ www.vimsbellay.org.in ಡೌನ್‌ಲೋಡ್ ಮಾಡಿಕೊಂಡು ಶೈಕ್ಷಣಿಕ ದಾಖಲಾತಿಗಳೊಂದಿಗೆ ಅಭ್ಯರ್ಥಿಯು ನೇರ ಸಂದರ್ಶನಕ್ಕೆ ಹಾಜರಾಗುವುದು,

  • ಕೆನರಾ ಬ್ಯಾಂಕ್ : ಹುದ್ದೆಗಳ ನೇಮಕ

    ಕೆನರಾ ಬ್ಯಾಂಕ್ : ಹುದ್ದೆಗಳ ನೇಮಕ

    ಕೆನರಾ ಬ್ಯಾಂಕ್, ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ.


    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 30,2021

    ಹುದ್ದೆ : ಚೀಫ್ ಡಿಜಿಟಲ್ ಅಧಿಕಾರಿ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಬಿ.ಇ/ಬಿ.ಟೆಕ್ ಮತ್ತು ಎಂಬಿಎ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ನಲ್ಲಿ ಸರ್ಟಿಫಿಕೇಶನ್ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಎಪ್ರಿಲ್ 30, 2021 ರ ಅನ್ವಯ ಕನಿಷ್ಠ 35 ರಿಂದ ಗರಿಷ್ಠ 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು ರೂ. 1180/- ರೂ ಮತ್ತು ಪ.ಜಾತಿ/ ಪ.ಪಂಗಡ/pwd/ ಮಹಿಳಾ ಅಭ್ಯರ್ಥಿಗಳಿಗೆ ರೂ. 118 ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಜೂನ್ 30, 2021 ರೊಳಗೆ ತಲುಪಿಸಬೇಕಾಗುತ್ತದೆ.

    ಕಚೇರಿ ವಿಳಾಸ : The Senior Manager, Canara Bank, Recruitment Cell, HR Wing, Head Office 112, JC Road, Bengaluru-560002

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ದಕ್ಷಿಣ ಕನ್ನಡ ನ್ಯಾಯಾಲಯ : 34 ಜವಾನ ಹುದ್ದೆಗಳ ಅರ್ಜಿ ಅವಧಿ ವಿಸ್ತರಣೆ

    ದಕ್ಷಿಣ ಕನ್ನಡ ನ್ಯಾಯಾಲಯ : 34 ಜವಾನ ಹುದ್ದೆಗಳ ಅರ್ಜಿ ಅವಧಿ ವಿಸ್ತರಣೆ

    ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ದಕ್ಷಿಯ ಕನ್ನಡ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇದ್ದ ಪಿಯೋನ್ (ಜವಾನ) ಹುದ್ದೆಗಳ ನೇಮಕಾತಿಗೆ ಕಳೆದ ತಿಂಗಳು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ ಮಾಡಿದೆ. ಈ ಹಿಂದೆ ಮೇ.25 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸುವ ನ್ಯಾಯಾಲಯವು ಜುಲೈ 03, 2021 ರವರೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಹಾಗೂ ಜುಲೈ 07 ರವರೆಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ