Blog

  • IDSG ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗವಕಾಶ

    IDSG ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗವಕಾಶ

    ಚಿಕ್ಕಮಗಳೂರು ಜಿಲ್ಲೆಯ IDSG ಸರಕಾರಿ ಕಾಲೇಜಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್, 01, 2021

    ವಿದ್ಯಾರ್ಹತೆ : ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು. ಜೊತೆಗೆ ಎನ್ ಇಟಿ, ಕೆಎಸ್ ಇಟಿ, ಪಿಹೆಚ್‌ಡಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

    ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ಅಗತ್ಯ ಮೂಲ‌ ದಾಖಲೆಗಳ ಜೊತೆಗೆ ಒಂದು ಸೆಟ್ ಜೆರಾಕ್ಸ್ ಕಾಪಿಗಳನ್ನು ತರಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆ 9448246988, 08262-22464 ಗೆ ಸಂಪರ್ಕಿಸಬಹುದು.

  • ಚಿಕ್ಕಬಳ್ಳಾಪುರದಲ್ಲಿ 45 ಹುದ್ದೆಗಳು : ಸಂಪೂರ್ಣ ವಿವರ ಇಲ್ಲಿದೆ

    ಚಿಕ್ಕಬಳ್ಳಾಪುರದಲ್ಲಿ 45 ಹುದ್ದೆಗಳು : ಸಂಪೂರ್ಣ ವಿವರ ಇಲ್ಲಿದೆ

    ಜಿಲ್ಲಾ ಆರೋಗ್ಯ ಮತ್ತು ಕುಟು ಕಲ್ಯಾಣ ಅಧಿಕಾರಿಗಳ ಕಚೇರಿ, ಚಿಕ್ಕಬಳ್ಳಾಪುರ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ವೈದ್ಯರು – 15
    ಶ್ರುಶ್ರೂಷಕರು – 15
    ಗ್ರೂಪ್ ಡಿ – 15

    ವೇತನ : ವೈದ್ಯರು ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಜ ರೂ.60,000/- ವೇತನವಿರುತ್ತದೆ. ಈ ಹುದ್ದೆಗೆ ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ತರಬೇತಿಯಲ್ಲಿ ತೇರ್ಗಡೆ ಹೊಂದಿರಬೇಕು. KMC ( ಕರ್ನಾಟಕ ಮೆಡಿಕಲ್ ಕೌನ್ಸಿಲ್) ನೋಂದಣಿ ಆಗಿರಬೇಕು.

    ಶುಶ್ರೂಷಕರು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ‌ ರೂ.25,000/- ವೇತನವಿರುತ್ತದೆ. ಈ ಹುದ್ದೆಗೆ ಬಿಎಸ್ಸಿ ನರ್ಸಿಂಗ್/ಜಿಎನ್ ಎಂ ತರಬೇತಿಯಲ್ಲಿ ತೇರ್ಗಡೆ/ ಪದವಿ ಹೊಂದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು. ವಯಸ್ಸು ಕನಿಷ್ಠ 18 ಆಗಿರಬೇಕು. ಗರಿಷ್ಠ 40 ಮೀರಿರಬಾರದು. ಗಣಕ ಯಂತ್ರ ತರಬೇತಿ ಪೂರೈಸಿರಬೇಕು.
    ಗ್ರೂಪ್ ಡಿ ಗೆ ಮಾಸಿಕ ರೂ.20,000/- ವೇತನವಿರುತ್ತದೆ. ಈ ಹುದ್ದೆಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ವಯಸ್ಸು ಕನಿಷ್ಠ 18 ರಿಂದ 40 ವರ್ಷ ಮೀರಿರಬಾರದು.

    ಕಚೇರಿಯಿಂದಲೇ ನೇರ ಸಂದರ್ಶನ ನಡೆಸಿ‌ ದಾಖಲೆಗಳನ್ನು ಪರಿಶೀಲಿಸಿ ಮಾನ್ಯ ಜಿಲ್ಲಾಧಿಕಾರಿಗಳ ಸಹಮತದೊಂದಿಗೆ ನೇಮಿಸಿಕೊಳ್ಳಲು ಸೂಚಿಸಲಾಗಿರುವ‌ ಮೇರೆಗೆ ಗುತ್ತಿಗೆ ಆಧಾರದಲ್ಲಿ ದಿನಾಂಕ 30-09-2021 ರ ಅವಧಿಯವರೆಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ದಿನಾಂಕ‌ 29-05-2021 ರಂದು ಸಂಜೆ 5:00 ಗಂಟೆ ಒಳಗೆ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಹಾಗೂ ದಿನಾಂಕ 30-05-2021 ರಂದು ಸಂಜೆ ಬೆಳಿಗ್ಗೆ 11.00 ಗಂಟೆಗೆ ಎಲ್ಲಾ ಅರ್ಜಿದಾರರು ಮೂಲ ದಾಖಲೆಗಳೊಂದಿಗೆ ಪರಿಶೀಲನೆಗಾಗಿ ಈ ಕಚೇರಿಗೆ ಹಾಜರಾಗತಕ್ಕದ್ದು.

    ಹೆಚ್ಚಿನ ಮಾಹಿತಿಗಾಗಿ ಈ‌ ಲಿಂಕ್ ಕ್ಲಿಕ್ ಮಾಡಿ

  • ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ : ನೇರ ಸಂದರ್ಶನಕ್ಕೆ ಆಹ್ವಾನ

    ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ : ನೇರ ಸಂದರ್ಶನಕ್ಕೆ ಆಹ್ವಾನ

    ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಇಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಪ್ರಾಧ್ಯಾಪಕರು – 06
    ಸಹ ಪ್ರಾಧ್ಯಾಪಕರು – 16
    ಸಹಾಯಕ ಪ್ರಾಧ್ಯಾಪಕರು -28
    ಸೀನಿಯರ್ ರೆಸಿಡೆಂಟ್ ( ಗುತ್ತಿಗೆ ಆಧಾರದ ಮೇಲೆ) -15
    ಟ್ಯೂಟರ್ ( ಗುತ್ತಿಗೆ ಆಧಾರದ ಮೇಲೆ) -16

    ಒಟ್ಟು ಹುದ್ದೆಗಳು : 81

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14-06-2021

    ನೇರ ನೇಮಕಾತಿ ಸಂದರ್ಶನ ದಿನಾಂಕ : 21-06-2021

    ಅರ್ಹತೆ, ವಯಸ್ಸು, ವಿದ್ಯಾರ್ಹತೆಗಳು, ಅನುಭವ ಮತ್ತು ಮೀಸಲಾತಿ ವಿವರಗಳು ಹಾಗೂ ಇತರೆ ವಿವರಗಳನ್ನು https://cimschikkamagaluru.Karnataka.gov.in ಅಥವಾ https://dme.karnataka.gov.in ನಲ್ಲಿ ಪಡೆಯಬಹು.

    ಭರ್ತಿ ಮಾಡಿದ ಅರ್ಜಿಗಳನ್ನು ‌ನಿರ್ದೇಶಕರು, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಅರಳುಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ, ಆಜಾದ್ ಪಾರ್ಕಯ ಹತ್ತಿರ, ಚಿಕ್ಕಮಗಳೂರು ‌- 577101 ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸತಕ್ಕದ್ದು.

    ನೇರ ನೇಮಕಾತಿ ಸಂದರ್ಶನ ವಿಳಾಸ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ( ಕೆ.ಎಸ್.ಒ.ಯು), ಪ್ರಾದೇಶಿಕ ಕೇಂದ್ರ, ಸಾಯಿಮಂದಿರ ರಸ್ತೆ, ಮಧುವನ ಬಡಾವಣೆ, ಚಿಕ್ಕಮಗಳೂರು – 577101.

    ಎಲ್ಲಾ ನೇಮಲಾತಿಗಳು ತಾತ್ಕಾಲಿಕವಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮತಿ ಅನುಮೋದನೆಯ ಷರತ್ತಿಗೆ‌‌ ಒಳಪಟ್ಟಿರುತ್ತದೆ.

  • LIC : ಅಸೋಸಿಯೇಟ್ ಹುದ್ದೆ

    LIC : ಅಸೋಸಿಯೇಟ್ ಹುದ್ದೆ

    ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈ ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಜೂನ್ 07, 2021 ಕೊನೆಯ ದಿನಾಂಕವಾಗಿದೆ. ಆಸಕ್ತರು ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ :ಸೋಶಿಯಲ್ ವರ್ಕ್ / ರೂರಲ್ ಡೆವಲಪ್ಮೆಂಟ್ ಮಾಸ್ಟರ್ ಡಿಗ್ರಿ ನ್ನು ಶೇ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ದೂರ ಶಿಕ್ಷಣ , ಕರೆಸ್ಪಾಂಡೆನ್ಸ್ ಡಿಗ್ರಿ ಓದಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

    ವಯೋಮಿತಿ : ದಿನಾಂಕ ೦1-೦1-2021 ಕ್ಕೆ ಕನಿಷ್ಠ 23 ವರ್ಷದಿಂದ 30 ವರ್ಷ ಗರಿಷ್ಠ ವಯೋಮಿತಿ ಮೀರದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

    ಕಾರ್ಯಾನುಭವ : ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಪ್ರಾಜೆಕ್ಟ್ ಸೈಕಲ್ ಮ್ಯಾನೇಜ್ಮೆಂಟ್, ಮಾನಿಟರಿಂಗ್ ಮತ್ತು ಇವ್ಯಾಲುಯೇಷನ್‌ ಆಫ್ ಪ್ರಾಜೆಕ್ಟ್ ಸಿಎಸ್‌ಆರ್‌ ಫೌಂಡೇಶನ್ ಮತ್ತು ಆರ್ಗನೈಸೇಷನ್‌ನಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.

    ಉದ್ಯೋಗ ಸ್ಥಳ : ದೆಹಲಿ ಕೋಲ್ಕತ್ತ, ಭೋಪಾಲ್ , ಮುಂಬೈ

    ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ ವಿಲಾಸ ಕ್ಕೆ ಭೇಟಿ ನೀಡಿ ಕೆರಿಯರ್ ವಿಭಾಗದಲ್ಲಿ ಸಬ್ಮಿಟ್ ರೆಸ್ಯುಮ್ ಎಂಬಲ್ಲಿ ಕ್ಲಿಕ್ ಮಾಡಿ ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • RDPR : ವಿವಿಧ ಹುದ್ದೆ

    RDPR : ವಿವಿಧ ಹುದ್ದೆ

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ‌ಜೀವನ ಮಿಷನ್ ( ಗ್ರಾಮೀಣ ) ಯೋಜನೆಯಡಿ ‌ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯತಿಗಳಲ್ಲು ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ. ಹುದ್ದೆಗಳ ವಿವರಗಳು, ವಿದ್ಯಾರ್ಹತೆ ‌ಹಾಗೂ ಕಾರ್ಯಾನುಭವದ‌‌ ವಿವರಗಳನ್ನು ‌ಕೆಳಕಂಡಂತೆ ನೀಡಲಾಗಿದೆ.

    ಕೇಂದ್ರ ಕಚೇರಿ :

    ಕಿರಿಯ ಸಮಾಲೋಚಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ಗ್ರಾಜ್ಯುಯೇಶನ್ ಇನ್ ಸಿವಿಲ್ ಇಂಜಿನಿಯರಿಂಗ್ ಮಾಡಿರಬೇಕು. ಈ ಹುದ್ದೆಗೆ ಮಾಸಿಕ ರೂ.60,000/- ಮತ್ತು ರೂ. 15,000/- ರವರೆಗೆ ವೇತನವಿರುತ್ತದೆ.

    ಪ್ರಾನೌನ್ಸ್ ಮೆಂಟ್ ಕನ್ಸಲ್ಟೆಂಟ್ – ಹುದ್ದೆಗೆ ಅರ್ಜಿ‌ ಸಲ್ಲಿಸುವವರು ಪೋಸ್ಟ್ ಗ್ರಾಜ್ಯುಯೇಶನ್ ಇನ್ ಕಾಮರ್ಸ್ / ಮ್ಯಾನೇಜ್ಮೆಂಟ್ ಅಥವಾ ಗ್ರಾಜ್ಯುಯೇಶನ್ ಇನ್ ಇಂಜಿನಿಯರಿಂಗ್ ಮಾಡಿರಬೇಕು. ಈ ಹುದ್ದೆಗೆ ರೂ.65,000/- ರಿಂದ ರೂ. 1,00,000/- ವರೆಗೆ ವೇತನವಿರುತ್ತದೆ.

    ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆ : ಗ್ರಾಜ್ಯುಯೇಶನ್ ಇನ್ ಎನ್ವೆರ್ಮೆಂಟಲ್ ಇಂಜಿನಿಯರಿಂಗ್ / ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಹತೆಯನ್ನು ಮಾಡಿರಬೇಕು. ಈ ಹುದ್ದೆಗೆ ರೂ.1,00,000/- ರಿಂದ ರೂ. 1,20,000/- ರವರೆಗೆ ವೇತನ ನಿಗದಿಪಡಿಸಲಾಗಿದೆ.

    ಜಿಲ್ಲಾ ಮಟ್ಟದಲ್ಲಿ – ಜಲ ಜೀವನ ಮಿಷನ್

    ಭೂ ವಿಜ್ಞಾನಿ – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೋಸ್ಟ್ ಗ್ರಾಜ್ಯುಯೇಶನ್ ಡಿಗ್ರಿ ಇನ್ ಜಿಯಾಲಜಿಯನ್ನು ಅಂಗೀಕೃತ ಯುನಿವರ್ಸಿಟಿಯಿಂದ ಪಡೆದುಕೊಂಡಿರಬೇಕು. ಈ ಹುದ್ದೆಗೆ ಮಾಸಿಕ ರೂ.30,000/- ರಿಂದ ರೂ.35,000/- ರವರೆಗೆ ವೇತನವಿರುತ್ತದೆ.

    ಜಿಲ್ಲಾ ಪಂಚಾಯತಿ ಕಚೇರಿ – ಸ್ವಚ್ಛ ಭಾರತ್ ಮಿಷನ್ ( ಗ್ರಾಮೀಣ) & ಜಲಜೀವನ ಮಿಷನ್

    ಮಾಹಿತಿ ಶಿಕ್ಷಣ ಹಾಗೂ ಸಂವಹನ ಸಮಾಲೋಚಕರು : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ಯುನಿವರ್ಸಿಟಿಯಿಂದ ಎಂ.ಸಿ.ಎ/ ಸ್ಟಾಟಿಸ್ಟಿಕ್ಸ್. ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್/ ಬಿ.ಇ.ಕಂಪ್ಯೂಟರ್ ಸೈನ್ಸ್ ಪಡೆದುಕೊಂಡಿರಬೇಕು. ಈ ಹುದ್ದೆಗೆ ಮಾಸಿಕ ರೂ.22,000/- ರಿಂದ ರೂ.25,000/- ರವರೆಗೆ ವೇತನವಿರುತ್ತದೆ.

    ಗುತ್ತಿಗೆಯ ಅಥವಾ ಹೊರಗುತ್ತಿಗೆ ಅವಧಿ : ಮೇಲಿನ ಹುದ್ದೆ ಸಂಪೂರ್ಣವಾಗಿ ತಾತ್ಕಾಲಿಕ ಹುದ್ದೆಯಾಗಿದ್ದು, ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು.

    ವಯೋಮಿತಿ : ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷಗಳು ಮೀರಿರಬಾರದು.

    ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಸಾಮರ್ಥ್ಯಗಳು, ರೆಸ್ಯೂಮ್ ಹಾಗೂ ಅರ್ಜಿ ಜೊತೆಗೆ “ನಾನು ಈ ಹುದ್ದೆಗೆ ಯಾವ ರೀತಿ ಸೂಕ್ತವಾಗಿದ್ದೇನೆ” ಎಂಬುದರ ಬಗ್ಗೆ ಒಂದು ಪುಟದಲ್ಲಿ ಟಿಪ್ಪಣಿ ಬರೆದು ಅರ್ಜಿಯನ್ನು ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆ.ಹೆಚ್.ಬಿ. ಕಟ್ಟಡ, ಕಾವೇರಿ ಭವನ, ಕೆ‌.ಜಿ.ರಸ್ತೆ ಬೆಂಗಳೂರು – 560009

    ಸ್ನಾತಕ/ ಸ್ನಾತಕೋತ್ತರ ಪದವಿಯನ್ನು ದೂರಶಿಕ್ಷಣ ಮುಖಾಂತರ ಪಡೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

    ಕಿರುಪಟ್ಟಿ ಮಾಡಿದ ಅಭ್ಯರ್ಥಿಗಳಿಗೆ ಮಾತ್ರ ದೂರವಾಣಿ ಮುಖಾಂತರ ತಿಳಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಕೇಂದ್ರ ಕಚೇರಿ ಹಾಗೂ ಆಯಾ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ವಿಡಿಯೋ ಸಂವಾದದ ಮೂಲಕ ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಹಾಜರಾಗುವುದು. ಹಾಗೂ ಈ ಸಂದರ್ಭದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಪರೀಕ್ಷೆಗೆ ಹಾಜರಾಗುವುದು.

  • SDUAHER : 38 ಟೀಚಿಂಗ್ ಸ್ಟಾಫ್ ಹುದ್ದೆ

    SDUAHER : 38 ಟೀಚಿಂಗ್ ಸ್ಟಾಫ್ ಹುದ್ದೆ

    ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಟೀಚಿಂಗ್ ಸ್ಟಾಫ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಒಟ್ಟು ಹುದ್ದೆ : 38

    ಹುದ್ದೆ ಸ್ಥಳ : ಆಯ್ಕೆಯಾದ ಅಭ್ಯರ್ಥಿಗಳು ಕೋಲಾರದಲ್ಲಿ ಕೆಲಸ ಮಾಡಬೇಕಿದೆ.

    ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 40,000/- ರಿಂದ ರೂ.1,54,844 ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು 20 ಜೂನ್,2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆಗಳ ವಿವರ : ಫ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಸೀನಿಯರ್ ರೆಸಿಡೆಂಟ್, ಜ್ಯಯ ರೆಸಿಡೆಂಟ್ ಹಾಗೂ ಟ್ಯೂಟರ್ ಹುದ್ದೆಗಳನ್ನು ಭರ್ತಿ‌ ಮಾಡಲಾಗುತ್ತಿದೆ.

    ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ಮತ್ತು ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ.

    ಅರ್ಜಿ ಸಲ್ಲಿಸುವ ವಿಳಾಸ : Office Of the human resources management, SDUAHER, Tamaka, Kolar-563103